ಬೆಂಗಳೂರು: ಹೆಚ್ಚುವರಿ ಶುಲ್ಕ ಸಂಗ್ರಹಿಸಿದ ಎನ್ ಹೆಚ್ ಎಐ, ಟೋಲ್ ಸಂಸ್ಥೆಗೆ ದಂಡ

ಬೆಂಗಳೂರು ಮತ್ತು ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರಯಾಣಕ್ಕೆ ನಿಗದಿಪಡಿಸಿದ ಶುಲ್ಕಕ್ಕಿಂತ 5 ರೂಪಾಯಿ ಹೆಚ್ಚು ಶುಲ್ಕ ಸಂಗ್ರಹಿಸಿದ್ದಕ್ಕಾಗಿ ಬೆಂಗಳೂರು ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು JAS ಟೋಲ್ ರೋಡ್ ಕಂಪನಿ ಲಿಮಿಟೆಡ್ ನ್ನು ತರಾಟೆಗೆ ತೆಗೆದುಕೊಂಡಿದೆ. 
ಟೋಲ್ ಪ್ಲಾಜಾ
ಟೋಲ್ ಪ್ಲಾಜಾ

ರಾಯ್‌ಪುರ: ಬೆಂಗಳೂರು ಮತ್ತು ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರಯಾಣಕ್ಕೆ ನಿಗದಿಪಡಿಸಿದ ಶುಲ್ಕಕ್ಕಿಂತ 5 ರೂಪಾಯಿ ಹೆಚ್ಚು ಶುಲ್ಕ ಸಂಗ್ರಹಿಸಿದ್ದಕ್ಕಾಗಿ ಬೆಂಗಳೂರು ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು JAS ಟೋಲ್ ರೋಡ್ ಕಂಪನಿ ಲಿಮಿಟೆಡ್ ನ್ನು ತರಾಟೆಗೆ ತೆಗೆದುಕೊಂಡಿದೆ. 

ಟೋಲ್ ಪ್ಲಾಜಾಗಳನ್ನು ದಾಟುವ ದ್ವಿಮುಖ ಸಂಚಾರಕ್ಕೆ ಹೆಚ್ಚುವರಿಯಾಗಿ ಕಡಿತಗೊಳಿಸಲಾದ 10 ರೂಪಾಯಿಯನ್ನು ದೂರುದಾರರಿಗೆ ಪಾವತಿಸಲು ಆಯೋಗವು ಎನ್‌ಎಚ್‌ಎಐ ಮತ್ತು ಟೋಲ್ ಕಂಪನಿಗೆ ಸೂಚಿಸಿದೆ. ನಗರದ ಗಾಂಧಿನಗರದ ನಿವಾಸಿ ಎಂ.ಬಿ.ಸಂತೋಷ್‌ಕುಮಾರ್‌ ಎಂಬವರಿಗೆ ಮಾನಸಿಕ ಯಾತನೆ ಹಾಗೂ ಸೇವಾ ನ್ಯೂನತೆ ಉಂಟು ಮಾಡಿದ ಆರೋಪದಡಿ 5 ಸಾವಿರ ರೂಪಾಯಿ ಹಾಗೂ ವ್ಯಾಜ್ಯ ವೆಚ್ಚವಾಗಿ 3 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆಯೋಗ ಸೂಚಿಸಿದೆ.

ಆಯೋಗದ ಅಧ್ಯಕ್ಷ ಬಿ ನಾರಾಯಣಪ್ಪ ಮತ್ತು ಸದಸ್ಯರಾದ ಎನ್ ಜ್ಯೋತಿ ಮತ್ತು ಎಸ್‌ಎಂ ಶರಾವತಿ, “ಫಾಸ್ಟ್‌ಟ್ಯಾಗ್ ಸ್ವಯಂಚಾಲಿತ ಟೋಲ್ ಶುಲ್ಕಗಳನ್ನುಒಳಗೊಂಡಿದ್ದು, ವ್ಯವಸ್ಥೆಯ ಸಮಸ್ಯೆಗಳು ಮತ್ತು ಟೋಲ್ ಪ್ಲಾಜಾಗಳಲ್ಲಿನ ಪ್ರಕ್ರಿಯೆಯು ಅನ್ವಯವಾಗುವ ಶುಲ್ಕಗಳಿಗಿಂತ ಹೆಚ್ಚಿನ ಕಡಿತಕ್ಕೆ ಕಾರಣವಾಗುತ್ತದೆ. ಎಸ್ ಎಂಎಸ್ ಸ್ವೀಕರಿಸುವಲ್ಲಿ ವಿಳಂಬದಿಂದಾಗಿ ವಿವಾದ ಉಂಟಾಗುತ್ತದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡಾಗ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.

FASTag ನಂತಹ ತಂತ್ರಜ್ಞಾನಗಳು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಮತ್ತು ವಾಹನ ಚಾಲಕರಿಗೆ ಸುಲಭ ಮತ್ತು ವೇಗದ ಸೇವೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ಆಯೋಗ ಹೇಳಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಅರಿತು ಶೀಘ್ರವೇ ಪರಿಹರಿಸುತ್ತಾರೆ ಎಂಬುದು ವಾಹನ ಸವಾರರ ನಿರೀಕ್ಷೆ. ಆದ್ದರಿಂದ, ದೋಷಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಬಂಧಿಸಿದ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಬೇಕು ಎಂದು ಗ್ರಾಹಕರ ವ್ಯಾಜ್ಯ ತೀರ್ಪು ಆಯೋಗ ಹೇಳಿದೆ.

ಪ್ರತಿನಿತ್ಯ ಲಕ್ಷಗಟ್ಟಲೆ ವಾಹನಗಳು ಎರಡೂ ಟೋಲ್ ಪ್ಲಾಜಾಗಳನ್ನು ದಾಟಿ ಹೋಗುತ್ತವೆ. ಎನ್‌ಎಚ್‌ಎಐ ಮತ್ತು ಟೋಲ್ ಕಂಪನಿಯು ವಾಹನ ಚಾಲಕರಿಂದ ಹೆಚ್ಚಿನ ಮೊತ್ತದ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿರಬಹುದು ಎಂದು ದೂರುದಾರರು ವಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com