ಧಾರವಾಡ: ಅಂಡರ್‌ ಪಾಸ್‌ನಲ್ಲಿ ಸಿಲುಕಿದ ಎಲ್‌ಪಿಜಿ ಟ್ಯಾಂಕರ್‌; ಗ್ಯಾಸ್ ಸೋರಿಕೆ, ಸ್ಥಳದಲ್ಲಿ ಆತಂಕದ ವಾತಾವರಣ

ಗ್ಯಾಸ್ ತುಂಬಿದ ಟ್ಯಾಂಕರ್ ಒಂದು ಅಂಡರ್ ಪಾಸ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಗೆ ತಾಗಿ ಗ್ಯಾಸ್ ಲೀಕ್ ಆಗಿರುವ ಘಟನೆ ಧಾರವಾಡದ ಬೇಲೂರು ಗ್ರಾಮದ ಬಳಿಯ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ.
ಅಂಡರ್ ಪಾಸ್ ನಲ್ಲಿ ಸಿಲುಕಿದ ಟ್ಯಾಂಕರ್
ಅಂಡರ್ ಪಾಸ್ ನಲ್ಲಿ ಸಿಲುಕಿದ ಟ್ಯಾಂಕರ್

ಧಾರವಾಡ: ಗ್ಯಾಸ್ ತುಂಬಿದ ಟ್ಯಾಂಕರ್ ಒಂದು ಅಂಡರ್ ಪಾಸ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಗೆ ತಾಗಿ ಗ್ಯಾಸ್ ಲೀಕ್ ಆಗಿರುವ ಘಟನೆ ಧಾರವಾಡದ ಬೇಲೂರು ಗ್ರಾಮದ ಬಳಿಯ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ.

ಜನರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ದೊಡ್ಡ ದುರಂತವನ್ನು ತಪ್ಪಿಸಲು ಹರಸಾಹಸ ಪಡುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೇರೆ ಮಾರ್ಗಗಳ ಮೂಲಕ ವಾಹನ ತಿರುಗಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶಕ್ಕೂ ಪೊಲೀಸರು ನಿರ್ಬಂಧ ಹೇರಿದ್ದಾರೆ. ಧಾರವಾಡ ಕಡೆಗೆ ಸರ್ವಿಸ್ ರಸ್ತೆಗೆ ಪ್ರವೇಶಿಸಲು ದಾಟಲು ಯತ್ನಿಸಿದಾಗ ವಾಹನ ಸಿಕ್ಕಿಹಾಕಿಕೊಂಡಿದೆ. ಘಟನೆ ನಡೆದ ಕೂಡಲೇ ಪೊಲೀಸರು ಮತ್ತು ಇತರ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಧಾರವಾಡ ಎಸ್ಪಿ ತಿಳಿಸಿದ್ದಾರೆ.

ಬೆಳಗಾವಿಯಿಂದ ಬರುವ ವಾಹನಗಳನ್ನು ಬೈಲಹೊಂಗಲ ರಸ್ತೆ ಮೂಲಕ ತಿರುಗಿಸಿ, ಬೆಳಗಾವಿ ಕಡೆಗೆ ಹೋಗುವ ವಾಹನಗಳನ್ನು ಇತರೆ ಒಳರಸ್ತೆಗಳ ಮೂಲಕ ಕಳುಹಿಸಲಾಗುತ್ತಿದೆ. ಪರಿಸ್ಥಿತಿ ಹತೋಟಿಗೆ ಬರುವವರೆಗೆ ಭಾರಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಟ್ಯಾಂಕರ್ ಸಂಪೂರ್ಣ ಖಾಲಿಯಾದ ಬಳಿಕವೇ ರೋಡ್ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸದ್ಯ ಜನರು ಸುತ್ತ ಮುತ್ತ ಓಡಾಡದಂತೆ ನಿರ್ಬಂಧ ಹೇರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com