ಬೃಹತ್ ಹುಲಿ ಪ್ರತ್ಯಕ್ಷ
ರಾಜ್ಯ
ಯಲ್ಲಾಪುರ-ಕೈಗಾ ರಸ್ತೆಯಲ್ಲಿ ಬೃಹತ್ ಹುಲಿ ಪ್ರತ್ಯಕ್ಷ, ವಿಡಿಯೋ ವೈರಲ್
ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಬುಧವಾರ ಹಗಲು ಹೊತ್ತಿನಲ್ಲಿಯೇ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೈಗಾ(ಉತ್ತರ ಕನ್ನಡ): ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಬುಧವಾರ ಹಗಲು ಹೊತ್ತಿನಲ್ಲಿಯೇ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಬೃಹತ್ ಹುಲಿಯೊಂದು ಕಾಣಿಸಿಕೊಂಡಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಉದ್ಯೋಗಿಯೊಬ್ಬರಿಗೆ ಈ ಹುಲಿ ಕಾಣಿಸಿಕೊಂಡಿದೆ.
ಎನ್ ಪಿಸಿಎಲ್ ಉದ್ಯೋಗಿ ಕೈಗಾ ಕಡೆಗೆ ಬರುತ್ತಿದ್ದಾಗ ಯಲ್ಲಾಪುರದ ರಸ್ತೆಯಲ್ಲಿ ದೊಡ್ಡ ಹುಲಿ ಎದುರಾಗಿದೆ.
ಈ ವೇಳೆ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಕಾರಿನ ಸಮೀಪದಲ್ಲೇ ಇದ್ದ ಹುಲಿಯ ಕೆಲವು ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
"ನಾವು ಹುಲಿಯನ್ನು ಅಷ್ಟು ಹತ್ತಿರದಿಂದ ನೋಡಿದ್ದೇವೆ ಎಂದು ನಮಗೆ ನಂಬಲಾಗುತ್ತಿಲ್ಲ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಕೈಗಾ ಪ್ರದೇಶವು ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಒಂದು ಭಾಗವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ