ಕೊಡಗಿನಲ್ಲಿ ರೈತನನ್ನು ಬಲಿ ಪಡೆದಿದ್ದ ಪುಂಡಾನೆ ದುಬಾರೆ ಆನೆ ಶಿಬಿರಕ್ಕೆ ಶಿಫ್ಟ್!

ಕೊಡಗಿನಲ್ಲಿ ರೈತನನ್ನು ಬಲಿತೆಗೆದುಕೊಂಡಿದ್ದ ಪುಂಡಾನೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅದನ್ನು ದುಬಾರೆ ಆನೆ ಶಿಭಬಿರಕ್ಕೆ ಸ್ಥಳಾಂತರಿಸಿದ್ದಾರೆ.
ಪುಂಡಾನೆ ಸೆರೆ
ಪುಂಡಾನೆ ಸೆರೆ

ಮಡಿಕೇರಿ: ಕೊಡಗಿನಲ್ಲಿ ರೈತನನ್ನು ಬಲಿತೆಗೆದುಕೊಂಡಿದ್ದ ಪುಂಡಾನೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅದನ್ನು ದುಬಾರೆ ಆನೆ ಶಿಭಬಿರಕ್ಕೆ ಸ್ಥಳಾಂತರಿಸಿದ್ದಾರೆ.

ದಕ್ಷಿಣ ಕೊಡಗಿನ ಅರೆಕಾಡು ಪ್ರದೇಶದಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಭಾನುವಾರ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಆನೆ ದಾಳಿಗೆ ಸಿ.ಬಿ.ದೇವಪ್ಪ (58)  ಬಲಿಯಾಗಿದ್ದರು. ಇದರ ಬೆನ್ನಲ್ಲೇ ಮಡಿಕೇರಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಅರೆಕಾಡು-ಅಬ್ಯತಮಂಗಲ ವ್ಯಾಪ್ತಿಯಲ್ಲಿ ಘರ್ಷಣೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದರು.

ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಂದ ಪಳಗಿದ ಆನೆಗಳ ಸಹಾಯದಿಂದ ಸೋಮವಾರ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಯಿತು. ಅರಣ್ಯ ಇಲಾಖೆಯ 100ಕ್ಕೂ ಹೆಚ್ಚು ಸಿಬ್ಬಂದಿ ಸೋಮವಾರದಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ, ಮಂಗಳವಾರ ಮಧ್ಯಾಹ್ನವೇ ಆನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

18 ರಿಂದ 20 ವರ್ಷದ ಗಂಡು ಆನೆಯನ್ನು ಸೆರೆ ಹಿಡಿಯಲಾಗಿದೆ. ಮಡಿಕೇರಿ ವಿಭಾಗದ ಸಿಬ್ಬಂದಿ ಮತ್ತು ನಾಲ್ಕು ಪಳಗಿದ ಆನೆಗಳು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಡಿಕೇರಿ ವಿಭಾಗದ ಡಿಸಿಎಫ್ ಎಟಿ ಪೂವಯ್ಯ ಖಚಿತಪಡಿಸಿದ್ದಾರೆ.

ಇದೇ ವೇಳೆ ಅರೆಕಾಡು ನಿವಾಸಿಗಳು ಸೆರೆ ಸಿಕ್ಕ ಆನೆ ರೈತನ ಪ್ರಾಣ ತೆಗೆದ ಆನೆ ಅಲ್ಲ ಎಂದು ಆರೋಪಿಸಿದ್ದಾರೆ, ಆದರೆ, ದೇವಪ್ಪನನ್ನು ಕೊಂದಿದ್ದು ಇದೇ ಆನೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದು, ಪ್ರತ್ಯಕ್ಷದರ್ಶಿಗಳಿಂದ ದೃಢಪಟ್ಟಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿದ್ದು. ಹೆಚ್ಚುತ್ತಿರುವ ವನ್ಯಜೀವಿ ಸಂಘರ್ಷದ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರವನ್ನು ವಿಸ್ತರಿಸುವುದಾಗಿ ಸಚಿವರು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com