ವರ್ತೂರು ಕೆರೆಯಲ್ಲಿ ಮತ್ತೆ ನೊರೆಯ ಸಮಸ್ಯೆ: ಕೋಲಾರಕ್ಕೆ ತಲುಪಬೇಕಾದ ನೀರು ಚರಂಡಿ ಪಾಲು

ವಿಷ ನೊರೆ ಉಕ್ಕಿ ಹರಿದು ವರ್ತೂರು ಕೆರೆ ಆಗಾಗ ಸುದ್ದಿಯಾಗುತ್ತದೆ. ಇದೀಗ ಮತ್ತೆ ವರ್ತೂರು ಕೆರೆಯಲ್ಲಿ ನೊರೆ ಉಕ್ಕಿ ಬರುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಷ ನೊರೆ ಉಕ್ಕಿ ಹರಿದು ವರ್ತೂರು ಕೆರೆ ಆಗಾಗ ಸುದ್ದಿಯಾಗುತ್ತದೆ. ಇದೀಗ ಮತ್ತೆ ವರ್ತೂರು ಕೆರೆಯಲ್ಲಿ ನೊರೆ ಉಕ್ಕಿ ಬರುತ್ತಿದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸುತ್ತಮುತ್ತಲಿನ ನಿವಾಸಿಗಳು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಿಸಿದ ಸಮಿತಿಯ ಮಾಜಿ ಸದಸ್ಯರು ವರ್ತೂರು ಕೆರೆಯಲ್ಲಿ ಕಳೆದ ಎರಡು ತಿಂಗಳಿಂದ ಕಲುಷಿತ ನೀರು ಸಂಗ್ರಹವಾಗುವುದರೊಂದಿಗೆ ನೊರೆ ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಕೋರಮಂಗಲ-ಚಲ್ಲಘಟ್ಟ ಕಣಿವೆಯಲ್ಲಿ (KC valley) ಬಿಡಬ್ಲ್ಯುಎಸ್‌ಎಸ್‌ಬಿ ನೀರನ್ನು ಸಂಸ್ಕರಿಸುತ್ತಿಲ್ಲ. 600 ಎಂಎಲ್‌ಡಿ ಸಾಮರ್ಥ್ಯದಲ್ಲಿ 30-40 ಎಂಎಲ್‌ಡಿ ಮಾತ್ರ ಸಂಸ್ಕರಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ (MID) ಬೆಂಗಳೂರಿನಿಂದ ಕೋಲಾರ ಮತ್ತು ಇತರ ಜಿಲ್ಲೆಗಳಿಗೆ ನೀರನ್ನು ಪಂಪ್ ಮಾಡುತ್ತಿಲ್ಲ, ಬದಲಿಗೆ, ಸಂಸ್ಕರಿಸಿದ ಮತ್ತು ಸಂಸ್ಕರಿಸದ ಎರಡೂ ನೀರು ಮತ್ತೆ ನಾಲೆಗಳಿಗೆ ಹರಿಯುತ್ತಿದೆ. ವರ್ತೂರು ಕೆರೆಯಿಂದ ಶುದ್ಧೀಕರಿಸದ ಕೆಲವು ನೀರು ಕೆಳಭಾಗಕ್ಕೆ ಹರಿದು ಅಂತರ್ಜಲ ಕಲುಷಿತಗೊಳ್ಳಲು ಕಾರಣವಾಗಿದ್ದು, ಇದು ಕೋಲಾರ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಸಮಿತಿ ಸದಸ್ಯರು ಸಮಸ್ಯೆಯನ್ನು ಬಿಚ್ಚಿಡುತ್ತಿದ್ದಾರೆ.

ಸರ್ಕಾರವು ಕೋಲಾರದ 136 ಸೇರಿದಂತೆ 300 ಟ್ಯಾಂಕ್‌ಗಳನ್ನು ತುಂಬಿಸಲು ಬೆಂಗಳೂರಿನಿಂದ ವಾರ್ಷಿಕ 10 ಟಿಎಂಸಿ ಅಡಿ ನೀರನ್ನು ಪಂಪ್ ಮಾಡಲು 1,450 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ BWSSB ಅಧ್ಯಕ್ಷ ಎನ್ ಜಯರಾಮ್ ಸಮಿತಿಯ ಸದಸ್ಯರ ಆರೋಪಗಳನ್ನು ನಿರಾಕರಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ, ನೀರನ್ನು ಕೆಳಕ್ಕೆ ಪಂಪ್ ಮಾಡಲು ನಿರಾಕರಿಸಿದ ಕಾರಣ ನೀರನ್ನು ಅದರ ಪೂರ್ಣ ಸಾಮರ್ಥ್ಯಕ್ಕೆ ಸಂಸ್ಕರಿಸಲಾಗುತ್ತಿದೆ, ನಂತರ ಅದನ್ನು ಮಳೆನೀರಿನ ಚರಂಡಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಎಂಐಡಿ ಕಾರ್ಯದರ್ಶಿ ಸಿ ಮೃತ್ಯುಂಜಯ ಸ್ವಾಮಿ, ಭಾರಿ ಮಳೆಯಿಂದ ಕೆರೆಗಳು ತುಂಬಿರುವುದರಿಂದ ಕೋಲಾರಕ್ಕೆ ಸಂಸ್ಕರಿಸಿದ ನೀರು ಬಿಡುತ್ತಿಲ್ಲ. ಒಂದು ತಿಂಗಳಿನಿಂದ ಕೆಳಭಾಗದಲ್ಲಿ ನೀರು ಪಂಪ್ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ಇತರ ರಾಜ್ಯಗಳಿಗೆ ನೀರನ್ನು ಕೆಳಭಾಗದಲ್ಲಿ ಪಂಪ್ ಮಾಡಲು ಕರ್ನಾಟಕ ಸರ್ಕಾರ ಉತ್ಸುಕವಾಗಿಲ್ಲ. ಆದ್ದರಿಂದ, ಪೆನ್ನಾರ್ ನದಿಯ ಕೊನೆಯ ಬಿಂದುವಾದ ಮುಳಬಾಗಲಿನಲ್ಲಿ ಪಂಪಿಂಗ್ ಅನ್ನು ನಿಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com