social_icon

29 ವರ್ಷಗಳ ವೈಷಮ್ಯ, ದ್ವೇಷ ಮರೆತು ಒಂದಾದ ಲಿಂಗಾಯತರು-ದಲಿತರು: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕೃಪೆ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು(Bharat Jodo yatra) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ಮೈಸೂರಿನ ಬಳಿ ಭಾರತ್ ಜೋಡೋ ಯಾತ್ರೆ ವೇಳೆ ಮಳೆಯನ್ನು ಲೆಕ್ಕಿಸದೆ ರಾಹುಲ್ ಗಾಂಧಿಯವರು(Rahul Gandhi) ಒದ್ದೆಯಾಗಿಕೊಂಡು ಭಾಷಣ ಮುಂದುವರಿಸಿದ್ದು ಭಾರೀ ಸದ್ದು ಮಾಡುತ್ತಿದೆ. 

Published: 03rd October 2022 10:20 AM  |   Last Updated: 03rd October 2022 12:34 PM   |  A+A-


Congress MP Rahul Gandhi takes part in Shramdaan and puts his palm print on the wall of a government school, on the occasion of Gandhi Jayanti, in Badanavalu village of Nanjangud taluk, Mysuru distric

ನಂಜನಗೂಡು ತಲ್ಲೂಕಿನ ಬದನವಾಳಿನಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ರಾಹುಲ್ ಗಾಂಧಿ

The New Indian Express

ಬದನವಾಳು (ಮೈಸೂರು ಜಿಲ್ಲೆ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು(Bharat Jodo yatra) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ಮೈಸೂರಿನ ಬಳಿ ಭಾರತ್ ಜೋಡೋ ಯಾತ್ರೆ ವೇಳೆ ಮಳೆಯನ್ನು ಲೆಕ್ಕಿಸದೆ ರಾಹುಲ್ ಗಾಂಧಿಯವರು(Rahul Gandhi) ಒದ್ದೆಯಾಗಿಕೊಂಡು ಭಾಷಣ ಮುಂದುವರಿಸಿದ್ದು ಭಾರೀ ಸದ್ದು ಮಾಡುತ್ತಿದೆ. 

ಅಷ್ಟೇ ಅಲ್ಲದೆ ನಿನ್ನೆ ರಾಹುಲ್ ಗಾಂಧಿಯವರು ಯಾತ್ರೆಯ ಭಾಗವಾಗಿ ಹಾಗೂ ಗಾಂಧಿ ಜಯಂತಿ ಅಂಗವಾಗಿ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ದು ಅಪರೂಪದ ವಿದ್ಯಮಾನ ನಡೆದು ಸುದ್ದಿ ಮಾಡಿದೆ. 1990 ರ ದಶಕದ ಆರಂಭದಿಂದಲೂ ಈ ಗ್ರಾಮ ಜಾತಿ ಸಂಘರ್ಷಣೆ ಜೋರಾಗಿತ್ತು. ಜಾತಿ ಘರ್ಷಣೆಯಿಂದ ನಲುಗಿ ಹೋಗಿದ್ದ ಗ್ರಾಮದ ಲಿಂಗಾಯತ ಮತ್ತು ದಲಿತ ಸಮುದಾಯಗಳು ರಾಹುಲ್ ಗಾಂಧಿ ಭೇಟಿಯಿಂದ ಒಂದಾಗಿವೆ. 

ಹಲವು ವರ್ಷಗಳಿಂದ ಸಮುದಾಯಗಳ ನಡುವಿನ ದ್ವೇಷದಲ್ಲಿ ಇಲ್ಲಿ ಮೂವರು ಮೃತಪಟ್ಟಿದ್ದರು. ಇದೀಗ ಸಾಕಷ್ಟು ಸಾಮಾಜಿಕ ಸಾಮರಸ್ಯ ಉಂಟಾಗಿದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ. 

ಯಾತ್ರೆಯಿಂದ ಗ್ರಾಮ ಅಭಿವೃದ್ಧಿ: ಯಾತ್ರೆಯಿಂದಾಗಿ ಲಿಂಗಾಯತ ಬೀದಿಗಳು ಮತ್ತು ದಲಿತ ಕಾಲೋನಿಗಳನ್ನು ಸಂಪರ್ಕಿಸುವ ಬಳಕೆಯಾಗದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಮುದಾಯಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಬದನವಾಳು ಖಾದಿ ಗ್ರಾಮೋದ್ಯೋಗಕ್ಕೆ ರಾಹುಲ್ ಭೇಟಿಗೂ ಮುನ್ನ ಕೆಪಿಸಿಸಿ ನಾಯಕರು ಗಿಡಗಂಟಿಗಳನ್ನು ತೆರವುಗೊಳಿಸಿ, ನಿರ್ಲಕ್ಷಿಸಿರುವ ರಸ್ತೆಯನ್ನು ಇಕ್ಕೆಲಗಳಲ್ಲಿ ಕಸ, ಕಳೆಗಳನ್ನು ಕೀಳಿಸಿದ್ದಾರೆ. ಇಂಟರ್‌ಲಾಕ್ ಇಟ್ಟಿಗೆಗಳನ್ನು ಹಾಕಲು ನಿರ್ಧರಿಸಿ ‘ಭಾರತ್ ಜೋಡೋ ಯಾತ್ರಾ’ ರಸ್ತೆ ಎಂದು ನಾಮಕರಣ ಮಾಡಿದರು. ಕೆಲವು ಬಡವರ ಮನೆಗಳಿಗೆ ಬಣ್ಣ ಹಚ್ಚಲಾಗಿದೆ. 

2000ಕ್ಕೂ ಹೆಚ್ಚು ಕುಟುಂಬಗಳಿಗೆ ಸಹೋದರತ್ವದ ಸಂದೇಶ ಸಾರಿದ ರಾಹುಲ್ ಗಾಂಧಿ ಗ್ರಾಮ ಪ್ರವೇಶ ಐತಿಹಾಸಿಕ. ಅವರು ಮತ್ತು ಇತರ ಕಾಂಗ್ರೆಸ್ ಮುಖಂಡರು ಎರಡೂ ಸಮುದಾಯದ ಮಕ್ಕಳೊಂದಿಗೆ ರಸ್ತೆಯನ್ನು ಉದ್ಘಾಟಿಸಿದರು. ಲಿಂಗಾಯತ ಮತ್ತು ದಲಿತ ಪ್ರದೇಶಗಳಿಗೆ ಭೇಟಿ ನೀಡಿದ ರಾಹುಲ್, ಅಲ್ಲಿನ ಜನರೊಂದಿಗೆ ಬೆರೆತರು. ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚುವ ಶ್ರಮದಾನದಲ್ಲಿ ಪಾಲ್ಗೊಂಡರು.

ಗಾಂಧಿ ಜಯಂತಿಯ ಮುನ್ನಾದಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಾತ್ಕಾಲಿಕ ಭೋಜನಶಾಲೆಯಲ್ಲಿ ಉಳಿದುಕೊಂಡ ಕಾಂಗ್ರೆಸ್ ನಾಯಕರು ಗ್ರಾಮದ ಜನರಲ್ಲಿ ಪರಸ್ಪರ ವಿಶ್ವಾಸ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಮೂಲಕ ಲಿಂಗಾಯತ ಮತ್ತು ದಲಿತ ಸಮುದಾಯಗಳ ಸದಸ್ಯರು ಮತ್ತು ಗ್ರಾಮದ ಮುಖಂಡರೊಂದಿಗೆ ಮಧ್ಯಾಹ್ನದ ಊಟ ಮಾಡಿ ಕಾಂಗ್ರೆಸ್ ಮುಖಂಡರ ಮನ ಗೆದ್ದರು. ಬದನವಾಳು ಗ್ರಾಮದಲ್ಲಿ ವೀರಶೈವ – ದಲಿತ ಸಮುದಾಯದ ಜನರೊಂದಿಗೆ ಕುಳಿತು ಸಹಭೋಜನ (Lunch) ಮಾಡಿದರು. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳು ನಳನಳಿಸುತ್ತಿವೆ. 

ಆಗಿದ್ದೇನು?

1993ರಲ್ಲಿ ದೇವಸ್ಥಾನ ಲೋಕಾರ್ಪಣೆ ವಿಚಾರವಾಗಿ ವೀರಶೈವ ಹಾಗೂ ದಲಿತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಮೂವರು ದಲಿತರ ಹತ್ಯೆಯಾಗಿತ್ತು. ಈ ಘಟನೆ ಹಿನ್ನಲೆಯಲ್ಲಿ ಎರಡು ಸಮುದಾಯದ ನಡುವೆ ವೈಷಮ್ಯ ಮೂಡಿತ್ತು. ಆದರೆ ಜೋಡೋ ಯಾತ್ರೆಯ (Bharat Jodo Yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಹಭೋಜನ ನಡೆಸುವ ಮೂಲಕ ಇಪ್ಪತ್ತೊಂಬತ್ತು ವರ್ಷಗಳ ನಂತರ ಈ ಹಳೇ ವೈಷಮ್ಯವನ್ನು ಶಮನ ಮಾಡಿದ್ದಾರೆ.

ದಲಿತರು, ಹಿಂದುಳಿದ ವರ್ಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ 28 ಜನರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ , ಕೆ.ಸಿ ವೇಣುಗೋಪಾಲ್ ಮತ್ತಿತರ ನಾಯಕರ ಉಪಸ್ಥಿತರಿದ್ದರು. 

ರಾಹುಲ್ ಭೇಟಿಯಿಂದ ಸಂತಸವಾಗಿದೆ ಎಂದು ಗ್ರಾಮಸ್ಥರಾದ ಬಸವಣ್ಣ ಹೇಳುತ್ತಾರೆ. ಮಹಾತ್ಮ ಗಾಂಧಿ 1927 ಮತ್ತು 1932ರಲ್ಲಿ ದಲಿತ ಕಾಲೋನಿಗೆ ಭೇಟಿ ನೀಡಿದ್ದರು. ಖಾದಿ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಗಾಂಧಿ ಗ್ರಾಮಕ್ಕೆ ಭೇಟಿ ನೀಡಿದ್ದರು. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸರ್ಕಾರ ಅಂತಹ ಮಾರ್ಗಗಳ ಬಗ್ಗೆ ಯೋಚಿಸಬೇಕು ಎಂದು ಸ್ಥಳೀಯ ಶಿವ ಮೂರ್ತಿ ಹೇಳಿದರು.

ಅಹಿಂಸೆಯ ಹಾದಿ, ಸ್ವರಾಜ್ಯ
ಮಹಾತ್ಮ ಗಾಂಧಿ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ರಾಜ್ ವಿರುದ್ಧ ಹೋರಾಡಿದಂತೆಯೇ, ಅವರನ್ನು ಕೊಂದ ಸಿದ್ಧಾಂತದೊಂದಿಗೆ ಕಾಂಗ್ರೆಸ್ ಯುದ್ಧವನ್ನು ಪ್ರಾರಂಭಿಸಿದೆ. “1927 ರಲ್ಲಿ ಮಹಾತ್ಮ ಗಾಂಧಿಯವರು ಭೇಟಿ ನೀಡಿದ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಾವು ಅವರ 153 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ಭಾರತದ ಆ ಮಹಾನ್ ಪುತ್ರನನ್ನು ನೆನೆದು ನಮನ ಸಲ್ಲಿಸುತ್ತೇವೆ. ಭಾರತ ಜೋಡೋ ಯಾತ್ರೆಯ 25ನೇ ದಿನದ ಪಾದಯಾತ್ರೆಯಲ್ಲಿ ನಾವು ಅವರ ಅಹಿಂಸೆ, ಏಕತೆ, ಸಮಾನತೆ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುತ್ತಿರುವುದು ನಮ್ಮ ಸ್ಮರಣೆಯನ್ನು ಹೆಚ್ಚು ಕಟುವಾಗಿಸುತ್ತಿದೆ ಎಂದಿದ್ದಾರೆ. 

ಅಕ್ಟೋಬರ್ 6 ರಂದು ರ್ಯಾಲಿಯಲ್ಲಿ ಸೋನಿಯಾ ಭಾಗಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಕ್ಟೋಬರ್ 6 ರಂದು ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾತ್ರೆಯ ಕರ್ನಾಟಕ ಪ್ರವಾಸದಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. 

ವೈದ್ಯಕೀಯ ತಪಾಸಣೆಗಾಗಿ ವಿದೇಶದಲ್ಲಿದ್ದಾಗ ಆರಂಭವಾದ ಭಾರತ್ ಜೋಡೆ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸುತ್ತಿರುವುದು ಇದೇ ಮೊದಲು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಪರಿಗಣಿಸಿ ಈ ಯಾತ್ರೆ ನಿರ್ಣಾಯಕವಾಗಿದೆ.


Stay up to date on all the latest ರಾಜ್ಯ news
Poll
Rajasthan Chief Minister Ashok Gehlot and Congress leader Sachin Pilot ( File Photo | PTI)

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯವು ಈ ವರ್ಷ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಾನಿ ಮಾಡುತ್ತದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp