ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಇಬ್ಬರು ದಂಪತಿಯ ದರೋಡೆ

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ದರೋಡೆ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ದಂಪತಿಯ ಚಿನ್ನದ ಸರವನ್ನು ದೋಚಿದ್ದಾರೆ.
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ

ಮೈಸೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ದರೋಡೆ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ದಂಪತಿಯ ಚಿನ್ನದ ಸರವನ್ನು ದೋಚಿದ್ದಾರೆ.

ಮೊದಲ ಘಟನೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್‌ನಲ್ಲಿರುವ ಭಾರತ್‌ ಬೆಂಚ್‌ ಕಂಪನಿ ಬಳಿ ಉಡುಪಿ ಜಿಲ್ಲೆಯ ನಿವಾಸಿಗಳಾದ ಶಿವಪ್ರಸಾದ್‌ ಮತ್ತು ಅವರ ಪತ್ನಿ ಸುಮಾ ಕಾರು ನಿಲ್ಲಿಸಿದ್ದ ವೇಳೆ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಯುಧ ತೋರಿಸಿ ದಂಪತಿಗೆ ಬೆದರಿಕೆ ಹಾಕಿದ್ದು, 30 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ. 

ಎರಡನೇ ಘಟನೆಯಲ್ಲಿ, ಕೋಲಾರ ಜಿಲ್ಲೆಯ ಮಾಲೂರು ನಿವಾಸಿಗಳಾದ ಡಾ.ರಕ್ಷಿತ್ ರೆಡ್ಡಿ ಮತ್ತು ಅವರ ಪತ್ನಿ ಮಾನಸ ಅವರು ತಮ್ಮ ಕಾರಿನಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರದಲ್ಲಿ ಟೈರ್ ಪಂಚರ್ ಆಗಿದ್ದು, ದಂಪತಿ ಕಾರಿನಿಂದ ಕೆಳಗಿಳಿದು ಟೈರ್ ಬದಲಾಯಿಸುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಬೆದರಿಸಿ 40 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ.

ಮಂಡ್ಯ ಎಸ್ಪಿ ಎನ್.ಯತೀಶ್ ಅಪರಾಧ ನಡೆದ ಎರಡೂ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com