ಬೆಂಗಳೂರು: ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ತನಿಖೆಗೆ ಪೋಷಕರ ಆಗ್ರಹ

ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ ವಾಪಸ್ ಮನೆಗೆ ಬಂದು ಸಾವನ್ನಪ್ಪಿರೋ ದಾರುಣ ಘಟನೆ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. 14 ವರ್ಷದ ಜೆಸ್ಸಿಕಾ ಮೃತ ಬಾಲಕಿ.
ಜೆಸ್ಸಿಕಾ
ಜೆಸ್ಸಿಕಾ

ಬೆಂಗಳೂರು: ನಗರದಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿ ತನ್ನ ಅಪಾರ್ಟ್‌ಮೆಂಟ್ ಕಟ್ಟಡದ 12 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದುರಂತ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಆಕೆಯ ಪೋಷಕರು ಒತ್ತಾಯಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ನಗರದ ಬೆಳ್ಳಂದೂರು ಬಡಾವಣೆಯಲ್ಲಿರುವ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, 15 ವರ್ಷದ ಜೆಸ್ಸಿಕಾ ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂಲತಃ ತಮಿಳುನಾಡಿನವರಾದ ಜೆಸ್ಸಿಕಾ ಅವರ ಪೋಷಕರು -- ಡೊಮಿನಿಕ್ ಮತ್ತು ದೇವಿ - ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬೆಂಗಳೂರಿನಲ್ಲಿ ನೆಲೆಸಿದ್ದರು ಮತ್ತು ಅವರನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಿದ್ದರು. ಜೆಸ್ಸಿಕಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಏಳು ದಿನ ಮಾತ್ರ ಶಾಲೆಗೆ ಹಾಜರಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಶಾಲೆಯ ಆಡಳಿತ ಮಂಡಳಿ ಆಕೆಯ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಇದಾದ ನಂತರ, ಸಾಫ್ಟ್‌ವೇರ್ ಪ್ರೊಫೆಶನಲ್ ಆದ ಡೊಮಿನಿಕ್ ತನ್ನ ಹೆಂಡತಿಗೆ ಕರೆ ಮಾಡಿ ಜೆಸ್ಸಿಕಾಳನ್ನು ವಿಚಾರಿಸುವಂತೆ ಹೇಳಿದ್ದಾರೆ. ಶಾಲಾ ಶಿಕ್ಷಕಿಯೂ ಆದ ದೇವಿ, ಜೆಸ್ಸಿಕಾಗೆ ಕರೆ ಮಾಡಿ, ಆಕೆಯನ್ನು ಭೇಟಿಯಾಗಲು ಶಾಲೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ತಾಯಿಯಿಂದ ಕರೆ ಬಂದ ಸುಮಾರು 20 ನಿಮಿಷಗಳ ನಂತರ, ಜೆಸ್ಸಿಕಾ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಸ್ಸಿಕಾ ಓದುತ್ತಿದ್ದ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದೇವಿ, ಕಳೆದ ವರ್ಷ ತನ್ನ ಕೆಲಸದ ಸ್ಥಳವನ್ನು ಬದಲಾಯಿಸಿದ್ದರು, ನಂತರ ಜೆಸ್ಸಿಕಾಳ ವರ್ತನೆಯು ತೀವ್ರವಾಗಿ ಬದಲಾಯಿತು. ಅವಳು ತರಗತಿಗಳಿಗೆ ಗೈರುಹಾಜರಾಗಿ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು ಎನ್ನಲಾಗಿದೆ. ಜೆಸ್ಸಿಕಾ ಪ್ರತಿದಿನ ತನ್ನ ಶಾಲಾ ಸಮವಸ್ತ್ರವನ್ನು ಧರಿಸಿ ಬೆಳಿಗ್ಗೆ ಮನೆಯಿಂದ ಹೊರಗೆ ಬರುತ್ತಿದ್ದಳು ಮತ್ತು ಆಕೆಯ ಪೋಷಕರು ಕೆಲಸಕ್ಕೆ ಹೋದ ನಂತರ ವಾಪಸ್ ಮನೆಗೆ ಹಿಂದಿರುಗಿ ತನ್ನ ನಾಯಿಯೊಂದಿಗೆ ಸಮಯ ಕಳೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಜೆಸ್ಸಿಕಾ ಅವರ ಐಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆಕೆಯ ಸಾವಿಗೆ ಬೇರೆ ಏನಾದರು ಕಾರಣವಿರಬಹುದೇ ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜೆಸ್ಸಿಕಾ ತನ್ನ ಫೋನ್ ಜೊತೆಯಲ್ಲೇ ಹಾರಿದ್ದರಿಂದ ಫೋನ್ ಕೂಡ ಸಂಪೂರ್ಣ ಹಾಳಾಗಿದ್ದು, ಪೊಲೀಸರು ಆಕೆಯ ಕಾಲ್ ಲಿಸ್ಟ್ ಅನ್ನು ಕೂಡ ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com