ಬೆಂಗಳೂರು: ಗುಜರಿ ಅಂಗಡಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಕೊಲೆ; ಮೂವರ ಬಂಧನ

ಗುಜರಿ  ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ  ರಾಮಮೂರ್ತಿನಗರ ಮೂವರನ್ನು ಬಂಧಿಸಿದ್ದಾರೆ.  ಮೃತ ವ್ಯಕ್ತಿಯನ್ನು ಸೈಪುಲ್ಲಾ (35) ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗುಜರಿ  ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ  ರಾಮಮೂರ್ತಿನಗರ ಮೂವರನ್ನು ಬಂಧಿಸಿದ್ದಾರೆ.  ಮೃತ ವ್ಯಕ್ತಿಯನ್ನು ಸೈಪುಲ್ಲಾ (35) ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

ನಿತ್ಯವೂ ಕಳ್ಳತನ ನಡೆಯುತ್ತಿದ್ದರಿಂದ ಅಂಗಡಿ ಸಿಬ್ಬಂದಿ ನಿಗಾ ಇಟ್ಟಿದ್ದರು. ಸೈಫುಲ್ಲಾ ಮತ್ತೆ ಸ್ಕ್ರ್ಯಾಪ್ ಕದಿಯಲು ಬಂದಾಗ, ಅಂಗಡಿ ಮಾಲೀಕ ಶೇಖ್ ಜಬೀವುಲ್ಲಾ (26); ಶಾಬಾಜ್ ಅಲಿಯಾಸ್ ಬಾಬನ್ (28) ಮತ್ತು ಪ್ರಶಾಂತ್ (34) ಇತರರು ಸೇರಿ ಆತನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ರಾಮಮೂರ್ತಿ ನಗರದ ಗೋಡಾನ್​​ನಲ್ಲಿ ಕಳ್ಳತನ ಮಾಡಿದ ಆರೋಪ ಸೈಪುಲ್ಲಾ ಮೇಲಿತ್ತು. ಈ ಹಿನ್ನೆಲೆಯಲ್ಲಿ ಕೆಜಿ ಹಳ್ಳಿಯ ವೆಂಕಟೇಶಪುರಂ ರೂಂನಲ್ಲಿ ಆತನನ್ನು ಒಂದು ವಾರಗಳ ಕಾಲ ಕೂಡಿಟ್ಟು ಹಲ್ಲೆ ಮಾಡಿದ್ದಾರೆ. ಒಂದು ವಾರಗಳ ಕಾಲ ನೋವಿನಿಂದ ನರಳಾಡಿದ ಸೈಫುಲ್ಲಾ ಕೊನೆಗೆ ಕಿರುಕುಳ ಸಹಿಸದೇ ಕೊನೆಯುಸಿರೆಳೆದನು.

ಮಾರ್ಚ್ 4 ರಂದು, ಪೊಲೀಸರು ಕೊಳೆತ ಶವವನ್ನು ಪತ್ತೆ ಮಾಡಿದರು. ಗುರುತನ್ನು ಪತ್ತೆಹಚ್ಚಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಫೋಟೋಗಳನ್ನು ಕಳುಹಿಸಿದ್ದರು. ಏಪ್ರಿಲ್ 6 ರಂದು,  ಸೈಪುಲ್ಲಾ ಮೃತಪಟ್ಟ ಬಳಿಕ ಆತನ ಶವವನ್ನು ಸಾದಹಳ್ಳಿ ಬ್ರಿಡ್ಜ್ ಮೋರಿಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಶವ ಎಸೆದು ತಾವೇ ದೂರು ನೀಡಲು ಆರೋಪಿಗಳು ಮುಂದಾಗಿದ್ದರು. ಆರೋಪಿ ಜಬೀ ಎಂಬಾತ ಸೈಪುಲ್ಲಾ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದ. ಇನ್ನೊಂದೆಡೆ ಅದೇ ಸಮಯದಲ್ಲಿ ಸೈಫುಲ್ಲಾ ತಾಯಿ ಸಹ ನಾಪತ್ತೆ ದೂರು ದಾಖಲಿಸಿದರು.

ಈ ವೇಳೆ ಎರಡು ದೂರುಗಳು ಒಂದೇ ಕೇಸ್​ಗೆ ಸಂಬಂಧಿಸಿದ್ದು ಎಂಬುದು ಪೊಲೀಸರಿಗೆ ಪತ್ತೆಯಾಯಿತು. ಬಳಿಕ ರಾಮಮೂರ್ತಿನಗರ ಪೊಲೀಸರು ಜಬೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಹಲ್ಲೆ ವಿಡಿಯೋಗಳು ಬೆಳಕಿಗೆ ಬಂದಿವೆ.

ಸೈಫುಲ್ಲಾ ಕೂಡ ಈ ಹಿಂದೆ ಸ್ಕ್ರ್ಯಾಪ್ ಕದಿಯಲು ಬಂದು ಆರೋಪಿಗಳಿಗೆ ಸಿಕ್ಕಿಬಿದ್ದಿದ್ದ. ಆತನ ಕುಟುಂಬಸ್ಥರು ಆತನನ್ನು ಅವರಿಂದ ಬಿಡುಗಡೆಗೊಳಿಸಿದ್ದರು. ಸೈಫುಲ್ಲಾ ನಾಪತ್ತೆಯಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದ ನಂತರ, ಅವರ ಸಹೋದರ ಫಯಾಜುಲ್ಲಾ ನಾಪತ್ತೆಯ ಹಿಂದೆ ಅದೇ ಜನರ ಕೈವಾಡವಿದೆ ಎಂದು ತಿಳಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com