ಲಂಚ ಸ್ವೀಕರಿಸುವಾಗ ಆಳಂದ ತಹಶೀಲ್ದಾರ್, ಆರ್ ಐ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ

ಕಲಬುರಗಿ ಜಿಲ್ಲೆಯ ಆಳಂದ ತಹಶೀಲ್ದಾರ್​ ಯಲ್ಲಪ್ಪ ಸುಬೇದಾರ್ ಮತ್ತು ರೆವಿನ್ಯೂ ಇನ್ಸ್​ಪೆಕ್ಟರ್​ ರಾಜಶೇಖರ್ ಅವರು ಗುರುವಾರ ಲಂಚ ಸ್ವೀಕರಿಸುವಾಗ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್
ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಹಶೀಲ್ದಾರ್​ ಯಲ್ಲಪ್ಪ ಸುಬೇದಾರ್ ಮತ್ತು ರೆವಿನ್ಯೂ ಇನ್ಸ್​ಪೆಕ್ಟರ್​ ರಾಜಶೇಖರ್ ಅವರು ಗುರುವಾರ ಲಂಚ ಸ್ವೀಕರಿಸುವಾಗ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಇಂದು ಆಳಂದ ತಾಲೂಕು ಕಚೇರಿಯಲ್ಲೇ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಮತ್ತು ಆರ್​ಐ ರಾಜಶೇಖರ್​ ಅವರು ಜಮೀನಿಗೆ ಕೃಷಿಯೇತರ ಪ್ರಮಾಣಪತ್ರ ನೀಡಲು ಮೆಹಬೂಬ್ ಪಟೇಲ್​​ ಎನ್ನುವವರಿಂದ 12,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಮಹೆಬೂಬ್ ಪಟೇಲ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಇಂದು 12 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್​ಪಿ ಕರ್ನೂಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ನಾನಾಗೌಡ, ದ್ರುವತಾರೆ, ಅಕ್ಕಮಹಾದೇವಿ ಅವರು ದಾಳಿ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಆರ್‌ಐ ರಾಜಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com