ಬಿಯರ್ ನಲ್ಲಿ ಕೆಸರು ಪತ್ತೆ: ಡಿಪೋ- ಚಿಲ್ಲರೆ ಅಂಗಡಿಗಳಿಗೆ ಸರಬರಾಜು ಮಾಡಿದ ಬಾಟಲ್ ಗಳ ಹಿಂಪಡೆತ

ಜನಪ್ರಿಯ ಬ್ರಾಂಡ್‌ನ ಬಿಯರ್‌ನಲ್ಲಿ ಕೆಸರು ಪತ್ತೆಯಾದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಆರೋಗ್ಯದ ಕಾಳಜಿ ಕಾರಣ ನೀಡಿ ಡಿಪೋಗಳು ಮತ್ತು ಚಿಲ್ಲರೆ ಅಂಗಡಿಗಳಿಗೆ ಸರಬರಾಜು ಮಾಡಿದ ಬಾಟಲಿಗಳನ್ನು ಹಿಂತೆಗೆದುಕೊಂಡಿದೆ. 
ಬಿಯರ್
ಬಿಯರ್

ಬೆಂಗಳೂರು: ಜನಪ್ರಿಯ ಬ್ರಾಂಡ್‌ನ ಬಿಯರ್‌ನಲ್ಲಿ ಕೆಸರು ಪತ್ತೆಯಾದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಆರೋಗ್ಯದ ಕಾಳಜಿ ಕಾರಣ ನೀಡಿ ಡಿಪೋಗಳು ಮತ್ತು ಚಿಲ್ಲರೆ ಅಂಗಡಿಗಳಿಗೆ ಸರಬರಾಜು ಮಾಡಿದ ಬಾಟಲಿಗಳನ್ನು ಹಿಂತೆಗೆದುಕೊಂಡಿದೆ. 

ಆಗಸ್ಟ್ 2 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಾಟಲಿಗಳನ್ನು ಹಿಂಪಡೆಯಲು ಅಬಕಾರಿ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಜೂನ್ 25 ರಂದು ಬಿಯರ್ ಬಾಟಲಿಯಲ್ಲಿ ಕೆಸರು ಪತ್ತೆಯಾಗಿತ್ತು. ಪ್ರಯೋಗಾಲಯಗಳ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದೆ.

ಯಾವುದೇ ಕೆಸರು ಪತ್ತೆಯಾಗಿಲ್ಲ ರಸಾಯನಶಾಸ್ತ್ರಜ್ಞರ ಹೇಳಿಕೆ:  ಅಬಕಾರಿ ಅಧಿಕಾರಿಯೊಬ್ಬರು, “ಬಿಯರ್ ನ್ನು ಜೂನ್ 25 ರಂದು ಬಾಟಲ್ ಮಾಡಿ ಜುಲೈ 15 ರಂದು ರವಾನಿಸಲಾಯಿತು. ರಸಾಯನಶಾಸ್ತ್ರಜ್ಞರು ಅದನ್ನು ಬಾಟಲಿಯಲ್ಲಿ ತುಂಬಿದಾಗ ಯಾವುದೇ ಕೆಸರು ಕಂಡುಬಂದಿಲ್ಲ. ಸರ್ಕಾರದ ಅನುಮತಿಯನ್ನೂ ನೀಡಲಾಗಿತ್ತು. 15 ದಿನಗಳ ನಂತರ, ಬ್ರೂವರಿ ಅಧಿಕಾರಿಗಳು ಬಿಯರ್‌ನಲ್ಲಿ ಕೆಸರುಗಳನ್ನು ಕಂಡುಕೊಂಡರು. ಆದ್ದರಿಂದ, ನಾವು ಸ್ಟಾಕ್ ನ್ನು ಪರೀಕ್ಷಿಸಲು ಡಿಪೋ ಅಧಿಕಾರಿಗಳಿಗೆ ಹೇಳಿದ್ದೇವೆ, ಅವರಿಗೆ ಕೆಲಸ ಕಂಡುಬಂದಿದೆ ಎನ್ನುತ್ತಾರೆ. 

ಬ್ಯಾಚ್ ಸಂಖ್ಯೆಗಳನ್ನು ಎಲ್ಲಾ ಡಿಪೋಗಳು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮಾರಾಟವನ್ನು ತಡೆಹಿಡಿಯಲು ತಿಳಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಡಿಸ್ಟಿಲರಿಯಲ್ಲಿ 20,000 ಬಿಯರ್ ಬಾಕ್ಸ್‌ಗಳು ಮತ್ತು ಡಿಪೋಗಳಲ್ಲಿ 10,000 ಬಾಕ್ಸ್‌ಗಳು ಇದ್ದವು. ಮೈಸೂರಿನಲ್ಲಿರುವ ಬಿಯರ್ ಬಾಟಲಿಗಳನ್ನು ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಐದು ಡಿಪೋಗಳಿಗೆ ಸರಬರಾಜು ಮಾಡಲಾಗುತ್ತದೆ.

ಎಷ್ಟು ಬಾಟಲಿಗಳು ಮಾರಾಟವಾಗಿವೆ, ಎಷ್ಟು ಚಿಲ್ಲರೆ ಮಳಿಗೆಗಳನ್ನು ತಲುಪಿವೆ ಮತ್ತು ಎಷ್ಟು ಡಿಪೋಗಳಲ್ಲಿವೆ ಎಂಬ ವಿವರಗಳು ನಮ್ಮಲ್ಲಿಲ್ಲ. ನಾವು ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com