ನಾಗರ ಪಂಚಮಿಯಂದು ರಜೆ ಘೋಷಿಸಿ: ಜಿಲ್ಲಾಧಿಕಾರಿಗೆ ಶಾಸಕ ಸುನೀಲ್ ಕುಮಾರ್ ಮನವಿ

ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 21 ರಂದು ರಜೆ ಘೋಷಿಸುವಂತೆ ಕಾರ್ಕಳ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸುನೀಲ್ ಕುಮಾರ್
ಸುನೀಲ್ ಕುಮಾರ್

ಮಂಗಳೂರು: ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 21 ರಂದು ರಜೆ ಘೋಷಿಸುವಂತೆ ಕಾರ್ಕಳ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

'ನಾಗರ ಪಂಚಮಿಯು ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳನ್ನು ಒಳಗೊಂಡಿರುವ ತುಳುನಾಡಿನಲ್ಲಿ ಹಿಂದೂಗಳು ಮತ್ತು ಜೈನರು ಆಚರಿಸುವ ನಾಗ ಪಂಚಮಿ ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿದ್ದು, ದೈವ ದೇವರುಗಳ ಆರಧಾನೆಯಲ್ಲಿ ನಾಗರಾಧನೆಯು ಪ್ರಮುಖವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ರಜೆ ಘೋಷಿಸುವಂತೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ.

ತುಳುವರ ವಿಶೇಷ ಹಬ್ಬವಾದ ನಾಗರ ಪಂಚಮಿಯಂದು ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕೆಂದು ಮಾಜಿ ಸಚಿವ ಸುನೀಲ್ ಕುಮಾರ್ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com