ಕೊಡಗು: ಮಳೆ ಕೊರತೆಯಿಂದ ಭತ್ತದ ಕೃಷಿಗೆ ಹಿನ್ನಡೆ!

ಕೊಡಗಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ಆಗಸ್ಟ್ ಮಧ್ಯದ ವೇಳೆಗೆ ಶೇ.39ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ನೈಋತ್ಯ ಮತ್ತು ವಾಯುವ್ಯ ಭಾಗಗಳ ಕೆಲವು ಕಡೆಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಭತ್ತದ ಕೃಷಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. 
ಮಳೆ ಕೊರೆತೆಯಿಂದ ಇನ್ನೂ ನಾಟಿ ಮಾಡದ ಭತ್ತದ ಗದ್ದೆ
ಮಳೆ ಕೊರೆತೆಯಿಂದ ಇನ್ನೂ ನಾಟಿ ಮಾಡದ ಭತ್ತದ ಗದ್ದೆ

ಮಡಿಕೇರಿ: ಕೊಡಗಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ಆಗಸ್ಟ್ ಮಧ್ಯದ ವೇಳೆಗೆ ಶೇ.39ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ನೈಋತ್ಯ ಮತ್ತು ವಾಯುವ್ಯ ಭಾಗಗಳ ಕೆಲವು ಕಡೆಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಭತ್ತದ ಕೃಷಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಹೆಚ್ಚಿನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಭತ್ತದ ನಾಟಿ ಕಾರ್ಯ ಆರಂಭವಾಗಿಲ್ಲ.

ಮಳೆ ಇಲ್ಲದೆ ಇದೇ ಮೊದಲ ಬಾರಿಗೆ ಹತ್ತಿರದಿಂದ ನೀರಿನ ಮೂಲದಿಂದ ಭತ್ತದ ಗದ್ದೆಗೆ ನೀರನ್ನು ಪಂಪ್ ಮಾಡುತ್ತಿರುವುದಾಗಿ ಉತ್ತರ ಕೊಡಗಿನ ಚೇರಂಬಾಣೆ ಸೀಮೆಯ 61 ವರ್ಷದ ರೈತ ಶಿವಪ್ರಸಾದ್ ಹೇಳಿದರು. ಮಳೆಯ ಕೊರತೆಯಿಂದಾಗಿ ತಮ್ಮ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ವಿಳಂಬವಾಗಿದೆ. ಜುಲೈನಲ್ಲಿ ತಯಾರಾದ ಭತ್ತದ ಸಸಿಗಳನ್ನು ನಾಟಿ ಮಾಡಲು ನೀರನ್ನು ಪಂಪ್ ಮಾಡಬೇಕಾದ ಅನೀವಾರ್ಯತೆ ಎದುರಾಗಿದೆ ಎಂದರು. 

ಭತ್ತ ಬೆಳೆಯಲು ಮಳೆಯನ್ನೇ ಅವಲಂಬಿಸಿದ್ದೇವೆ. ಪಂಪ್ ಮಾಡಿದ ನೀರಿನಿಂದ ಭೂಮಿಗೆ ನೀರುಣಿಸಿದರೆ, ಅದು ಹೊರಬರುತ್ತದೆ ಏಕೆಂದರೆ ಮಣ್ಣಿನ ವಿನ್ಯಾಸವು ಅಂತಹದ್ದಾಗಿದೆ ಮತ್ತು ನಂತರ ಭೂಮಿ ಶೀಘ್ರದಲ್ಲೇ ಒಣಗುತ್ತದೆ. ಭತ್ತದ ಸಸಿಗಳನ್ನು ನಾಟಿ ಮಾಡಿದ್ದೇನೆ, ಆದರೆ ಹವಾಮಾನ ನೋಡಿದಾಗ ಅವು ಚೆನ್ನಾಗಿ ಬೆಳೆದು ಉತ್ತಮ ಫಸಲು ಬರುತ್ತದೆ ಎಂಬ ಖಾತ್ರಿ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

ಈ ಹಿಂದೆ ಪ್ರತಿ ವರ್ಷ ಆಗಸ್ಟ್ ಮಧ್ಯದ ವೇಳೆಗೆ ಶೇ.80ರಷ್ಟು ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಲಾಗುತಿತ್ತು. ಆದರೆ ಈ ವರ್ಷ ಶೇ.39ರಷ್ಟು ಮಾತ್ರ ಸಾಗುವಳಿ ಗುರಿ ಸಾಧಿಸಲಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆಯಾಗಿದೆ. ಮಡಿಕೇರಿಯಲ್ಲಿ 6,000 ಹೆಕ್ಟೇರ್‌ನಲ್ಲಿ 1,600 ಹೆಕ್ಟೇರ್‌ನಲ್ಲಿ ಮಾತ್ರ ಸಾಗುವಳಿಯಾಗಿದ್ದು, ಶೇ.26 ರಷ್ಟು ಗುರಿ ಮಾತ್ರ ಸಾಧಿಸಲಾಗಿದೆ. ವಿರಾಜಪೇಟೆಯಲ್ಲಿ, 29,000 ಹೆಕ್ಟೇರ್‌ಗಳಲ್ಲಿ 9,793 ಕೃಷಿಯೊಂದಿಗೆ ಶೇ. 33.7% ರಷ್ಟು ಗುರಿ ಸಾಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com