ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಾರಿನೊಳಗೆ ನಾಯಿ ಬಿಟ್ಟು ಹೋದ ಪ್ರಯಾಣಿಕ: ಸಿಐಎಸ್ಎಫ್ ಸಿಬ್ಬಂದಿಯಿಂದ ರಕ್ಷಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊನ್ನೆ ಸೋಮವಾರ ಸಂಜೆ ಪ್ರಯಾಣಿಕರೊಬ್ಬರು ಉದ್ದೇಶಪೂರ್ವಕವಾಗಿ ಎಂಬಂತೆ ಕ್ರೌರ್ಯದ ಕೃತ್ಯ ಎಸಗಿದ್ದಾರೆ. ಗ್ರೇಟ್ ಡೇನ್ ನಾಯಿಯನ್ನು ಕಾರಿನೊಳಗೆ ಕೂಡಿ ಹಾಕಿ ತಪ್ಪಾದ ಪಾರ್ಕಿಂಗ್ ಲೇನ್‌ನಲ್ಲಿ ಬಿಟ್ಟು ಹೋಗಿದ್ದಾರೆ. 
ಕಾರಿನೊಳಗಿನಿಂದ ರಕ್ಷಿಸಲ್ಪಟ್ಟ ನಾಯಿ ಸುಸ್ತಾಗಿ ಮಲಗಿರುವುದು
ಕಾರಿನೊಳಗಿನಿಂದ ರಕ್ಷಿಸಲ್ಪಟ್ಟ ನಾಯಿ ಸುಸ್ತಾಗಿ ಮಲಗಿರುವುದು
Updated on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊನ್ನೆ ಸೋಮವಾರ ಸಂಜೆ ಪ್ರಯಾಣಿಕರೊಬ್ಬರು ಉದ್ದೇಶಪೂರ್ವಕವಾಗಿ ಎಂಬಂತೆ ಕ್ರೌರ್ಯದ ಕೃತ್ಯ ಎಸಗಿದ್ದಾರೆ. ಗ್ರೇಟ್ ಡೇನ್ ನಾಯಿಯನ್ನು ಕಾರಿನೊಳಗೆ ಕೂಡಿ ಹಾಕಿ ತಪ್ಪಾದ ಪಾರ್ಕಿಂಗ್ ಲೇನ್‌ನಲ್ಲಿ ಬಿಟ್ಟು ಹೋಗಿದ್ದಾರೆ. 

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಸಿಬ್ಬಂದಿ ಕಾರಿನೊಳಗೆ ನಾಯಿ ಉಸಿರಾಡಲು ಏದುಸಿರು ಬಿಡುತ್ತಿರುವುದನ್ನು ಕಂಡು ಕೂಡಲೇ ಕಾರಿನ ಗ್ಲಾಸುಗಳನ್ನು ಒಡೆದು ತೆಗೆದು ನಾಯಿಯನ್ನು ರಕ್ಷಿಸಿದ್ದಾರೆ. 

ಬೆಂಗಳೂರಿನ ಕಸ್ತೂರಿ ನಗರದ ನಿವಾಸಿ ವಿಕ್ರಮ್ ರಾಮದಾಸ್ ಲಿಂಗೇಶ್ವರ್ (41ವ) ಎಂಬಾತ ಮುಂಬೈ ಮೂಲಕ ಕೊಯಮತ್ತೂರಿಗೆ ರಾತ್ರಿ 8.50ಕ್ಕೆ ಹೊರಡುವ ಆಕಾಶ ಏರ್‌ಲೈನ್ಸ್ (ಕ್ಯೂಪಿ 1138) ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಅವರ ಫಿಯೆಟ್ (KA-03-MY-2846) ನ್ನು ಅಪರಾಹ್ನ 3.52 ರಿಂದ ತಪ್ಪಾದ ಪಾರ್ಕಿಂಗ್ ಲೇನ್‌ನಲ್ಲಿ ಗಮನಿಸದೆ ನಿಲ್ಲಿಸಲಾಗಿದೆ. ಸಿಐಎಸ್‌ಎಫ್‌ನ ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (ಬಿಡಿಡಿಎಸ್) ಸಂಜೆ 5.45 ರ ಸುಮಾರಿಗೆ ಕಾರನ್ನು ಗಮನಿಸಿದ್ದಾರೆ. ತಂಡವು ಸ್ಥಳಕ್ಕೆ ತಲುಪಿದಾಗ, ಕಾರಿನೊಳಗೆ ಕಪ್ಪು ಗ್ರೇಟ್ ಡೇನ್ ಉಸಿರುಗಟ್ಟಿ ಮೂಗಿನಿಂದ ರಕ್ತಸ್ರಾವವಾಗುತ್ತಿರುವುದನ್ನು ಕಂಡರು. 

ಸಿಐಎಸ್ಎಫ್ ಶ್ವಾನ ನಿರ್ವಾಹಕ ನವೀನ್, ಸಬ್ ಇನ್ಸ್‌ಪೆಕ್ಟರ್ ಬಿ ಕೆ ಮುನಿ ಮತ್ತು ಶ್ವಾನದಳದ ಮಹೇಶ ಅವರು ಗಾಜಿನ ಕಿಟಕಿಗಳನ್ನು ಒಡೆದು ನಾಯಿ ಸಾಯುವುದನ್ನು ತಪ್ಪಿಸಿದರು. ಕಾರಿನಿಂದ ಹೊರತೆಗೆದು ಸಾಕಷ್ಟು ನೀರು ಕೊಟ್ಟು ಕಾಪಾಡಿದರು. ಚಾರ್ಲಿ ಅನಿಮಲ್ ರೆಸ್ಕ್ಯೂ ಎಂಬ ಎನ್‌ಜಿಒವನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಾಯಿಯನ್ನು ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಲಿಂಗೇಶ್ವರ್ ಕಾರು ನಿಲ್ಲಿಸಿದ ವ್ಯಕ್ತಿ ಎಂದು ಗುರುತಿಸಿದ್ದಾರೆ. ಅವರನ್ನು ವಿಮಾನ ನಿಲ್ದಾಣದಿಂದ ಕಾರಿನ ಬಳಿ ಕರೆತಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಮೂಲಗಳು ಸೇರಿಸಲಾಗಿದೆ.

ಐಪಿಸಿ 429 (ಜಾನುವಾರುಗಳನ್ನು ಕೊಲ್ಲುವುದು ಮತ್ತು ಅಂಗವಿಕಲಗೊಳಿಸುವುದು) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರ ಅಡಿಯಲ್ಲಿ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸರು ತಿಳಿಸಿದ್ದಾರೆ. 

ಕಾರು ಮಾಲೀಕ ವಿಕ್ರಮ್ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಮನಸ್ಥಿತಿ ಈಗ ಸ್ಪಷ್ಟವಾಗಿಲ್ಲ. ಅವರು ನಾಯಿಯನ್ನು ಕಾರಿನಲ್ಲಿ ಏಕೆ ಕೂಡಿ ಹಾಕಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com