ಪತ್ರ ವಿವಾದ: ಸುಳ್ಳು ಆರೋಪ, ಅರ್ಜಿಗಳಿಗೆ ಬಲಿಯಾಗಬೇಡಿ; ರಾಜ್ಯಪಾಲರಿಗೆ ಸಚಿವ ಎನ್.ಚಲುವರಾಯಸ್ವಾಮಿ ಮನವಿ!

ಸುಳ್ಳು ಆರೋಪಗಳು, ನಕಲಿ ಅರ್ಜಿಗಳಿಗೆ ಬಲಿಯಾಗಬೇಡಿ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ
Updated on

ಬೆಂಗಳೂರು: ಸುಳ್ಳು ಆರೋಪಗಳು, ನಕಲಿ ಅರ್ಜಿಗಳಿಗೆ ಬಲಿಯಾಗಬೇಡಿ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.

ಆರರಿಂದ ಎಂಟು ಲಕ್ಷದವರೆಗೆ ಲಂಚ ನೀಡುವಂತೆ ಸಚಿವರು ಜಂಟಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ಏಳು ಸಹಾಯಕ ಕೃಷಿ ನಿರ್ದೇಶಕರು(ಎಡಿಎ) ಲಂಚ ಕೇಳುವ ಇಂತಹ ಸಂಪ್ರದಾಯವನ್ನು ನಿಯಂತ್ರಿಸದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಇತ್ತೀಚೆಗೆ ಗೆಹ್ಲೋಟ್‌ಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಮನವಿ ಮಾಡಿದ್ದರು. 

ಈ ಪತ್ರ ಬಂದ ನಂತರ ರಾಜ್ಯಪಾಲರ ಕಚೇರಿಯು ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರವನ್ನು ಹಸ್ತಾಂತರಿಸಿತ್ತು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ನಕಲಿ ಎಂದಿದ್ದರೂ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ರಾಜ್ಯಪಾಲರಿಗೆ ಪತ್ರ ಬರೆದಿರುವ ಚಲುವರಾಯಸ್ವಾಮಿ, ಇಂತಹ ಹೊಣೆಗಾರಿಕೆಯಿಲ್ಲದ ನಕಲಿ ಆರೋಪಗಳು ಮತ್ತು ನಕಲಿ ಅರ್ಜಿಗಳಿಗೆ ಬಲಿಯಾಗದಂತೆ ಪ್ರಾರ್ಥಿಸುತ್ತೇನೆ. ಮುಂದೆ ಇಂತಹ ಘಟನೆಗಳು ನಡೆದರೆ ಪ್ರಾಥಮಿಕ ತನಿಖೆಗೆ ಆದೇಶಿಸುವಂತೆ ರಾಜ್ಯಪಾಲರಿಗೆ ಸಚಿವರು ಮನವಿ ಮಾಡಿದರು. ಪ್ರಾಥಮಿಕ ತನಿಖೆಯಲ್ಲಿ ಪತ್ರ ಅಸಲಿ ಎಂದು ಕಂಡುಬಂದರೆ ತನಿಖೆಗೆ ಆದೇಶಿಸಬೇಕು ಎಂದರು.

"ಇದು ನಿಜವೆಂದು ಕಂಡುಬಂದರೆ ಮತ್ತು ಪುರಾವೆಗಳ ಬೆಂಬಲದೊಂದಿಗೆ ಆ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಸಾಂವಿಧಾನಿಕ ಸಂಸ್ಥೆಗಳನ್ನು ಸಮಾಜವಿರೋಧಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಸುಲಭವಾಗಿ ಸರ್ಕಾರ, ಇಲಾಖೆ ಮತ್ತು ನನಗೆ ಕೆಟ್ಟ ಹೆಸರು ತರಲು ದುರುಪಯೋಗಪಡಿಸಿಕೊಳ್ಳಬಹುದು ಎಂದು ಚಲುವರಾಯಸ್ವಾಮಿ ಹೇಳಿದರು.

ಪತ್ರವು 'ಸಂಪೂರ್ಣವಾಗಿ ನಕಲಿ' ಎಂದು ಪ್ರತಿಪಾದಿಸಿದ ಸಚಿವರು, ಅದರ ಬಗ್ಗೆ ತಿಳಿದ ನಂತರ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದರು. ಸಹಾಯಕ ನಿರ್ದೇಶಕರು ಇಂತಹ ಪತ್ರ ಬರೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು. ಅವರ ಪ್ರಕಾರ, ಪತ್ರ ಬರೆದಿದ್ದಾರೆ ಎನ್ನಲಾದ ಏಳು ಮಂದಿ ಸಹಾಯಕ ನಿರ್ದೇಶಕರ ಪೈಕಿ ರಮೇಶ್ ಅವರು ಮಂಡ್ಯದಲ್ಲಿ ಕೆಲಸ ಮಾಡುತ್ತಿಲ್ಲ. ಇನ್ನುಳಿದ ಅಧಿಕಾರಿಗಳು ಕೂಡ ರಾಜ್ಯಪಾಲರಿಗೆ ಪತ್ರ ಬರೆದಿಲ್ಲ ಎಂದಿದ್ದಾರೆ.

ಇದು ಸಂಪೂರ್ಣವಾಗಿ ನನ್ನ ವಿರುದ್ಧ ಇರುವ ಪಟ್ಟಭದ್ರ ಹಿತಾಸಕ್ತಿಗಳ ಕೆಲಸವಾಗಿದೆ. ಅವರು ನನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಮತ್ತು ಸಾಂವಿಧಾನಿಕ ಸಂಸ್ಥೆಯನ್ನು (ರಾಜ್ಯಪಾಲರ ಕಚೇರಿ) ದುರುಪಯೋಗಪಡಿಸಿಕೊಳ್ಳಲು ಎಲ್ಲಾ ವಿಧಾನಗಳನ್ನು ಸುಳ್ಳು ಮಾಡಿದ್ದಾರೆ. ರಾಜಭವನದ ಅಧೀನ ಕಾರ್ಯದರ್ಶಿ ಸಹಿ ಇರುವ ಕವರ್ ಲೆಟರ್‌ನೊಂದಿಗೆ ಮುಖ್ಯ ಕಾರ್ಯದರ್ಶಿಗೆ ನಕಲಿ ಪತ್ರವನ್ನು ರವಾನಿಸಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com