ಮೈಸೂರು: ಥಾರ್ ಕಾರು-ಪಲ್ಸರ್ ಮುಖಾಮುಖಿ ಡಿಕ್ಕಿ, ಇಬ್ಬರು ಕಾನ್‌ಸ್ಟೇಬಲ್‌ಗಳ ದುರ್ಮರಣ

ಮಹೀಂದ್ರಾ ಥಾರ್ ಮತ್ತು ಪಲ್ಸರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಮೃತಪಟ್ಟಿದ್ದಾರೆ.
ಮೃತ ಪೇದೆಗಳು
ಮೃತ ಪೇದೆಗಳು
Updated on

ಮೈಸೂರು: ಮಹೀಂದ್ರಾ ಥಾರ್ ಮತ್ತು ಪಲ್ಸರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಮೃತಪಟ್ಟಿದ್ದಾರೆ. 

ಲಲಿತ ಮಹಲ್ ಹೋಟೆಲ್ ಸಮೀಪ ಅಪಘಾತ ಸಂಭವಿಸಿದೆ. ಮೃತರನ್ನು ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯ 23 ವರ್ಷದ ಪಿ ಮಹೇಶ್ ಮತ್ತು ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ 24 ವರ್ಷದ ಅಮರನಾಥ ತಾಳಿಕೋಟಿ ಎಂದು ತಿಳಿದುಬಂದಿದೆ.

ಮಹೇಶ್ ಮತ್ತು ಅಮರನಾಥ ಅವರು ರಾಜ್ಯ ಮೀಸಲು ಪಡೆಯ 5ನೇ ಬೆಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಫುಡ್ ಸ್ಟ್ರೀಟ್ ನಲ್ಲಿ ಊಟ ಮಾಡಿದ ಬಳಿಕ ತಮ್ಮ ಪಲ್ಸರ್ ಬೈಕ್ ನಲ್ಲಿ ಕೆಎಸ್ಆರ್ ಪಿ ಬೆಟಾಲಿಯನ್ ಕಡೆ ಹೋಗುವಾಗ ಅಪಘಾತ ಸಂಭವಿಸಿತ್ತು.

ಮೈಸೂರಿನ ಸಿದ್ದಾರ್ಥ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com