ಸಮಿತಿ ರಚನೆಯಲ್ಲಿ ವಿಳಂಬ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಕರಿಛಾಯೆ

ಮುಂದಿನ ವರ್ಷ ಜನವರಿ 6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ...
ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)
ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)
Updated on

ಹಾವೇರಿ: ಮುಂದಿನ ವರ್ಷ ಜನವರಿ 6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಘೋಷಿಸಿದ್ದರೂ, ಇದುವರೆಗೂ ಯಾವುದೇ ಸಮಿತಿಗಳನ್ನು ರಚಿಸದಿರುವುದು ಸ್ಥಳೀಯ ಘಟಕಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಘೋಷಿಸಿದ ಮೂರನೇ ಪರಿಷ್ಕೃತ ದಿನಾಂಕ ಇದಾಗಿದೆ. ಆದರೆ ಸಮಿತಿ ರಚಿಸಲು ವಿಳಂಬ ಮಾಡುತ್ತಿರುವುದರಿಂದ ಹಾವೇರಿಯ ಕನ್ನಡಪರ ಸಂಘಟನೆಗಳು ಈ ಬಾರಿ ಘೋಷಿಸಿದ ದಿನಾಂಕಗಳಲ್ಲಿ ಸಮ್ಮೇಳನ ನಡೆಯುವುದೇ ಎಂಬ ಅನುಮಾನ ವ್ಯಕ್ತಪಡಿಸಿವೆ.

ಸಮ್ಮೇಳನ ಆಯೋಜನೆಗೆ ಮೊದಲೇ ರಚಿಸಬೇಕಿದ್ದ ಹಲವು ಸಮಿತಿಗಳನ್ನು ಇನ್ನೂ ರಚಿಸಿಲ್ಲ. ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಪ್ರಚಾರ ಸಮಿತಿಯ ಸಭೆ ನಡೆದಿತ್ತು. ಆದರೆ ಸಮ್ಮೇಳನವನ್ನು ನಿರಂತರವಾಗಿ ಮುಂದೂಡುತ್ತಿರುವುದರಿಂದ ಸಮ್ಮೇಳನದ ಮೇಲೆ ಕರಿಛಾಯೆ ಆವರಿಸಿದೆ.

ಇದೇ ಮೊದಲಲ್ಲ, ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿಳಂಬ ಅಥವಾ ದಿನಾಂಕ ಬದಲಾವಣೆಯಾಗುತ್ತಿದೆ. ಆಂತರಿಕ ಕಲಹದಿಂದ ಈ ಹಿಂದೆ ಎರಡು ಬಾರಿ ಕನ್ನಡ ಹಬ್ಬ ನಡೆಸುವ ಅವಕಾಶವನ್ನು ನಗರ ‘ಕಳೆದುಕೊಂಡಿದೆ’. 

ಸಾಂಕ್ರಾಮಿಕ ರೋಗ ಮತ್ತಿತರ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ನಡೆಯದಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಂದು ತಿಂಗಳಿಂದ ಇನ್ನೊಂದು ತಿಂಗಳಿಗೆ ಮುಂದೂಡುತ್ತಿರುವುದು ಸರ್ಕಾರದ ಗಂಭೀರತೆಯನ್ನು ತೋರಿಸುತ್ತದೆ. 

ಈ ಮಧ್ಯೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಸಮ್ಮೇಳನದ ಕುರಿತು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಸ್ಥಳೀಯ ಪರಿಷತ್ ಸದಸ್ಯರಿಗೆ ಸೂಚಿಸಿದ್ದಾರೆ. ಆದರೆ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಸಮ್ಮೇಳನದ ದಿನಾಂಕವನ್ನು ಮತ್ತೆ ಮುಂದೂಡಲು ಸರ್ಕಾರ ಬಯಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಾವೇರಿಯ ಹಿರಿಯ ಸಾಹಿತಿಯೊಬ್ಬರು ಹೇಳಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರು ಹಾವೇರಿಯವರೇ ಆಗಿರುವುದರಿಂದ ಅದ್ಧೂರಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಆದರೆ ಸಮ್ಮೇಳನ ನಡೆಸಲು ವಿಳಂಬ ಮಾಡಿರುವುದು ಮತ್ತು ಈ ಹಿಂದೆ ಘೋಷಿಸಿದ ದಿನಾಂಕಗಳನ್ನು ಪದೇಪದೆ ಬದಲಾಯಿಸಿರುವುದು ಪ್ರತಿಯೊಬ್ಬರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಇದು ಮುಂಬರುವ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಮತ್ತು ಕನ್ನಡ ಪ್ರೇಮಿಗಳಿಗೆ ಅವಮಾನ'' ಎಂದು ಲೇಖಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com