ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್
ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್

ಬೆಂಗಳೂರಿನ ಮಲ್ಲೇಶ್ವರ ಸರ್ಕಾರಿ ಶಾಲೆಯಲ್ಲಿ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಆರಂಭ: ಸಿಎಂ ಉದ್ಘಾಟನೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ಜನತೆಗೆ ಹತ್ತಿರವಾದರು, ಇದೀಗ ಅವರ ನಿಧನ ಬಳಿಕವೂ ಅವರ ಹೆಸರಿನಲ್ಲಿ ಅನೇಕ ಸಮಾಜಪರ, ಜನಪರ ಕೆಲಸಗಳು ನಡೆಯುತ್ತಿವೆ.
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ಜನತೆಗೆ ಹತ್ತಿರವಾದರು, ಇದೀಗ ಅವರ ನಿಧನ ಬಳಿಕವೂ ಅವರ ಹೆಸರಿನಲ್ಲಿ ಅನೇಕ ಸಮಾಜಪರ, ಜನಪರ ಕೆಲಸಗಳು ನಡೆಯುತ್ತಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರು ಇಂದು ಬೆಂಗಳೂರಿನ ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ವತಿಯಿಂದ ಸ್ಥಾಪಿಸಿರುವ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ನ್ನು (Puneeth Satellite Work station in Malleshwaram) ಉದ್ಘಾಟಿಸಿದರು. 

ಉದ್ಘಾಟನೆ ಬಳಿಕ ಅಪ್ಪು ಭಾವಚಿತ್ರಕ್ಕೆ ಸಚಿವ ಅಶ್ವಥ್ ನಾರಾಯಣ ಜೊತೆಗೂಡಿ ಪುಷ್ಪಾರ್ಪಣೆ ಮಾಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ‘ನಮ್ಮ ಮಲ್ಲೇಶ್ವರ’ ಎಂಬ ವೆಬ್ ಸೈಟ್ ಉದ್ಘಾಟಿಸಿದರು. ಮಲ್ಲೇಶ್ವರ ಸ್ಕೂಲ್ ಮಾಡೆಲ್ ಚಿಹ್ನೆ ಸಹ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಕೆಲಸ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದೆ. ಮಕ್ಕಳಿಗೆ ಲ್ಯಾಪ್ ಟ್ಯಾಪ್ ಕೊಡಲಾಗುತ್ತಿದೆ. ಮಕ್ಕಳ ಕಲಿಕೆಗೆ ಸ್ಮಾರ್ಟ್ ಕ್ಲಾಸ್ ಆಯೋಜನೆ ಮಾಡಲಾಗಿದೆ.

ಕಲಿಕೆಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಇಂದು ಮಾಡಿದ್ದೇವೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಈ ಶಿಕ್ಷಣ ಸಂಸ್ಥೆ ರೂಪಿಸುತ್ತದೆ. ಕೆವೈಸಿ ಕಾನ್ಸೆಪ್ಟ್ ಜಾರಿಗೆ ಮಾಡುತ್ತಿದ್ದೇವೆ. ಮಕ್ಕಳ ಶಿಕ್ಷಣದ ಬಗ್ಗೆ ಮಕ್ಕಳ ಪೋಷಕರಿಗೆ ತಿಳಿದುಕೊಳ್ಳುವ ಒಂದು ಅವಕಾಶ ಇದಾಗಿದೆ. ನಮ್ಮ ಸರ್ಕಾರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆ ಜಾರಿ ಮಾಡಿದ್ದೇವೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯೋಗ್ಯವಾದ ವ್ಯಕ್ತಿ ಪುನೀತ್. ಇವತ್ತು ಅವರ ಪುಣ್ಯ ಸ್ಮರಣೆಯ ದಿನ. ಪುನೀತ್ ಸದಾ ಪ್ರಯೋಗಾತ್ಮಕವಾಗಿದ್ದರು. ಸೃಜನಶೀಲವಾಗಿ ಹೊಸದನ್ನು ಹುಡುಕುತ್ತಿದ್ದರು. ಅವರ ಹೆಸರಿನಲ್ಲಿ ಸ್ಯಾಟಲೈಟ್ ಉದ್ಘಾಟನೆ ಮಾಡುವ ಮೂಲಕ ಅವರ ಕೀರ್ತಿಯನ್ನು ಆಕಾಶದ ಎತ್ತರಕೆ ತೆಗೆದುಕೊಂಡು ಹೋಗುವ ಕೆಲಸ ಮಲ್ಲೇಶ್ವರಂ ಸ್ಕೂಲ್ ಮಾಡ್ತಾ ಇದೆ ಎಂದರು.

ಮಕ್ಕಳಿಗೆ ಪ್ರಶ್ನೆ ಮಾಡಲು ಅವಕಾಶ ಕೊಡಬೇಕು. ಮಕ್ಕಳ ಉತ್ಸಾಹ ಹೆಚ್ಚಿಸಬೇಕು. ಟೀಚರ್ಸ್​​ಗೆ ಎಲ್ಲವೂ ಗೊತ್ತಿದೆ ಎಂದು ಹೇಳಲು ಆಗಲ್ಲ. ಅದರಲ್ಲಿ ತಪ್ಪೇನು ಇಲ್ಲ, ಆದರೆ ಮಕ್ಕಳಿಗೆ ಪ್ರಶ್ನೆ ಕೇಳಲು ಬಿಡಿ ಎನ್ನುತ್ತ  ಸಿಎಂ ಬೊಮ್ಮಾಯಿ ಮಕ್ಕಳಿಗೆ ಪಾಠ ಮಾಡಿದರು. ಮಕ್ಕಳು ತಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೆ ಹೇಳಬೇಕು. ಹಾಗೆ ಹೇಳಿದ್ರೆ ಮೆಮೊರಿಯಲ್ಲಿ ಉಳಿಯುತ್ತದೆ. ಇಲ್ಲ ಅಂದ್ರೆ ಮರೆತು ಹೋಗುತ್ತದೆ. ಹೇಳುವುದು ಬಹಳಷ್ಟು ಇದೆ. ಇನ್ನೂಂದು ಟೈಮ್ ಬರುತ್ತೇನೆ. ಬಂದು ಒನ್ ಅವರ್ ಪಾಠ ಮಾಡ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com