ಚಂದ್ರಯಾನ-3: ಸಂವಹನದಲ್ಲಿ ನಿರ್ಣಾಯಕ ಪಾತ್ರ ವಹಿಸುವ 'ಆಂಪ್ಲಿಫಯರ್' ಅಭಿವೃದ್ಧಿಪಡಿಸಿದ ಕನ್ನಡಿಗ ದಾರುಕೇಶ!

ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್‌ನ ಪ್ರಮುಖ ಭಾಗವಾದ 5-ವ್ಯಾಟ್ ಸಿಗ್ನಲ್ ಆಂಪ್ಲಿಫೈಯರ್ (ಸಂವಹನಕ್ಕಾಗಿ) ಒದಗಿಸಲು  ಬೇರೆ ಯಾವುದೇ ದೇಶಗಳು ಮುಂದೆ ಬಾರದಿದ್ದಾಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಛೇರಿಯ ಸಹಾಯಕ ನಿರ್ದೇಶಕ ಡಾ ಬಿಎಚ್‌ಎಂ ದಾರುಕೇಶ ಮತ್ತು ಅವರ ತಂಡವು ಆಂಪ್ಲಿಫೈಯರ್‌ಗಳನ್ನು ಅಭಿವೃದ್ಧಿಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹಲವಾರು ವಿಜ್ಞಾನಿಗಳು, ತಂತ್ರಜ್ಞರು ಮತ್ತು ಉದ್ಯಮಿಗಳು ಮತ್ತಿತರರು ಸೇರಿ ಒಂದು ತಂಡದ ಕೆಲಸ ಮಾಡುವುದರೊಂದಿಗೆ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್‌ನ ಪ್ರಮುಖ ಭಾಗವಾದ 5-ವ್ಯಾಟ್ ಸಿಗ್ನಲ್ ಆಂಪ್ಲಿಫೈಯರ್ (ಸಂವಹನಕ್ಕಾಗಿ) ಒದಗಿಸಲು  ಬೇರೆ ಯಾವುದೇ ದೇಶಗಳು ಮುಂದೆ ಬಾರದಿದ್ದಾಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಛೇರಿಯ ಸಹಾಯಕ ನಿರ್ದೇಶಕ ಡಾ ಬಿಎಚ್‌ಎಂ ದಾರುಕೇಶ ಮತ್ತು ಅವರ ತಂಡವು ಆಂಪ್ಲಿಫೈಯರ್‌ಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳನ್ನು ಹೆಚ್ಚಾಗಿ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೈನ್ಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.  ದಾರುಕೇಶ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು.

ಬಾಹ್ಯಾಕಾಶ ಕಾರ್ಯಾಚರಣೆಗಳ ಸಂದರ್ಭದಲ್ಲಿ, ಲ್ಯಾಂಡರ್ ಮತ್ತು ರೋವರ್‌ನಿಂದ ಸಂದೇಶವನ್ನು ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಮೇಲ್ಮೈಯಲ್ಲಿ ಸುತ್ತುತ್ತಿರುವ ಉಪಗ್ರಹಕ್ಕೆ ತಲುಪಿಸಲು ಆಂಪ್ಲಿಫೈಯರ್‌ಗಳು ಪ್ರಮುಖವಾಗಿವೆ. ಇಸ್ರೋ ತನ್ನ ಚಂದ್ರನ ಕಾರ್ಯಾಚರಣೆಗಳಿಗಾಗಿ 5-ವ್ಯಾಟ್ ಸಿಗ್ನಲ್ ಆಂಪ್ಲಿಫೈಯರ್  ಹುಡುಕುತ್ತಿತ್ತು.

ಜಪಾನಿನ ಸಂಸ್ಥೆಯೊಂದು ತನ್ನದೇ ಆದ 12-ವ್ಯಾಟ್ ಆಂಪ್ಲಿಫೈಯರ್ ಒದಗಿಸಲು ಒಪ್ಪಿಕೊಂಡಿತ್ತು. ಆದಾಗ್ಯೂ, ಇದು ಬಾಹ್ಯಾಕಾಶ ಪ್ರಯಾಣದಲ್ಲಿ ಬಳಸಲು ಸೂಕ್ತವಲ್ಲವೆಂದು ಇಸ್ರೋ ತನ್ನದೇ ಆದ ಆಂಪ್ಲಿಫೈಯರ್ ಅಭಿವೃದ್ಧಿಪಡಿಸಬೇಕಾಗಿತ್ತು. ಇಂಟಿಗ್ರೇಟೆಡ್ ಸರ್ಕ್ಯೂಟ್ (IC) ವಿನ್ಯಾಸ ತಂಡದ ಮುಖ್ಯಸ್ಥರಾಗಿದ್ದ ದಾರುಕೇಶ ಅವರಿಗೆ ಈ ಜವಾಬ್ದಾರಿಯನ್ನು ವಹಿಸಲಾಯಿತು. ಅವರ ತಂಡವು ಅಭಿವೃದ್ಧಿಪಡಿಸಿದ 5-ವ್ಯಾಟ್ ಆಂಪ್ಲಿಫೈಯರ್ ಇಸ್ರೋದಿಂದ ವಿವಿಧ ಪ್ರಶಸ್ತಿಗಳನ್ನು ಗೆದ್ದಿದೆ. ಈ ಆಂಪ್ಲಿಫೈಯರ್‌ಗಳನ್ನು ಚಂದ್ರಯಾನ-1 ಮತ್ತು 2, ಮಂಗಳಯಾನ ಮತ್ತು ಈಗ ಚಂದ್ರಯಾನ 3 ರ ಲ್ಯಾಂಡರ್ ಮತ್ತು ರೋವರ್‌ನಲ್ಲಿ ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಭೂಮಿಯಿಂದ ಉಡಾವಣೆಯಾಗುವ ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯ ಸ್ಥಿತಿಯನ್ನು ತಿಳಿಯಲು ಆಂಪ್ಲಿಫೈಯರ್ ಅಗತ್ಯವಿದೆ. ಇತರ ದೇಶಗಳು ಹಿಂದೆ ಸರಿದ ಸಮಯದಲ್ಲಿ ಅದನ್ನು ಅಭಿವೃದ್ಧಿಪಡಿಸಲು ನನಗೆ ಮತ್ತು ನನ್ನ ತಂಡಕ್ಕೆ ಇದು ಒಂದು ಅವಕಾಶ ದೊರೆಯಿತು ಎಂದು ದಾರುಕೇಶ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸುವರ್ಣಮ್ಮ ಮತ್ತು ಮಹದೇವಯ್ಯ ದಂಪತಿಗೆ 1974ರ ಆಗಸ್ಟ್ 6ರಂದು ಜನಿಸಿದ ದಾರುಕೇಶ ಅವರು 1998 ರಲ್ಲಿ ಇಸ್ರೋದಲ್ಲಿ ವಿಜ್ಞಾನಿಯಾಗಿ ನೇಮಕಗೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com