ಮೈಸೂರು-ಚೆನ್ನೈ ಕಾವೇರಿ ಎಕ್ಸ್‌ಪ್ರೆಸ್‌ನಲ್ಲಿ ಒಂಟಿ ಮಹಿಳೆ ಮೇಲೆ ದುಷ್ಕರ್ಮಿಯಿಂದ ಹಲ್ಲೆ

ಕೆಂಗೇರಿ ಬಳಿ ಮೈಸೂರು-ಚೆನ್ನೈ ಕಾವೇರಿ ಎಕ್ಸ್‌ಪ್ರೆಸ್‌ ನಿಧಾನವಾಗಿ ಚಲಿಸುತ್ತಿದ್ದ ವೇಳೆ ಮಹಿಳಾ ಕಂಪಾರ್ಟ್‌ಮೆಂಟ್ ಗೆ ನುಗ್ಗಿದ ವ್ಯಕ್ತಿಯೊಬ್ಬ 43 ವರ್ಷದ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಗೇರಿ ಬಳಿ ಮೈಸೂರು-ಚೆನ್ನೈ ಕಾವೇರಿ ಎಕ್ಸ್‌ಪ್ರೆಸ್‌ ನಿಧಾನವಾಗಿ ಚಲಿಸುತ್ತಿದ್ದ ವೇಳೆ ಮಹಿಳಾ ಕಂಪಾರ್ಟ್‌ಮೆಂಟ್ ಗೆ ನುಗ್ಗಿದ ವ್ಯಕ್ತಿಯೊಬ್ಬ 43 ವರ್ಷದ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.    

ಕೋಚ್ ಗೆ ನುಗ್ಗಿದ ವ್ಯಕ್ತಿ ಆಕೆಯಿಂದ ಹಣ ಹಾಗೂ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಅದಕ್ಕೆ ಆಕೆ ವಿರೋಧಿಸಿದಾಗ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ರಾತ್ರಿ 10.40ರ ಸುಮಾರಿಗೆ ಆಕೆಯ ಮೇಲೆ ದಾಳಿ ನಡೆದಿದೆ. ಕೋಚ್‌ನಲ್ಲಿ ಸಂತ್ರಸ್ತೆ ಗಾಯತ್ರಿ.ವಿ ಒಬ್ಬರೇ ಇದ್ದರು. ಆಕೆ ಮೈಸೂರು ಜಿಲ್ಲೆಯ ನಂಜನಗೂಡಿನ ನಿವಾಸಿಯಾಗಿದ್ದು, ಚೆನ್ನೈನ ತಮಿಳು ಕ್ಲಾಸಿಕಲ್ ಇನ್‌ಸ್ಟಿಟ್ಯೂಷನ್‌ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಆಗಿ ಉದ್ಯೋಗದಲ್ಲಿದ್ದಾರೆ.

ಕಲಾವಿದರಾದ ಪತಿ ಮಹೇಶ್ ಅವರೊಂದಿಗೆ ಮಂಗಳವಾರ ರಾತ್ರಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ನಂತರ ಗಾಯತ್ರಿ ತನ್ನ ಪ್ರಯಾಣವನ್ನು ಮೊಟಕುಗೊಳಿಸಿ ಮೈಸೂರಿಗೆ ಮರಳಿದ್ದಾರೆ.

ತಮ್ಮ ಕಂಪನಿಯ ಪರವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಗಾಯತ್ರಿ ಚೆನ್ನೈಗೆ ತೆರಳುತ್ತಿದ್ದರು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಆಕೆಯ ಇ-ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲಿರುವುದರಿಂದ (ರೈಲು ಸಂಖ್ಯೆ. 16022 ಕಾವೇರಿ ಎಕ್ಸ್‌ಪ್ರೆಸ್), ಅದನ್ನು ರದ್ದುಗೊಳಿಸಲಾಯಿತು. ಆದಾದ ನಂತರ, ಆಕೆ ಮೈಸೂರಿನಲ್ಲಿ ಕಾಯ್ದಿರಿಸದ ಮಹಿಳಾ ಕೋಚ್‌ ನಲ್ಲಿ ಪ್ರಯಾಣಿಸುತ್ತಿದ್ದರು.

<strong>ಗಾಯತ್ರಿ.ವಿ</strong>
ಗಾಯತ್ರಿ.ವಿ

ಆಕೆ ಮಹಿಳಾ ಕಂಪಾರ್ಟ್ ಮೆಂಟ್ ಹತ್ತಿದ್ದಾಗ ಕೋಚ್‌ನಲ್ಲಿ ಕೆಲವು ಮಹಿಳೆಯರು ಇದ್ದರು. ಆದರೆ ರಾಮನಗರ ನಿಲ್ದಾಣದ ನಂತರ ಆಕೆ ಮಾತ್ರ ಕೋಚ್‌ನಲ್ಲಿ ಆಕೆ ಒಬ್ಬರೇ ಪ್ರಯಾಣಿಸುತ್ತಿದ್ದರು. ಮುಂದಿನ ನಿಲ್ದಾಣ ಪ್ರವೇಶಿಸುವ ಮೊದಲು ರೈಲು ನಿಧಾನಗೊಂಡಾಗ ವ್ಯಕ್ತಿ ಕೋಚ್ ಪ್ರವೇಶಿಸಿದ್ದ ಎಂದು ಮೂಲಗಳು ತಿಳಿಸಿವೆ.

ರೈಲಿನಲ್ಲಿ ನನ್ನ ಪತ್ನಿ ನಿದ್ದೆಗೆ ಜಾರಿದ್ದರು, ಈ ವೇಳೆ ಆಕೆಯ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಆಕೆಗೆ ಎಚ್ಚರವಾಯಿತು. ಅದಕ್ಕೆ ಆಕೆ ವಿರೋಧಿಸಿದಾಗ, ಅವನು ಗಾಯತ್ರಿಗೆ ಕೆಟ್ಟದಾಗಿ ಹೊಡೆದಿದ್ದಾನೆ. ಕೆಂಗೇರಿಯಲ್ಲಿ ಆಕೆಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡಿಲ್ಲ ಎಂದು ಮಹಿಳೆ ಪತಿ ಮಹೇಶ್ ಆರೋಪಿಸಿದರು.

ಆಕೆ ತೀವ್ರ ಪ್ರತಿರೋಧದಿಂದಾಗಿ, ರೈಲು ಕೆಂಗೇರಿ ಪ್ರವೇಶಿಸುತ್ತಿದ್ದಂತೆ ಆತ ಹೊರಗೆ ಜಿಗಿದಿದ್ದಾನೆ, ಮಹಿಳೆಯಿಂದ 500 ರೂಪಾಯಿಗಳನ್ನು ಮಾತ್ರ ಕಸಿದುಕೊಳ್ಳಲು ಆತನಿಗೆ ಸಾಧ್ಯವಾಗಿದೆ" ಎಂದು ಉನ್ನತ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಗೇರಿಯಲ್ಲಿ ಆಕೆಗೆ ಸಹಾಯ ಮಾಡಲು ಯಾವುದೇ ರೈಲ್ವೆ ರಕ್ಷಣಾ ಪಡೆ ಅಥವಾ ಜಿಆರ್‌ಪಿ ಸಿಬ್ಬಂದಿ ಇರಲಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ. 20 ನಿಮಿಷಗಳ ನಂತರ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ''ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಬೆಂಗಳೂರು ವಿಭಾಗ) ಯೋಗೇಶ್ ಮೋಹನ್ ಮಾತನಾಡಿ, ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ನಿಯೋಜಿಸಲು ರೈಲ್ವೆಯಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಇಲ್ಲ ಎಂದಿದ್ದಾರೆ.

ಕೆಂಗೇರಿ ರೈಲು ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದೆ, ನಾವು ಅದನ್ನು ಪರಿಶೀಲಿಸುತ್ತೇವೆ ಮತ್ತು ದುಷ್ಕರ್ಮಿ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಘಟನೆಯ ನಂತರ ನಾವು ಎಲ್ಲಾ ರೈಲುಗಳಲ್ಲಿ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸುತ್ತೇವೆ ಎಂದು ಜಿಆರ್‌ಪಿ ಸೂಪರಿಂಟೆಂಡೆಂಟ್ ಸೌಮ್ಯಲತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com