2026ರ ವೇಳೆಗೆ ಡಿಜಿಟಲ್ ಆರ್ಥಿಕತೆಯಿಂದ ದೇಶದ GDPಗೆ 20% ಕ್ಕಿಂತ ಹೆಚ್ಚು ಕೊಡುಗೆ: ರಾಜೀವ್ ಚಂದ್ರಶೇಖರ್

2026 ರ ವೇಳೆಗೆ ಡಿಜಿಟಲ್ ಆರ್ಥಿಕತೆಯು ದೇಶದ ಜಿಡಿಪಿಗೆ ಶೇಕಡಾ 20 ಕ್ಕಿಂತ ಹೆಚ್ಚು ಕೊಡುಗೆ ನೀಡಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಹೇಳಿದ್ದಾರೆ.
ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ ಉದ್ಘಾಟಿಸಿದ ರಾಜೀವ್ ಚಂದ್ರಶೇಖರ್
ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ ಉದ್ಘಾಟಿಸಿದ ರಾಜೀವ್ ಚಂದ್ರಶೇಖರ್

ಬೆಂಗಳೂರು: 2026 ರ ವೇಳೆಗೆ ಡಿಜಿಟಲ್ ಆರ್ಥಿಕತೆಯು ದೇಶದ ಜಿಡಿಪಿಗೆ ಶೇಕಡಾ 20 ಕ್ಕಿಂತ ಹೆಚ್ಚು ಕೊಡುಗೆ ನೀಡಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಹೇಳಿದ್ದಾರೆ.

ಇಂದು ನಗರದಲ್ಲಿ 'ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ತಂತ್ರಜ್ಞಾನವನ್ನು ಅತ್ಯಂತ ವೇಗವಾಗಿ ಅಳವಡಿಸಿಕೊಂಡ ಪ್ರಮುಖ ರಾಷ್ಟ್ರವಾಗಿದೆ ಎಂದಿದ್ದಾರೆ.

2014 ರಲ್ಲಿ ಒಟ್ಟು GDPಯ ಶೇಕಡಾ 5 ರಷ್ಟು ಕೊಡುಗೆ ನೀಡಿದ್ದು, ಡಿಜಿಟಲ್ ಆರ್ಥಿಕತೆ ಪ್ರಸ್ತುತ ಶೇ. 11 ರಷ್ಟು ಕೊಡುಗೆ ನೀಡುತ್ತಿದ್ದು, 2026 ರ ವೇಳೆಗೆ ಶೇಕಡಾ 20 ರಷ್ಟು ಕೊಡುಗೆ ನೀಡಲಿದೆ ಎಂಬ ನಿರೀಕ್ಷೆ ಇದೆ" ಎಂದು ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರು ಸ್ಟಾರ್ಟಪ್ ಹಾಗೂ ಹೊಸ ಇನ್ನೊವೇಷನ್‌ಗೆ ಎಪಿಕ್ ಸೆಂಟರ್ ಆಗಿದೆ. ಭಾರತ ಹೊಸ ಡಿಜಿಟಲ್ ಇನ್ನೋವೇಷನ್‌ನಲ್ಲಿ ಮುಂಚೂಣಿಯಲ್ಲಿದೆ. ದೇಶದ ಪ್ರತಿಯೊಬ್ಬರು ಡಿಜಿಟಲ್ ಅವಕಾಶಗಳನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಡಿಜಿಟಲ್ ಭವಿಷ್ಯದ ಕುರಿತು 2021ರಲ್ಲಿಯೇ ಹೇಳಿದ್ದರು. ಈ ದಶಕವನ್ನು ಟೆಕೇಡ್‌ ಅಂತ ಕರೆದಿದ್ದಾರೆ. ಅಂದರೆ ಭಾರತದಲ್ಲಿ ಡಿಜಿಟಲ್ ಭವಿಷ್ಯದ ಕುರಿತು ಆಗುವ ಬೆಳವಣಿಗೆ ಕಾರಣಕ್ಕಾಗಿ ಪ್ರಧಾನಿಗಳು ಟೆಕೇಡ್ ಅಂತ ಕರೆದಿದ್ದರು. ಭಾರತದ ಆಡಳಿತವನ್ನೇ ಒಂದು ಕೇಸ್ ಸ್ಟಡಿಯಾಗಿ ನೋಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆಗಿರುವ ಡಿಜಿಟಲ್ ಕ್ರಾಂತಿ ಕುರಿತು ಕೇಸ್ ಸ್ಟಡಿ ಮಾಡಬಹುದು ಎಂದೂ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com