
ಬೆಂಗಳೂರು: ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಂತಹ ಪ್ರತಿಷ್ಠಿತ ಸಂಸ್ಥೆಯ ಪ್ರವೇಶ ನಿರಾಕರಿಸಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತೀಸ್ತಾ ಸೆಟಲ್ವಾಡ್ ಅವರನ್ನು ನಡೆಸಿಕೊಂಡ ರೀತಿ ನನಗೆ ಆಘಾತ ತರಿಸಿದೆ, ಆಕ ಸಂವಿಧಾನದ ವಿರುದ್ಧವಾಗಿ ಏನಾದರೂ ಮಾತನಾಡಿದ್ದರೇ ನಾನೇ ಮೊದಲು ತಡೆಯುತ್ತಿದ್ದೆ, ಆದರೆ ಅವರು ಕೋಮು ಸೌಹಾರ್ದತೆ ಬಗ್ಗೆ ಮಾತನಾಡಲು ಬಂದಿದ್ದರು.
ವಿವಿಧ ಧರ್ಮಗಳ ನಡುವೆ ಸಹೋದರತ್ವವನ್ನು ಬೆಳೆಸುವ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡುವುದನ್ನು IISc ಯಂತಹ ಪ್ರಧಾನ ಸಂಸ್ಥೆ ಹೇಗೆ ತಡೆಯುತ್ತದೆ? ಎಂದು ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಆಡಳಿತ ಮಂಡಳಿಯ ಈ ರೀತಿ ನಡವಳಿಕೆ ಸ್ವೀಕಾರವಲ್ಲ ಎಂದು ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೀಸ್ತಾ ಸೆಟಲ್ವಾಡ್ ಪದ್ಮಶ್ರೀ ಪುರಸ್ಕೃತರು. ಕೇಂದ್ರವು ಆಕೆಯನ್ನು ಬೇಟೆಯಾಡುತ್ತಿದ್ದರೂ, ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿಲ್ಲ. ಅವರು ಕೋಮು ಸೌಹಾರ್ದತೆಯ ಬಗ್ಗೆ ಮಾತನಾಡುತ್ತಿದ್ದಾರೆ, ಇದು ಸಮಯದ ಅಗತ್ಯವಾಗಿದೆ. ಅವರನ್ನು ತಡೆದದ್ದು ಸಮಂಜಸವಲ್ಲ ಎಂದು ಕೆಪಿಸಿಸಿ ಮುಖಂಡ ಸಲೀಂ ಅಹ್ಮದ್ ತಿಳಿಸಿದ್ದಾರೆ.
Advertisement