ವಿಧಾನಸಭೆಯಲ್ಲಿ ಪೌರಾಡಳಿತ ತಿದ್ದುಪಡಿ ಮಸೂದೆ ಅಂಗೀಕಾರ

ಗ್ರಾಮೀಣ ಭಾಗದ ಜನರು ಪಟ್ಟಣ ಮತ್ತು ದೇಶ ಯೋಜನಾ ಇಲಾಖೆಯಿಂದ ಕಟ್ಟಡಗಳ ನಕ್ಷೆ ಮಂಜೂರಾತಿ ಪಡೆಯಲು ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ)ಮಸೂದೆ 2022ಕ್ಕೆ ವಿಧಾನಸಭೆಯಲ್ಲಿ ನಿನ್ನೆ ಮಂಗಳವಾರ ಅನುಮೋದನೆ ನೀಡಲಾಯಿತು.
ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ತೀವ್ರ ಚರ್ಚೆ
ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ತೀವ್ರ ಚರ್ಚೆ

ಬೆಂಗಳೂರು: ಗ್ರಾಮೀಣ ಭಾಗದ ಜನರು ಪಟ್ಟಣ ಮತ್ತು ದೇಶ ಯೋಜನಾ ಇಲಾಖೆಯಿಂದ ಕಟ್ಟಡಗಳ ನಕ್ಷೆ ಮಂಜೂರಾತಿ ಪಡೆಯಲು ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ)ಮಸೂದೆ 2022ಕ್ಕೆ ವಿಧಾನಸಭೆಯಲ್ಲಿ ನಿನ್ನೆ ಮಂಗಳವಾರ ಅನುಮೋದನೆ ನೀಡಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಿ.ಮಧುಸ್ವಾಮಿ ನೇತೃತ್ವದ ಇ-ಖಾತಾ ಕುರಿತ ಸಂಪುಟ ಉಪಸಮಿತಿ, ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಕಟ್ಟಡ ಯೋಜನೆ ಮಂಜೂರಾತಿ ಪಡೆಯುವಲ್ಲಿ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ನಿರ್ಧರಿಸಿತ್ತು. 

ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಆಕ್ಟ್ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಭೂಮಿಯ ಅಭಿವೃದ್ಧಿಯ ನಿಯಂತ್ರಣವನ್ನು ನಿಗದಿಪಡಿಸುತ್ತದೆ. ಜನರ ಮಧ್ಯೆ ಜಗಳ ಹೋಗಲಾಡಿಸಲು, ತಿದ್ದುಪಡಿಯನ್ನು ತರಬೇಕಾಗಿತ್ತು. ಜನಸಂಖ್ಯೆಯ ಆಧಾರದ ಮೇಲೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಯಾದ ಗ್ರಾಮ ಪಂಚಾಯತಿಗಳಲ್ಲಿನ ಆಸ್ತಿಗಳನ್ನು ಮಸೂದೆಯು ಕ್ರಮಬದ್ಧಗೊಳಿಸುತ್ತದೆ.

ಆದರೆ ಮಸೂದೆಯು ಸರ್ಕಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ಗದ್ದಲವನ್ನು ಸೃಷ್ಟಿಸಿತು. ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ವಿಪಕ್ಷ ಉಪ ನಾಯಕ ಯುಟಿ ಖಾದರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು, ಮಸೂದೆಯು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಹಾಯ ಮಾಡುತ್ತದೆ, ಯಾವುದೇ ನಾಗರಿಕ ಸೌಕರ್ಯಗಳು ಅಥವಾ ರಸ್ತೆಗಳಿಲ್ಲದೆ ಅಕ್ರಮ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡುತ್ತದೆ. ಈ ನಿರ್ಧಾರವು ಜನರಿಗೆ ಸಹಾಯ ಮಾಡುವ ಬದಲು ರಾಜ್ಯಕ್ಕೆ ಹೆಚ್ಚು ಹಾನಿ ಮಾಡುತ್ತದೆ ಎಂದು ಹೇಳಿದರು. ಪಂಚಾಯಿತಿಗಳು ಮೌಲ್ಯಮಾಪನ ಮಾಡದ ಆಸ್ತಿಗಳನ್ನು ಪರಿವರ್ತಿಸಿ ಖಾತಾ ನೀಡಲು ಸರ್ಕಾರ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.

ಆರೋಪವನ್ನು ನಿರಾಕರಿಸಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜು, ಎಲ್ಲರೂ ಇದರ ಲಾಭ ಪಡೆಯಲು ಸಾಧ್ಯವಿಲ್ಲ ಎಂದರು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಇದು ಹಿಂದಿನಿಂದಲೂ ಇರುವ ಸಮಸ್ಯೆ. ಆಸ್ತಿಗಳನ್ನು ಕ್ರಮಬದ್ಧಗೊಳಿಸುವುದು ಒಂದು ಸಂಕೀರ್ಣವಾದ ಸಮಸ್ಯೆಯಾಗಿದ್ದು ಅದನ್ನು ಒಂದೊಂದಾಗಿ ಪರಿಹರಿಸಬೇಕಾಗಿದೆ. “ತಿದ್ದುಪಡಿ ಮೂಲಕ, ನಾವು ಖಾತಾಗಳನ್ನು ಹೊಂದಿರದ ಮಾಲೀಕರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ, ಅದು ಇಲ್ಲದೆ ಅವರು ಸಾಲಗಳನ್ನು ಪಡೆಯಲು ಅಥವಾ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಸ್ತಿಗಳ ಸಕ್ರಮೀಕರಣವು ನ್ಯಾಯಾಲಯದ ಮುಂದಿರುವ ಅಕ್ರಮ ಯೋಜನೆಯಾಗಿದೆ. ನಾವು ಈಗ ಮಾಡಿರುವುದು ಯೋಜನಾ ಅಧಿಕಾರಿಗಳ ವ್ಯಾಪ್ತಿಯ ಹೊರಗಿನ ಆಸ್ತಿಗಳನ್ನು ಉಲ್ಲೇಖಿಸುತ್ತದೆ ಎಂದು ವಿವರಿಸಿದರು. ಸರ್ಕಾರವು ಅಕ್ರಮ-ಸಕ್ರಮ ಯೋಜನೆಯಲ್ಲಿ ನ್ಯಾಯಾಲಯದಿಂದ ಪರಿಹಾರವನ್ನು ನಿರೀಕ್ಷಿಸುತ್ತಿದೆ ಎಂದರು. 

ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಕಾಯಿದೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com