ಗುಲ್ಬರ್ಗ ವಿವಿಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಿಬ್ಬಂದಿ ಕೊರತೆ

ಸತತ ರಾಜ್ಯ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲ್ಯಾಣ ಕರ್ನಾಟಕ ಅದರಲ್ಲೂ ವಿಶೇಷವಾಗಿ ಗುಲ್ಬರ್ಗ ವಿಶ್ವವಿದ್ಯಾಲಯವು ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತೀವ್ರ ಸಿಬ್ಬಂದಿ ಕೊರತೆ(ಖಾಯಂ...
ಗುಲ್ಬರ್ಗ ವಿವಿ
ಗುಲ್ಬರ್ಗ ವಿವಿ

ಕಲಬುರಗಿ: ಸತತ ರಾಜ್ಯ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲ್ಯಾಣ ಕರ್ನಾಟಕ ಅದರಲ್ಲೂ ವಿಶೇಷವಾಗಿ ಗುಲ್ಬರ್ಗ ವಿಶ್ವವಿದ್ಯಾಲಯವು ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತೀವ್ರ ಸಿಬ್ಬಂದಿ ಕೊರತೆ(ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ) ಎದುರಿಸುತ್ತಿದೆ.

ಮಂಜೂರಾದ 248 ಉಪನ್ಯಾಸಕರ(ಖಾಯಂ) ಹುದ್ದೆಗಳಲ್ಲಿ 202 ಹುದ್ದೆಗಳು ಖಾಲಿ ಇವೆ. ಮಂಜೂರಾದ 36 ಪ್ರಾಧ್ಯಾಪಕರ ಹುದ್ದೆಗಳಲ್ಲಿ 34 ಹುದ್ದೆಗಳು ಖಾಲಿ ಇವೆ. ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಆ ಇಬ್ಬರು ನಿವೃತ್ತಿಯಾದರೆ ಮೂರು ದಶಕಗಳಷ್ಟು ಹಳೆಯದಾದ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಯಾವುದೇ ಖಾಯಂ ಪ್ರಾಧ್ಯಾಪಕರು ಇರುವುದಿಲ್ಲ.

ಇನ್ನು ಮಂಜೂರಾದ 67 ಸಹ ಪ್ರಾಧ್ಯಾಪಕ ಹುದ್ದೆಗಳಲ್ಲಿ 60 ಹುದ್ದೆಗಳು ಖಾಲಿ ಇವೆ. ಮಂಜೂರಾದ 145 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ 107 ಖಾಲಿ ಇವೆ.

ಮೂಲಗಳ ಪ್ರಕಾರ, ಇತಿಹಾಸ, ಸಮಾಜಶಾಸ್ತ್ರ, ಎಂಎಸ್‌ಡಬ್ಲ್ಯೂ, ಮಹಿಳಾ ಅಧ್ಯಯನ, ಅಂಬೇಡ್ಕರ್ ಅಧ್ಯಯನ, ದೃಶ್ಯ ಕಲೆ, ಸಂಗೀತ, ಮರಾಠಿ, ಸಂಸ್ಕೃತ ಮತ್ತು ಎಂಬಿಎ ಸೇರಿದಂತೆ 38 ವಿಭಾಗಗಳಲ್ಲಿ 13 ವಿಭಾಗಗಳಲ್ಲಿ ಖಾಯಂ ಬೋಧಕ ಸಿಬ್ಬಂದಿ ಇಲ್ಲ. ಅರ್ಥಶಾಸ್ತ್ರ, ಅಪ್ಲೈಡ್ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್‌ನಂತಹ ವಿಭಾಗಗಳು ವಿಜ್ಞಾನ, ಪರಿಸರ ವಿಜ್ಞಾನ, ಪ್ರಾಣಿಶಾಸ್ತ್ರ, ಕಾನೂನು, ಕನ್ನಡ, ಶಿಕ್ಷಣ ಮತ್ತು ದೈಹಿಕ ಶಿಕ್ಷಣದಲ್ಲಿ ತಲಾ ಒಬ್ಬರು ಖಾಯಂ ಬೋಧಕ ಸಿಬ್ಬಂದಿ ಮಾತ್ರ ಇದ್ದಾರೆ.

ಗಣಿತ ಮತ್ತು ಭೌತಶಾಸ್ತ್ರ(ತಲಾ ಐದು), ಜೈವಿಕ ರಸಾಯನಶಾಸ್ತ್ರ ಮತ್ತು ವಾಣಿಜ್ಯ (ತಲಾ ನಾಲ್ಕು) ಸಿಬ್ಬಂದಿಯನ್ನು ಹೊಂದಿರುವ ವಿಭಾಗಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅತಿಥಿ ಉಪನ್ಯಾಸಕರಿಂದ ಮಾತ್ರ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಶಿಕ್ಷಣಾಧಿಕಾರಿ ಬಸವರಾಜ ಕುಮ್ನೂರ ಅವರು ಹೇಳಿದ್ದಾರೆ.

“ನಾವು ಅತಿಥಿ ಉಪನ್ಯಾಸಕರಿಂದ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಮತ್ತು ನಾವು ಅವರಿಗೆ ಹೆಚ್ಚು ಹೊಣೆಗಾರಿಕೆ ನೀಡಲು ಸಾಧ್ಯವಿಲ್ಲ. ತೀವ್ರ ಸಿಬ್ಬಂದಿ ಕೊರತೆಯಿಂದಾಗಿ ಸಂಶೋಧನಾ ಚಟುವಟಿಕೆಗಳಿಗೂ ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com