ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆ ಪ್ರಮಾಣ ಎಷ್ಟು? ಇಲ್ಲಿದೆ ಮಾಹಿತಿ...

ಕರ್ನಾಟಕ ರಾಜ್ಯದಲ್ಲಿ ನವೀಕರಣ ಇಂಧನ (Renewable energy) ಮೂಲಕ ಅಪಾರ ಪ್ರಮಾಣದಲ್ಲಿ ಇಂಧನ ಪೂರೈಕೆಯನ್ನು ಭರಿಸಲಾಗುತ್ತಿದೆ. ವಿದ್ಯುತ್ ಅಗತ್ಯದ ಹೆಚ್ಚಿನ ಭಾಗವನ್ನು ನವೀಕರಿಸಬಹುದಾದ ಇಂಧನ (RE) ಮೂಲಗಳ ಮೂಲಕ ಪಡೆಯುತ್ತಿದೆ, ಇದರಿಂದ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನವೀಕರಣ ಇಂಧನ (Renewable energy) ಮೂಲಕ ಅಪಾರ ಪ್ರಮಾಣದಲ್ಲಿ ಇಂಧನ ಪೂರೈಕೆಯನ್ನು ಭರಿಸಲಾಗುತ್ತಿದೆ. ವಿದ್ಯುತ್ ಅಗತ್ಯದ ಹೆಚ್ಚಿನ ಭಾಗವನ್ನು ನವೀಕರಿಸಬಹುದಾದ ಇಂಧನ (RE) ಮೂಲಗಳ ಮೂಲಕ ಪಡೆಯುತ್ತಿದೆ, ಇದರಿಂದ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. 

ರಾಜ್ಯದಲ್ಲಿ ಈಗ 3.05 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದ್ದು, ಇದು ಸುಮಾರು ಆರು ದಿನಗಳವರೆಗೆ ಸಾಕಾಗುವಷ್ಟು ಇರುತ್ತದೆ. ಇತರೆ ರಾಜ್ಯಗಳಿಗಿಂತ ಇಲ್ಲಿನ ಪರಿಸ್ಥಿತಿ ಉತ್ತಮವಾಗಿದೆ, ಜನರು ವಿವೇಚನೆಯಿಂದ ವಿದ್ಯುತ್ ಬಳಸಬೇಕು ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 

ಆಗಸ್ಟ್ 3 ರಂತೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯು 4,126mw ಆಗಿತ್ತು, ಇದು ರಾಜ್ಯದ 8,682mw ನ ಬೇಡಿಕೆಯ ಶೇಕಡಾ 47.52% ಆಗಿದೆ. ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಪ್ರಕಾರ ರಾಜ್ಯವು 2,455mw ನ್ನು ಉತ್ಪಾದಿಸುತ್ತದೆ, ಅದರಲ್ಲಿ ಥರ್ಮಲ್ 1,122mw ಮತ್ತು ಉಳಿದವು ಜಲಮೂಲಗಳಿಂದ ಸಿಗುತ್ತಿದೆ. 

ಪ್ರಸ್ತುತ ಮೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಒಟ್ಟು 13 ಘಟಕಗಳ ಪೈಕಿ ಆರು ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (RTPS) ಎಂಟು ಘಟಕಗಳ ಪೈಕಿ ಎರಡು, ಬಳ್ಳಾರಿಯ (BTPS) ಮೂರು ಘಟಕಗಳಲ್ಲಿ ಎರಡು ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (YTPS) ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಎಲ್ಲಾ ಮೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಸರಾಸರಿ ದೈನಂದಿನ ಕಲ್ಲಿದ್ದಲು ಬಳಕೆ 25,000 ಮಿಲಿಯನ್ ಟನ್ ಆಗಿದೆ.

ಕಳೆದ ವಾರ ಸುರಿದ ಭಾರಿ ಮಳೆಯಿಂದ ಜಲವಿದ್ಯುತ್ ಉತ್ಪಾದನೆ ಸುಧಾರಿಸಿದೆ. ಮಳೆಯು ಒಟ್ಟಾರೆ ವಿದ್ಯುತ್ ಬೇಡಿಕೆಯನ್ನು ದಿನಕ್ಕೆ 260-270 ಮಿಲಿಯನ್ ಯುನಿಟ್‌ಗಳಿಂದ 200-210 ಮಿಲಿಯನ್ ಯುನಿಟ್‌ಗೆ ಇಳಿಸಿದೆ. ಇತರ ಮೂಲಗಳಿಂದ ಉತ್ಪಾದನೆಯು ಹೆಚ್ಚುತ್ತಿರುವ ಹೊರತಾಗಿಯೂ, ರಾಜ್ಯಕ್ಕೆ ಇನ್ನೂ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಬೇಕಾಗುತ್ತವೆ. ಸೌರಶಕ್ತಿಯನ್ನು ಹಗಲಿನಲ್ಲಿ ಮಾತ್ರ ಉತ್ಪಾದಿಸಬಹುದಾಗಿರುವುದರಿಂದ ಉಷ್ಣ ವಿದ್ಯುತ್ ಕೂಡ ಅಗತ್ಯವಿದೆ, ಗಾಳಿಯು ಅನಿರೀಕ್ಷಿತವಾಗಿದೆ ಎಂದು ಕೆಪಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ವಿದ್ಯುತ್ ಬೇಡಿಕೆ ಕಡಿಮೆ ಮತ್ತು ನವೀಕರಿಸುವ ಇಂಧನ ಉತ್ತಮವಾಗಿರುವುದರಿಂದ ಉಷ್ಣ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ. ರಾಜ್ಯದ ಗರಿಷ್ಠ ಹಗಲಿನ ಹೊತ್ತಿನಲ್ಲಿ ಬೇಡಿಕೆ 11,500 ಮೆಗಾವ್ಯಾಟ್ ಆಗಿದ್ದರೆ, ರಾತ್ರಿಯಲ್ಲಿ ಇದು 7,000 ಮೆವ್ಯಾ ಆಗಿದೆ. ಸೌರ, ಗಾಳಿ ಮತ್ತು ಜಲವಿದ್ಯುತ್‌ಗಳಿಂದ ಸರಾಸರಿ ಆರ್ ಇ ಉತ್ಪಾದನೆಯು 4,126mw ಆಗಿದೆ. ಅಲ್ಲದೆ, ಸಿಜಿಎಸ್ (ಕೇಂದ್ರೀಯ ಉತ್ಪಾದನಾ ಕೇಂದ್ರಗಳು) ನಿಂದ ವಿದ್ಯುತ್ ಸರಬರಾಜು ಪ್ರತಿದಿನ 2,078 ಮೆಗಾ ವ್ಯಾಟ್ ಆಗಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರತಿನಿಧಿ ಜೊತೆ ಮಾತನಾಡಿ, ರಾಜ್ಯವು ತನ್ನ ಕಲ್ಲಿದ್ದಲು ಸಂಗ್ರಹವನ್ನು ಹೆಚ್ಚಿಸಿದೆ. ಇದು ಹಿಂದಿನ ಐದು ದಿನಗಳಿಂದ ಏಳು ದಿನಗಳವರೆಗೆ ಇರುತ್ತದೆ. ಇಲಾಖೆ ಉನ್ನತ ಅಧಿಕಾರಿಗಳು ಇತ್ತೀಚೆಗೆ ಕಲ್ಲಿದ್ದಲು ಕಾರ್ಯದರ್ಶಿಯನ್ನು ಭೇಟಿ ಮಾಡಿ, ರಾಜ್ಯಕ್ಕೆ ಕಲ್ಲಿದ್ದಲು ಕಚ್ಚಾವಸ್ತುವಿನ ಪೂರೈಕೆಯನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿತ್ತು. ಮುಂದಿನ ಒಂದು ತಿಂಗಳಲ್ಲಿ, ರಾಜ್ಯದ ಕಲ್ಲಿದ್ದಲು ಬಫರ್ ಸಂಗ್ರಹವು 15 ದಿನಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com