ಗಡಿಪಾರು ಭೀತಿ ಎದುರಿಸುತ್ತಿದ್ದ ನಟ ಚೇತನ್ ಗೆ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್
ಬೆಂಗಳೂರು: ಓವರ್ ಸೀಸ್ ಸಿಜಿಟನ್ ಆಫ್ ಇಂಡಿಯಾ ಮಾನ್ಯತೆ ರದ್ದಾಗಿರುವ ನಟ ಚೇತನ್ ವಿರುದ್ಧ್ ಜೂ. 2ರವರೆಗೆ ಕ್ರಮ ಜರುಗಿಸುವುದು ಬೇಡ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಗಡಿಪಾರು ಭೀತಿ ಎದುರಿಸುತ್ತಿದ್ದ ನಟ ಚೇತನ್ ಗೆ ಹೈಕೋರ್ಟ್ ನ ಈ ಆದೇಶದಿಂದ ತಾತ್ಕಾಲಿತ ರಿಲೀಫ್ ದೊರೆತಿದೆ. ಹೈಕೋರ್ಟ್ ನಿಂದ ಸಿಕ್ಕಿರುವ ಈ ರಿಲೀಫ್ ಷರತ್ತುಬದ್ಧವಾಗಿದೆ.
ನ್ಯಾ. ಎಂ ನಾಗಪ್ರಸನ್ನರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ನಟ ಚೇತನ್ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2018ರಲ್ಲಿ ನಟ ಚೇತನ್ ಗೆ ನೀಡಲಾಗಿದ್ದ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನ್ನು ರದ್ದುಗೊಳಿಸಿತ್ತು.
ಚೇತನ್ ಪರ ವಾದ ಮಂಡಿಸಿದ ವಕೀಲರು ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿರುವುದು ಸರಿಯಲ್ಲವೆಂದು ವಾದಿಸಿದ್ದರು. ಚೇತನ್ ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ತಡೆ ನೀಡದಂತೆ ಕೇಂದ್ರ, ರಾಜ್ಯ ಸರ್ಕಾರದ ವಕೀಲರಾದ ಎಎಜಿ ಅರುಣ್ ಶ್ಯಾಮ್, ಎಎಸ್ ಜಿ ಶಾಂತಿಭೂಷಣ್ ವಾದಿಸಿದ್ದರು.
ವಾದ ಆಲಿಸಿದ ಕೋರ್ಟ್, ಜೂ. 2ರವರೆಗೆ ನಟ ಚೇತನ್ ವಿರುದ್ಧ ಕ್ರಮ ಬೇಡ ಎಂದು ಆದೇಶ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ