ಬೆಂಗಳೂರು: ನಕಲಿ ಪೊಲೀಸ್ ಅಧಿಕಾರಿ ವಿರುದ್ಧ ರಿಯಲ್ ಎಸ್ಟೇಟ್ ಏಜೆಂಟ್ ದೂರು ದಾಖಲು

ನಕಲಿ ಐಪಿಎಸ್ ಅಧಿಕಾರಿ ಆರ್ ಶ್ರೀನಿವಾಸ್ ವಿರುದ್ಧ 51 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ದೂರು ದಾಖಲಿಸಿದ್ದು, ಇತ್ತೀಚೆಗೆ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಕಲಿ ಐಪಿಎಸ್ ಅಧಿಕಾರಿ ಆರ್ ಶ್ರೀನಿವಾಸ್ ವಿರುದ್ಧ 51 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ದೂರು ದಾಖಲಿಸಿದ್ದು, ಇತ್ತೀಚೆಗೆ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಖಾಕಿ ಸಮವಸ್ತ್ರ, ಪೊಲೀಸ್ ಸ್ಟಿಕ್ಕರ್ ಮತ್ತು ಫ್ಲ್ಯಾಷ್‌ಲೈಟ್‌ ನೊಂದಿಗೆ ಎಸ್‌ಯುವಿ ಕಾರಿನಲ್ಲಿ ಬಂದು ಐಪಿಎಸ್ ಅಧಿಕಾರಿ ಸೋಗಿನಲ್ಲಿ ಸಂತ್ರಸ್ತ ಆಂಥೋನಿಸ್ವಾಮಿ ರಾಜಪ್ಪ ಅವರನ್ನು ಭೇಟಿ ಮಾಡಿ ಮೈಸೂರಿನ ವಿವಾದಿತ ಆಸ್ತಿಯಿಂದ 10 ಲಕ್ಷ ರೂಪಾಯಿಗಳಷ್ಟು ಆದಾಯ ನೀಡುವ ಭರವಸೆ ನೀಡಿದ್ದನು. 

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೈಲಸಂದ್ರದ ನಿವಾಸಿ ರಾಜಪ್ಪ ಎಂಬುವವರಿಗೆ ಶ್ರೀನಿವಾಸ್ ದಂಧೆಕೋರ ಎಂದು ಮಾಧ್ಯಮ ವರದಿಯಿಂದ ತಿಳಿದುಬಂತು. ನಕಲಿ ಐಪಿಎಸ್ ಅಧಿಕಾರಿಯನ್ನು ಪರಿಚಯಿಸಿದ್ದ ಮುತ್ತೇಗೌಡ ವಿರುದ್ಧವೂ ರಾಜಪ್ಪ ದೂರು ದಾಖಲಿಸಿದ್ದಾರೆ.

ನಕಲಿ ಐಪಿಎಸ್ ಅಧಿಕಾರಿ ಇದೇ ಮಾದರಿಯಲ್ಲಿ ಹಲವರಿಗೆ ವಂಚಿಸಿದ್ದನು. ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ ನಂತರ ಸಂತ್ರಸ್ತರಿಗೆ ಅನುಮಾನ ಬಂದಿತು. ನಂತರ ಒಂದು ಬಾರಿ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿದರು. ಸಂತ್ರಸ್ತರನ್ನು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಶ್ರೀನಿವಾಸ್ ನಕಲಿ ಐಪಿಎಸ್ ಅಧಿಕಾರಿಯಾಗಿದ್ದು, ಹಲವರಿಗೆ ವಂಚಿಸಿರುವುದು ಗೊತ್ತಾಗಿದೆ. ಆರೋಪಿ ಪ್ರಸ್ತುತ ಜೈಲಿನಲ್ಲಿದ್ದಾನೆ. ಹೆಚ್ಚಿನ ತನಿಖೆಗಾಗಿ ವಾರಂಟ್ ಮೇಲೆ ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಂದ್ರಾ ಲೇಔಟ್‌ನ ಮಾರುತಿನಗರ ನಿವಾಸಿ ಡಿಪ್ಲೊಮ ಪದವಿ ಓದಿರುವ ಶ್ರೀನಿವಾಸ್ ಎಂಬಾತನನ್ನು ತಲಘಟ್ಟಪುರ ಪೊಲೀಸರು ಉದ್ಯಮಿಯೊಬ್ಬರಿಗೆ 1.75 ಕೋಟಿ ರೂಪಾಯಿ ವಂಚನೆಯೆಸಗಿದ ಆರೋಪದ ಮೇಲೆ ಬಂಧಿಸಿದ್ದಾರೆ. 

ಐಪಿಎಸ್ ಅಧಿಕಾರಿಯೊಬ್ಬರ ನಕಲಿ ಗುರುತಿನ ಚೀಟಿಯನ್ನೂ ಈತ ಸೃಷ್ಟಿಸಿದ್ದ. 2010ರಲ್ಲಿ ಕಾರು ಕಳ್ಳತನ ಪ್ರಕರಣದಲ್ಲಿ ವಿಜಯನಗರ ಪೊಲೀಸರು ಬಂಧಿಸಿದ್ದರು. ರಿಯಲ್ ಎಸ್ಟೇಟ್ ಏಜೆಂಟ್ ನೀಡಿದ ದೂರಿನ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com