ರಾಜಾಜಿನಗರ: ಶ್ರೀಗಂಧ ಕದಿಯಲು ಬಂದ ಕಳ್ಳರ ಯತ್ನ ವಿಫಲ; ಬೀದಿ ನಾಯಿಗಳ ಸಹಾಯದಿಂದ ಇಬ್ಬರ ಬಂಧನ!

ರಾಜಾಜಿನಗರ 1ನೇ ಎನ್ ಬ್ಲಾಕ್‌ನಲ್ಲಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಕ್ವಾರ್ಟರ್ಸ್‌ನ ಆವರಣದಿಂದ ಬೆಲೆಬಾಳುವ ಶ್ರೀಗಂಧದ ಮರ ಕದಿಯಲು ಕೆಲವು ಕಳ್ಳರು ಮಾಡಿದ ಪ್ರಯತ್ನವನ್ನು ಬೀದಿ ನಾಯಿಗಳು ವಿಫಲಗೊಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಾಜಿನಗರ 1ನೇ ಎನ್ ಬ್ಲಾಕ್‌ನಲ್ಲಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಕ್ವಾರ್ಟರ್ಸ್‌ನ ಆವರಣದಿಂದ ಬೆಲೆಬಾಳುವ ಶ್ರೀಗಂಧದ ಮರ ಕದಿಯಲು ಕೆಲವು ಕಳ್ಳರು ಮಾಡಿದ ಪ್ರಯತ್ನವನ್ನು ಬೀದಿ ನಾಯಿಗಳು ವಿಫಲಗೊಳಿಸಿವೆ.

ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದರಿಂದ ನಿವಾಸಿಗಳು ಎಚ್ಚೆತ್ತಿದ್ದಾರೆ. ಬೊಗಳುವ ಸದ್ದು ಕೇಳಿದ ನಿವಾಸಿಗಳು ಮರಗಳತ್ತ ತೆರಳಿ ಐವರಲ್ಲಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ BWSSB ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೂರು ದಾಖಲಿಸಿದ್ದಾರೆ.

ಪೊಲೀಸರು ಕರ್ನಾಟಕ ಅರಣ್ಯ ಕಾಯ್ದೆಯಡಿ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಕೂಡ ಸಾರ್ವಜನಿಕರ ಮೇಲೆ ಮರದ ಹಲಗೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ರಾಜಾಜಿನಗರದ ಉತ್ತರ ಪಶ್ಚಿಮ-1 ಉಪವಿಭಾಗದಲ್ಲಿರುವ ಬಿಡಬ್ಲ್ಯುಎಸ್‌ಎಸ್‌ಬಿ ಆವರಣದಲ್ಲಿ ಸೋಮವಾರ ರಾತ್ರಿ 10.30 ರಿಂದ 10.45 ರ ನಡುವೆ ಈ ಘಟನೆ ಸಂಭವಿಸಿದೆ. BWSSB ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ ಹರೀಶ್ ನಾಯ್ಕ್ ಅವರು ಮಂಗಳವಾರ ಬೆಳಿಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ .

ನಾಯಿಗಳು ಬೊಗಳಲು ಪ್ರಾರಂಭಿಸಿದ ನಂತರ, ಭದ್ರತಾ ಸಿಬ್ಬಂದಿ ಮತ್ತು ಕ್ವಾರ್ಟರ್ಸ್‌ನಲ್ಲಿ ಇದ್ದ ಜನರು ಸ್ಥಳಕ್ಕೆ ಧಾವಿಸಿದರು.  ಪೊಲೀಸ್ ಗಸ್ತು ವಾಹನ ಕೂಡ ಪಕ್ಕದಲ್ಲೇ ಇತ್ತು. ಐವರು ಕಳ್ಳರಲ್ಲಿ  ಮೂವರು ತಪ್ಪಿಸಿಕೊಂಡಿದ್ದಾರೆ. ಕಾಲು ಜಾರಿ ಬಿದ್ದು ಸಿಕ್ಕಿಕೊಂಡ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಶ್ರೀಗಂಧ ಕಳ್ಳರನ್ನು ತುಮಕೂರಿನ ಚಿಕ್ಕನಾಯಕನಹಳ್ಳಿಯ ಮತ್ತಿಘಟ್ಟ ಪೋಸ್ಟ್‌ನ ರಸೂಲ್ (36) ಮತ್ತು ಶೇಖ್ ನಜೀರ್ (35) ಎಂದು ಗುರುತಿಸಲಾಗಿದೆ.

BWSSB  ವಸತಿ ಗೃಹದ ಆವರಣದಲ್ಲಿ 10 ವರ್ಷಕ್ಕಿಂತ ಹಳೆಯದಾದ 10 ಶ್ರೀಗಂಧದ ಮರಗಳಿವೆ. ದಶಕದ ಹಿಂದೆ ಇದೇ ಆವರಣದಲ್ಲಿ ಕಳ್ಳತನ ನಡೆದಿತ್ತು. ಆರೋಪಿಗಳು ಕಳೆದ ವಾರ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ. ಮರ ಕಡಿಯುವ ಪರಿಕರಗಳನ್ನು ಗಿಡಗಳ ಒಳಗೆ ಬಚ್ಚಿಟ್ಟಿದ್ದರು. ಎಲ್ಲಾ ಉಪಕರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ  ಎಂದು ಹರೀಶ್ ನಾಯ್ಕ್  ದಿ  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಯಿತು.  ಇನ್ನೂ ಬಂಧಿಸಬೇಕಾದ ತಮ್ಮ ಸಹಚರರ ವಿವರಗಳನ್ನು ಈ ಇಬ್ಬರೂ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕಳ್ಳತನ (ಐಪಿಸಿ 379) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com