'ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ' ಅಲ್ಲ, ಇದು ‘ಪ್ರವೇಶ ನಿಯಂತ್ರಿತ ಹೆದ್ದಾರಿ’ ಎಂದ NHAI: ಎರಡರ ಮಧ್ಯೆ ವ್ಯತ್ಯಾಸವೇನು?

ಬೆಂಗಳೂರು-ಮೈಸೂರು ‘ಪ್ರವೇಶ ನಿಯಂತ್ರಿತ ಹೆದ್ದಾರಿ’ ಎಂದು ಹೇಳುವ ಬದಲು ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ’ ಎಂದು ತಪ್ಪಾಗಿ ಕರೆಯಲಾಗುತ್ತಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು-ಮೈಸೂರು ‘ಪ್ರವೇಶ ನಿಯಂತ್ರಿತ ಹೆದ್ದಾರಿ’ ಎಂದು ಹೇಳುವ ಬದಲು ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ’ ಎಂದು ತಪ್ಪಾಗಿ ಕರೆಯಲಾಗುತ್ತಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. 

ವೇಗದ ಮಿತಿಯೊಂದಿಗೆ ಆಗಸ್ಟ್ 1ರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ವಿಧಿಸಲಾದ ನಿರ್ಬಂಧಗಳನ್ನು ಪ್ರಯಾಣಿಕರು ಪ್ರಶ್ನಿಸಿದ ನಂತರ ಈ ಸ್ಪಷ್ಟೀಕರಣ ಬಂದಿದೆ. ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿಲೋ ಮೀಟರ್ ಗಳಾಗಿವೆ.ದೇಶದ ಇತರ ಕಡೆಗಳಲ್ಲಿ ಇರುವ ಎಕ್ಸ್ ಪ್ರೆಸ್ ವೇಯಂತೆ ಇದು ಕೂಡ ಎಂದು ಜನರು ಗೊಂದಲ ಮಾಡಿಕೊಂಡು ಗರಿಷ್ಠ ವೇಗದ ಮಿತಿ ಗಂಟೆಗೆ 120 ಕಿಮೀ ಇದೆ ಎಂದು ಭಾವಿಸುತ್ತಿದ್ದಾರೆ. ಇದು 'ಪ್ರವೇಶ-ನಿಯಂತ್ರಿತ ಹೆದ್ದಾರಿ' ಯಾಗಿದ್ದು 'ಎಕ್ಸ್‌ಪ್ರೆಸ್‌ವೇ' ಅಲ್ಲ. ಅನುಮತಿಸಲಾದ ಗರಿಷ್ಠ ವೇಗವು ಗಂಟೆಗೆ 100 ಕಿಮೀ ಆಗಿದೆ ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ಸ್ಪಷ್ಟನೆ ನೀಡುತ್ತಾರೆ. 

ವ್ಯತ್ಯಾಸಗಳೇನು?: ಎಕ್ಸ್ ಪ್ರೆಸ್ ವೇಗೂ ಪ್ರವೇಶ ನಿಯಂತ್ರಿತ ಹೆದ್ದಾರಿಗೂ ಇರುವ ವ್ಯತ್ಯಾಸವನ್ನು ವಿವರಿಸುವ ಅಧಿಕಾರಿಗಳು, ಎಕ್ಸ್‌ಪ್ರೆಸ್‌ವೇಗಳು ಸೀಮಿತ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಹೊಂದಿದ್ದು, ಯಾವುದೇ ಇತರ ರಸ್ತೆಗಳೊಂದಿಗೆ ವಿಲೀನಗೊಳ್ಳುವುದಾಗಲಿ, ದಾಟಿಕೊಂಡು ಹೋಗುವುದಾಗಲಿ ಇರುವುದಿಲ್ಲ. ಗರಿಷ್ಠ ವೇಗದ ಮಿತಿ ಗಂಟೆಗೆ 120 ಕಿಲೋ ಮೀಟರ್ ಆಗಿರುತ್ತದೆ. ಪ್ರವೇಶ-ನಿಯಂತ್ರಿತ ಹೆದ್ದಾರಿಗಳಲ್ಲಿ, ವೇಗದ ಮಿತಿ ಗಂಟೆಗೆ 100 ಕಿ.ಮೀ. ಆದರೆ ಹೆದ್ದಾರಿಗಳಲ್ಲಿ(Highway)ಗಳಲ್ಲಿ ಹಾಗಲ್ಲ, ಅಲ್ಲಿ ಪ್ರವೇಶವನ್ನು ನಿರ್ಬಂಧಿಸುವುದಿಲ್ಲ. 

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಆದರೆ ಉದ್ಘಾಟನೆಯಾದಾಗಿನಿಂದ ಇದು ಹೆಚ್ಚುತ್ತಿರುವ ಅಪಘಾತಗಳಿಗೆ ಸುದ್ದಿಯಾಗಿದೆ. ಇದನ್ನು ತಡೆಯಲು ಗಂಟೆಗೆ 100 ಕಿಮೀ ವೇಗದ ಮಿತಿಯನ್ನು ದಾಟುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸೇರಿದಂತೆ ನಿಧಾನವಾಗಿ ಚಲಿಸುವ ವಾಹನಗಳಿಗೆ ಆಗಸ್ಟ್ 1 ರಿಂದ ಪ್ರವೇಶ ನಿಯಂತ್ರಿತ ಮುಖ್ಯ ಗಾಡಿಗೆ ಪ್ರವೇಶಿಸದಂತೆ ನಿರ್ಬಂಧವನ್ನು ವಿಧಿಸಿರುವ ಹಿನ್ನೆಲೆಯಲ್ಲಿ, ಆಗಾಗ್ಗೆ ಪ್ರಯಾಣಿಸುವವರ ಒಂದು ವರ್ಗವು ಈಗ ಗರಿಷ್ಠ ವೇಗದ ಮಿತಿಯನ್ನು ಹೆಚ್ಚಿಸಬೇಕೇ ಎಂದು ಯೋಚಿಸುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 'ಎಕ್ಸ್‌ಪ್ರೆಸ್‌ವೇ' ಆದೇಶದ ಪ್ರಕಾರ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಚಲಿಸಬಹುದು. 

ಎಕ್ಸ್‌ಪ್ರೆಸ್‌ವೇಗಳಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 120 ಕಿಮೀ ಆಗಿದ್ದರೆ, ಪೊಲೀಸರು ಗಂಟೆಗೆ 100 ಕಿಮೀ ಮಿತಿಯನ್ನು ದಾಟುವ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ. ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳುತ್ತಿದ್ದಾರೆ.

ಆದಾಗ್ಯೂ ನಿಧಾನವಾಗಿ ಚಲಿಸುವ ವಾಹನಗಳು ವಿಶೇಷವಾಗಿ ದ್ವಿಚಕ್ರ ವಾಹನಗಳ ಮೇಲಿನ ನಿರ್ಬಂಧದಿಂದಾಗಿ, ವೇಗದ ಮಿತಿಯನ್ನು ಗಂಟೆಗೆ 120 ಕಿಮೀಗೆ ಹೆಚ್ಚಿಸಬೇಕೆಂದು ನಮ್ಮ ಅನಿಸಿಕೆ ಎಂದು ಇಲ್ಲಿ ನಿಗದಿತವಾಗಿ ಸಂಚರಿಸುವ ಪ್ರಕಾಶ್ ಮರುಗನ್ ಹೇಳುತ್ತಾರೆ. 

ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಅವರು ಜೂನ್‌ನಲ್ಲಿ ವಿಸ್ತರಣೆಯನ್ನು ಪರಿಶೀಲಿಸಿದ್ದರು. ತಡೆಗೆ ಹಲವು ಕ್ರಮಗಳನ್ನು ತಂದಿದ್ದು, ಅವುಗಳಲ್ಲಿ ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ದಂಡ ವಿಧಿಸುವುದು ಒಂದು. 

ತೀವ್ರ ಬಲ ಲೇನ್‌ನಲ್ಲಿ ಗಂಟೆಗೆ 100 ಕಿಮೀ ಮತ್ತು ಮಧ್ಯದ ಲೇನ್‌ನಲ್ಲಿ ಗಂಟೆಗೆ 80 ಕಿಮೀ ದಾಟುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ ಎಂದು ಅಲೋಕ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com