ಮೂಲ ಪಟ್ಟಿಯಂತೆ ಪರಿಷ್ಕೃತ ಕೆಸಿಇಟಿ ಪಟ್ಟಿಯಲ್ಲಿ ಟಾಪ್ 500 ರ್ಯಾಂಕ್: ಸಚಿವ ಅಶ್ವಥ್ ನಾರಾಯಣ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2022 ರ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ, 2021 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಆರು ಶೇಕಡಾ ಅಂಕಗಳನ್ನು ಪುನರಾವರ್ತಿತರಿಗೆ(Repeaters) ಕಡಿತಗೊಳಿಸಲಾಗಿದೆ. ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2022 ರ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ, 2021 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಆರು ಶೇಕಡಾ ಅಂಕಗಳನ್ನು ಪುನರಾವರ್ತಿತರಿಗೆ(Repeaters) ಕಡಿತಗೊಳಿಸಲಾಗಿದೆ. ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ.

ಕಳೆದ ಜುಲೈ 30ರಂದು ಪ್ರಕಟಿಸಲಾದ ಟಾಪ್ 500 ರ್ಯಾಂಕಿಂಗ್‌ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ. ಎಲ್ಲಾ ಪುನರಾವರ್ತಿತರಲ್ಲಿ 14 ಜನರು ಮಾತ್ರ 500-1,000ದ ನಡುವೆ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ಸುಮಾರು 2,063 ವಿದ್ಯಾರ್ಥಿಗಳು 501 ಮತ್ತು 10,000ದ ನಡುವೆ ಮತ್ತು 22,022 ವಿದ್ಯಾರ್ಥಿಗಳು 10,001 ರಿಂದ 1 ಲಕ್ಷದ ನಡುವೆ ಇದ್ದಾರೆ.

2021 ರ ಪುನರಾವರ್ತಿತರು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಪರೀಕ್ಷೆಯನ್ನು ಬರೆಯದೆ ಉತ್ತೀರ್ಣರಾಗಿದ್ದರು. ನಂತರ, ಅವರು ತಮ್ಮ ದ್ವಿತೀಯ ಪಿಯು ಅಂಕಗಳ ಆಧಾರದ ಮೇಲೆ ವೃತ್ತಿಪರ ಕೋರ್ಸ್‌ಗಳಿಗೆ ಸೇರಿಕೊಂಡರು. ಆ ವರ್ಷದ ಒಟ್ಟು 24,000 ವಿದ್ಯಾರ್ಥಿಗಳು 2022 ರಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು ಸಿಇಟಿ ಅಂಕವನ್ನು ಮೌಲ್ಯಮಾಪನ ಮಾಡಲು ಅವರ ಪಿಯುಸಿ ಅಂಕಗಳನ್ನು ಪರಿಗಣಿಸಲಾಗಿಲ್ಲ.

ಜುಲೈ 30 ರಂದು ಕೆಸಿಇಟಿ ಫಲಿತಾಂಶ ಪ್ರಕಟವಾಗಿತ್ತು. ಅದರಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪುನರಾವರ್ತಿತರಿಗೆ ಪರಿಗಣಿಸದ ಕಾರಣ ಪ್ರತಿಭಟನೆಗಳು ಭುಗಿಲೆದ್ದವು. ವಿದ್ಯಾರ್ಥಿಗಳು ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು (KEA) ಶ್ರೇಯಾಂಕವನ್ನು ಮರುಪರಿಶೀಲಿಸುವಂತೆ ಕೇಳಲಾಯಿತು. ಹೈಕೋರ್ಟ್‌ನ ತೀರ್ಪಿನ ಪ್ರಕಾರ, ಐಟಿ ಸಂಬಂಧಿತ ಶಾಖೆಗಳಲ್ಲಿ ಶೇಕಡಾ 10ರಷ್ಟು ಸೀಟುಗಳನ್ನು ಹೆಚ್ಚಿಸಬೇಕಾಗಿತ್ತು, 

ನಾಳೆಯಿಂದ ಕೌನ್ಸೆಲಿಂಗ್: 
ಅಕ್ಟೋಬರ್ 3 ರಂದು ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಅದೇ ದಿನ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಮತ್ತು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ತಿಳಿಸಿದ್ದಾರೆ. ಶನಿವಾರ ಬಿಡುಗಡೆಯಾದ ಪರಿಷ್ಕೃತ ಕೆಸಿಇಟಿ ಶ್ರೇಯಾಂಕ ಪಟ್ಟಿಗೆ ಸಂಬಂಧಿಸಿದಂತೆ, 2022 ರ ಹೊಸ ವಿದ್ಯಾರ್ಥಿಗಳು ಸರಾಸರಿ 4,000 ರಷ್ಟು ವ್ಯತ್ಯಾಸವನ್ನು ಕಂಡಿದ್ದಾರೆ ಎಂದು ಹೇಳಿದರು.

ಪರಿಷ್ಕೃತ ಪಟ್ಟಿಯ ಪ್ರಕಾರ, ಸಿಬಿಎಸ್‌ಇ ವಿದ್ಯಾರ್ಥಿ ತೇಜಸ್ ಪ್ರತಾಪ್ 490 ಮತ್ತು ಕೊನೆಯ ರ್ಯಾಂಕ್ ಅನ್ನು 1,74,351 ಪಿಯು ಬೋರ್ಡ್ ವಿದ್ಯಾರ್ಥಿ ಸಚಿನ್ ರಾಜ್ ಪಡೆದುಕೊಂಡಿದ್ದಾರೆ. ಕೆಸಿಇಟಿಗೆ ಹಾಜರಾದ 2 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 1,71,000 ಎಂಜಿನಿಯರಿಂಗ್‌ಗೆ ಅರ್ಹತೆ ಪಡೆದಿದ್ದು, 1,063 ಆರ್ಕಿಟೆಕ್ಚರ್ ಅರ್ಜಿಗಳಲ್ಲಿ 1,031 ರ್ಯಾಂಕ್‌ಗಳನ್ನು ನಿಗದಿಪಡಿಸಲಾಗಿದೆ. ಪಶುವೈದ್ಯಕೀಯ ಮತ್ತು ಫಾರ್ಮಸಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ಫಲಿತಾಂಶಗಳು ಅನ್ವಯವಾಗುವುದಿಲ್ಲ ಎಂದು ರಮ್ಯಾ ಹೇಳಿದರು, ಏಕೆಂದರೆ ರ್ಯಾಂಕ್‌ಗಳು ಕೆಸಿಇಟಿ ಅಂಕಗಳನ್ನು ಆಧರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com