ವಿಧಾನಪರಿಷತ್ ಸ್ಥಾನಕ್ಕೆ ಸೀತಾರಾಂ, ಉಮಾಶ್ರೀ, ಸುಧಾಮ್‌ ದಾಸ್‌ ಹೆಸರಿಗೆ ರಾಜ್ಯಪಾಲರ ಅನುಮೋದನೆ!

ದಲಿತ ಸಚಿವರ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಿದ್ದ ಮೂವರ ಹೆಸರುಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಅನುಮೋದನೆ ನೀಡಿದ್ದಾರೆ. 
ಉಮಾಶ್ರೀ-ಸೀತಾರಾಮ್-ಸುಧಾಮ್ ದಾಸ್
ಉಮಾಶ್ರೀ-ಸೀತಾರಾಮ್-ಸುಧಾಮ್ ದಾಸ್
Updated on

ಬೆಂಗಳೂರು: ದಲಿತ ಸಚಿವರ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಿದ್ದ ಮೂವರ ಹೆಸರುಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಅನುಮೋದನೆ ನೀಡಿದ್ದಾರೆ. 

ಉಮಾಶ್ರೀ ಹೊರತುಪಡಿಸಿ ಸೀತಾರಾಂ, ಸುಧಾಮ್‌ ದಾಸ್‌ ಅವರ ನಾಮನಿರ್ದೇಶನಕ್ಕೆ ದಲಿತ ಸಚಿವರು ಹಾಗೂ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ಗೂ ಪತ್ರ ಬರೆದಿತ್ತು. ಇದೀಗ ದಲಿತ ಸಚಿವರು, ನಾಯಕರಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ಸೀತಾರಾಂ ಮತ್ತು ಸುಧಾಮ್ ದಾಸ್ ಬದಲಿಗೆ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ದಲಿತ ಸಚಿವರು ಒತ್ತಾಯಿಸಿದ್ದರು. ಇಷ್ಟೇ ಅಲ್ಲದೆ, ಇವರಿಬ್ಬರ ವಿರುದ್ಧ ರಾಜ್ಯಪಾಲರಿಗೂ ದೂರು ನೀಡಿದ್ದರು. ಇವೆಲ್ಲವನ್ನೂ ಮೀರಿ ಪರಿಷತ್ ಸ್ಥಾನ ಪಡೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com