ಬೆಂಗಳೂರು ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆ: ಸಂಚಾರ ಆಯುಕ್ತರ ಐದು ಅಂಶಗಳ ಯೋಜನೆ!

ಹೊರ ವರ್ತುಲ ರಸ್ತೆಯಲ್ಲಿ (ORR) ಸಂಚಾರ ಸುಗಮಗೊಳಿಸುವ ಪ್ರಯತ್ನದಲ್ಲಿ ವಿಶೇಷ ಆಯುಕ್ತ (ಸಂಚಾರ) ಎಂಎ ಸಲೀಂ ಅವರು ಐದು ಅಂಶಗಳ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ)
ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ)

ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿ (ORR) ಸಂಚಾರ ಸುಗಮಗೊಳಿಸುವ ಪ್ರಯತ್ನದಲ್ಲಿ ವಿಶೇಷ ಆಯುಕ್ತ (ಸಂಚಾರ) ಎಂಎ ಸಲೀಂ ಅವರು ಐದು ಅಂಶಗಳ ಪರಿಹಾರವನ್ನು ಕಂಡುಕೊಂಡಿದ್ದಾರೆ.

ಎಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಔಟರ್ ರಿಂಗ್ ರೋಡ್ ಕಂಪನಿಗಳ ಸಂಘದೊಂದಿಗೆ (ORRCA) ಸಮಗ್ರ ಸಭೆಯನ್ನು ನಡೆಸಿದ್ದು, ಇದು ಕ್ರಿಯಾ ಯೋಜನೆಗೆ ಕಾರಣವಾಗಿದೆ.  ಸಲೀಂ ಅವರು ವೈಟ್‌ಫೀಲ್ಡ್ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅವರಿಗೆ ಈ ಯೋಜನೆಯನ್ನು ತಕ್ಷಣ ಜಾರಿಗೊಳಿಸುವಂತೆ ಸೂಚಿಸಿದ್ದು, ಡಿಸೆಂಬರ್ 6 ರಂದು ಪರಿಶೀಲನೆ ನಡೆಸಲಾಗುವುದು.

ಸರ್ವೀಸ್ ರಸ್ತೆಯಲ್ಲಿ ಪಾರ್ಕಿಂಗ್ ಮತ್ತು ಒತ್ತುವರಿಯಾಗಿದ್ದು ಮಾರತ್ತಹಳ್ಳಿ ಸೇತುವೆ ಮತ್ತು ಯಮಲೂರು ನಡುವಿನ ಯು-ಟರ್ನ್‌ ತೆಗೆದುಕೊಳ್ಳಲು ಸುಮಾರು ಸಮಯ ಬೇಕಾಗುತ್ತದೆ. ಹೀಗಾಗಿ ಹೆಬ್ಬಾಳ ಮೇಲ್ಸೇತುವೆಯಿಂದ ಸಿಲ್ಕ್‌ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯನ್ನು ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.

ಔಟರ್ ರಿಂಗ್ ರೋಡ್ ನಲ್ಲಿರುವ ಸರ್ವಿಸ್ ರಸ್ತೆಯುದ್ದಕ್ಕೂ  ವ್ರಾಂಗ್  ಪಾರ್ಕಿಂಗ್ ತೆಗೆದುಹಾಕಲು ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದ್ದು,  ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ವೈಟ್ ಫೀಲ್ಡ್ ಸಂಚಾರ ವಿಭಾಗದ ಎಸಿಪಿ ಎಚ್ ಜೆ ತಿಪ್ಪೇಸ್ವಾಮಿ ಹೇಳಿದ್ದಾರೆ.

ತಳ್ಳುಗಾಡಿ ವ್ಯಾಪಾರಿಗಳಿಂದ ಸರ್ವೀಸ್ ರಸ್ತೆಯನ್ನು ತೆರವುಗೊಳಿಸಲಾಗಿದೆ  ಎಂದು ತಿಳಿಸಿದ್ದಾರೆ.  ಸರ್ವಿಸ್ ರಸ್ತೆಯ ಕೆಲವೆಡೆ ವಾಹನ ಸವಾರರು ಏಕಮುಖ ಮಾರ್ಗವನ್ನು ದ್ವಿಮುಖವಾಗಿ ಬಳಸುತ್ತಿರುವುದರಿಂದ ವಾಹನ ಸಂಚಾರ ನಿಧಾನವಾಗುತ್ತಿದೆ.  ಹೀಗಾಗಿ  ಏಕಮುಖ ಸಂಚಾರಕ್ಕೆ ಹಿಂತಿರುಗಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ, ಆದರೆ ಕೆಲವು ಹಂತಗಳಲ್ಲಿ ಯು-ಟರ್ನ್ ಗಳಿಂದಾಗಿ  ಸಂಚಾರ ಸಮಸ್ಯೆ ಉಂಟಾಗುತ್ತಿದ್ದು ಮುಂದಿನ ದಿನಗಳಲ್ಲಿ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com