ಕಾಲೇಜಿನ ಹೊರಗೆ ಇಬ್ಬರು ಎನ್ಎಲ್ಎಸ್ಐ ಯು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ದರೋಡೆ

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ದ್ವಿತೀಯ ವರ್ಷದ ವಿದ್ಯಾರ್ಥಿ ಹಾಗೂ ಆತನ ಸಹಪಾಠಿ ಇಬ್ಬರನ್ನೂ ಚಾಕು ತೋರಿಸಿ ಬೆದರಿಸಿ ಸಶಸ್ತ್ರ ದರೋಡೆಕೋರರೊಬ್ಬರು ದರೋಡೆ ಮಾಡಿರುವ ಘಟನೆ ವರದಿಯಾಗಿದೆ. 
ದರೋಡೆ (ಸಂಗ್ರಹ ಚಿತ್ರ)
ದರೋಡೆ (ಸಂಗ್ರಹ ಚಿತ್ರ)

ಬೆಂಗಳೂರು:ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ದ್ವಿತೀಯ ವರ್ಷದ ವಿದ್ಯಾರ್ಥಿ ಹಾಗೂ ಆತನ ಸಹಪಾಠಿ ಇಬ್ಬರನ್ನೂ ಚಾಕು ತೋರಿಸಿ ಬೆದರಿಸಿ ಸಶಸ್ತ್ರ ದರೋಡೆಕೋರರೊಬ್ಬರು ದರೋಡೆ ಮಾಡಿರುವ ಘಟನೆ ವರದಿಯಾಗಿದೆ. 

ಇಬ್ಬರೂ ವಿದ್ಯಾರ್ಥಿಗಳಿಂದ ಮೊಬೈಲ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  ಬೆಂಗಳೂರು ವಿವಿಯ ರಸ್ತೆಯಲ್ಲಿರುವ ಕಾಲೇಜು ಗೇಟ್ ನ ನಂ.02 ರ ಬಳಿ ರಾತ್ರಿ 12.15 ರ ವೇಳೆಗೆ ವಿದ್ಯಾರ್ಥಿಗಳು ಕುಳಿತಿದ್ದರು. ಈ ಅವಧಿಯಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕು ಹಿಡಿದು ಬೆದರಿಕೆ ಹಾಕಿ ಇಬ್ಬರೂ ಸಂತ್ರಸ್ತರ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. 

ಗೌತಮ್ ರಾಜ್ ಫುಲೇರಾ ಮತ್ತು ನಿಶು ರಾಣಿ ಸಂತ್ರಸ್ತರಾಗಿದ್ದಾರೆ. ಬಳಿಕ ಸಂತ್ರಸ್ತ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಗೆ ಕರೆ ಮಾಡಿ ಮೊಬೈಲ್ ನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ದುಷ್ಕರ್ಮಿಗಳು ಮೊಬೈಲ್ ವಾಪಸ್ ಬೇಕೆಂದರೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಹಣ ನೀಡದೇ ಇದ್ದಲ್ಲಿ ಮೊಬೈಲ್ ನಲ್ಲಿರುವ ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. 

ಬೆದರಿಕೆಗೆ ಹೆದರಿದ ವಿದ್ಯಾರ್ಥಿಗಳು 5,000 ರೂಪಾಯಿ ಕಳಿಸಿದ್ದಾರೆ. ಆದರೆ ಫೋನ್ ಗಳನ್ನು ದುಷ್ಕರ್ಮಿಗಳು ವಾಪಸ್ ನೀಡಲಿಲ್ಲ. 

ಆರೋಪಿಗಳು ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಬಂದು ಸುಮಾರು 45,000 ರೂಪಾಯಿ ಮೌಲ್ಯದ ಫೋನ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಫುಲೇರಾ  ಮುಂಜಾನೆ 3.30 ರ ಸುಮಾರಿಗೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿ ತಪ್ಪಿಸಿಕೊಂಡ ನಂತರ, ಫುಲೇರಾ ಪರಿಚಿತ ವ್ಯಕ್ತಿಯ ಮೊಬೈಲ್ ಫೋನ್ ತೆಗೆದುಕೊಂಡು ಅವನ ಫೋನ್‌ಗೆ ಕರೆ ಮಾಡಿದನು. ಆಗ ಆರೋಪಿ ಸಂತ್ರಸ್ತನ ಬಳಿ 15,000 ರೂಪಾಯಿ ಬೇಡಿಕೆ ಇಟ್ಟಿದ್ದ. ಆದರೆ ಸಂತ್ರಸ್ತರು 5,000 ರೂಪಾಯಿ ಕಳಿಸಿದರು. ಹಣ ಸಿಕ್ಕ ಬಳಿಕ ಎರಡೂ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 ರ ಅಡಿಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com