ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಹದೇವಪುರ ರೆವಿನ್ಯೂ ಇನ್ಸ್ ಪೆಕ್ಟರ್

5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಬಿಎಂಪಿ ಕಂದಾಯ ನಿರೀಕ್ಷಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಟರಾಜ್ ಮನೆಯಲ್ಲಿ ಸಿಕ್ಕ ಬೆಲೆಬಾಳುವ ವಸ್ತು
ನಟರಾಜ್ ಮನೆಯಲ್ಲಿ ಸಿಕ್ಕ ಬೆಲೆಬಾಳುವ ವಸ್ತು

ಬೆಂಗಳೂರು :  5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಬಿಎಂಪಿ ಕಂದಾಯ ನಿರೀಕ್ಷಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹದೇವಪುರ  ಆರ್ ಒ ನಟರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ನಟರಾಜ್ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸರ್ಚ್ ನಡೆದಿದೆ. ಸರ್ಚ್ ವಾರೆಂಟ್ ಪಡೆದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ವಸ್ತುಗಳು ಪತ್ತೆಯಾಗಿದ್ದು, 900 ಗ್ರಾಂ ಚಿನ್ನಾಭರಣ ಮತ್ತು 7 ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ. 4 ಕಾರು (ಇನ್ನೋವಾ ಕ್ರಿಸ್ಟಾ, ಕಿಯಾ ಸೋನೆಟ್, ಹುಂಡೈ ವರ್ನಾ, ಆಡಿ ಕ್ಯೂ-3), 80,000 ನಗದು ಪತ್ತೆಯಾಗಿದೆ.

ಆವಲಳ್ಳಿ ಗಿರಿನಗರದಲ್ಲಿ 30×40 ಅಳತೆಯಲ್ಲಿ ಐಷಾರಾಮಿ ಮನೆಯಿದ್ದು, ಕೊಡಿಗೇಹಳ್ಳಿಯಲ್ಲಿ ಪತ್ನಿ ಹೆಸರಲ್ಲಿ 40×60 ನಿವೇಶನ ದಾಖಲೆಗಳು ಪತ್ತೆಯಾಗಿದೆ.  ಲೋಕಾಯುಕ್ತ ಇನ್ಸ್ ಪೆಕ್ಟರ್ ಮಂಜನಾಥ್ ಹೂಗಾರ್ ನೇತೃತ್ವದಲ್ಲಿ ದಾಳಿ ನಡೆದಿತ್ತು.  ಖಾಸಗಿ ವ್ಯಕ್ತಿ ಪವನ್ ಮೂಲಕ ಲಂಚ ಸ್ವೀಕರಿಸುತ್ತಿದ್ದರು .

ಇನ್ನು ನಟರಾಜ್ ಫ್ಲ್ಯಾಟ್ ಖಾತೆ ಮಾಡಿಕೊಡಲು 1 ಫ್ಲ್ಯಾಟ್​ಗೆ 10 ಸಾವಿರದಂತೆ 79 ಫ್ಲ್ಯಾಟ್ ​ಗೆ 7.90 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅದರಂತೆ ಮುಂಗಡವಾಗಿ 5 ಲಕ್ಷ ರೂ. ಲಂಚ ಪಡೆಯುವಾಗ ಬಿಬಿಎಂಪಿ ಆರ್​ಐ ನಟರಾಜ್, ಆರೋಪಿ ಪವನ್​ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಜುನಾಥ್ ಎಂಬುವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಟರಾಜ್ ಅವರನ್ನು ಟ್ರ್ಯಾಪ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com