ಸಿದ್ಧಗಂಗಾ ಮಠದ ಉತ್ತರಾಧಿಕಾರಿ- ಸಿದ್ಧಗಂಗಾ ಶ್ರೀಗಳು
ರಾಜ್ಯ
ಶ್ರೀ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ಘೋಷಣೆ
ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಗಳ ಘೋಷಣೆಯಾಗಿದೆ. ಮನೋಜ್ ಕುಮಾರ್ ಎಂಬುವವರು ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡಿದ್ದಾರೆ.
ತುಮಕೂರು: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಗಳ ಘೋಷಣೆಯಾಗಿದೆ. ಮನೋಜ್ ಕುಮಾರ್ ಎಂಬುವವರು ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡಿದ್ದಾರೆ.
ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಷಡಕ್ಷರಯ್ಯ, ವಿರೂಪಾಕ್ಷಮ್ಮ ಅವರ ಪುತ್ರರಾಗಿರುವ ಮನೋಜ್ ಕುಮಾರ್ ಬಿಎಸ್ಸಿ, ಬಿ.ಎಡ್, ಎಂಎಸ್ ಸಿ, ಎಂಎ ವಿದ್ವತ್ ಪದವಿ ಪಡೆದಿದ್ದು, ಸಿದ್ಧಗಂಗಾ ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ವೇಳೆ, ಕಂಚುಗಲ್ ಬಂಡೇಮಠ ಹಾಗೂ ಬಸವಕಲ್ಯಾಣ ಮಠಗಳಿಗೂ ಉತ್ತರಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕಂಚುಗಲ್ ಬಂಡೇಮಠಕ್ಕೆ ಹರ್ಷ ಕೆ.ಎಂ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರೆ, ಬಸವಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಗಳನ್ನಾಗಿ ಘೋಷಣೆ ಮಾಡಲಾಗಿದೆ.

