'ಎಲ್ಲಾ ಚಟುವಟಿಕೆಗಳು ನಿಗದಿತವಾಗಿ ಸಾಗುತ್ತಿದ್ದು ಸಹಜ ಸ್ಥಿತಿಯಲ್ಲಿವೆ': ಇಸ್ರೊ ಮಾಹಿತಿ

ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ನಿಗದಿತ ಹಂತದಲ್ಲಿದ್ದು, ಸಹಜವಾಗಿ ಸಾಗುತ್ತಿದೆ. ಎಲ್ಲಾ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ.
ಚಂದ್ರಯಾನ-3 ಮಿಷನ್
ಚಂದ್ರಯಾನ-3 ಮಿಷನ್

ಬೆಂಗಳೂರು: ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ನಿಗದಿತ ಹಂತದಲ್ಲಿದ್ದು, ಸಹಜವಾಗಿ ಸಾಗುತ್ತಿದೆ. ಎಲ್ಲಾ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ.

ಚಂದ್ರಯಾನ-3 ಮಿಷನ್ ನ ಎಲ್ಲಾ ಚಟುವಟಿಕೆಗಳು ನಿಗದಿತವಾಗಿ ಸಾಗುತ್ತಿದ್ದು, ಎಲ್ಲಾ ವ್ಯವಸ್ಥೆಗಳು ಸಹಜವಾಗಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳು ILSA, RAMBHA ಮತ್ತು ChaSTE ಇಂದು ತೆರೆದುಕೊಂಡಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿದೆ. SHAPE ಪೇಲೋಡ್ ತೆರೆದುಕೊಂಡಿವೆ ಎಂದು ಹೇಳಿದ್ದಾರೆ.

ಬಾಹ್ಯಾಕಾಶಕ್ಕೆ 40 ದಿನಗಳ ಪ್ರಯಾಣದ ನಂತರ, ಚಂದ್ರಯಾನ-3 ಲ್ಯಾಂಡರ್, 'ವಿಕ್ರಮ್', ಮೊನ್ನೆ ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವವನ್ನು ಮೃದುವಾಗಿ ಸ್ಪರ್ಶಿಸಿದೆ. ಭಾರತವು ಯುಎಸ್, ರಷ್ಯಾ ಮತ್ತು ಚೀನಾದ ನಂತರ ಚಂದ್ರನ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದ ನಾಲ್ಕನೇ ರಾಷ್ಟ್ರವಾಗಿದ್ದು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. 

ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ವಿಕ್ರಮ್ ಲ್ಯಾಂಡರ್ ನ್ನು ಚಂದ್ರನ ಮೇಲ್ಮೈಯಲ್ಲಿ ಕೆಳಗಿಳಿಸಿದೆ. ಲ್ಯಾಂಡಿಂಗ್‌ಗೆ ಮೊದಲು ಸಮತಲ ಸ್ಥಾನಕ್ಕೆ ವಾಲುತ್ತದೆ. ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು.

ಆಗಸ್ಟ್ 5 ರಂದು ಚಂದ್ರನ ಕಕ್ಷೆಯಲ್ಲಿ ಇರಿಸಲಾದ ಬಾಹ್ಯಾಕಾಶ ನೌಕೆಯ ಉಡಾವಣೆಗಾಗಿ GSLV ಮಾರ್ಕ್ 3 (LVM 3) ಹೆವಿ-ಲಿಫ್ಟ್ ಉಡಾವಣಾ ವಾಹನವನ್ನು ಬಳಸಲಾಯಿತು. 

ಚಂದ್ರನ ಮೇಲೆ ಇಳಿಯುವ ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ಬಿಡುಗಡೆ: ಚಂದ್ರನ ಮೇಲೆ ಇಳಿಯುವ ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋವೊಂದನ್ನು ಇಸ್ರೋ ಇಂದು ಬಿಡುಗಡೆ ಮಾಡಿದೆ. ಲ್ಯಾಂಡರ್ ಕೆಳಗಿಳಿಯುವ ವೇಗಕ್ಕೆ ತಕ್ಕಂತೆ ವಿಡಿಯೋವನ್ನು ಸೆರೆಹಿಡಿದಿದೆ. ಈ ವೇಳೆ ರೋವರ್‌ ಮೇಲ್ಮೈನ ಒಂದು ಭಾಗ ಮತ್ತು ಚಂದ್ರನ ಮೇಲಿರುವ ಗುಳಿಗಳು ಕ್ಯಾಮರಾ ಕಣ್ಣಿಗೆ ಗೋಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com