
ಬೆಂಗಳೂರು: ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ (AVGC-XR) ವಲಯದಲ್ಲಿ ಬೆಳೆಯುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ಕರ್ನಾಟಕ ಶ್ರಮಿಸುತ್ತಿದೆ ಎಂದು ಐಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕವು ಕೌಶಲ್ಯದ ಕೇಂದ್ರಬಿಂದುವಾಗುವುದನ್ನು ನೋಡಲು ನಾವು ಬಯಸುತ್ತೇವೆ. ಈ ವಲಯದಲ್ಲಿ ಹೆಚ್ಚಿನ ಇನ್ಕ್ಯುಬೇಟರ್‌ಗಳು ಮತ್ತು ವೇಗವರ್ಧಕಗಳನ್ನು ರಚಿಸಲು ಮಾರ್ಗಗಳನ್ನು ಕಂಡುಹಿಡಿಯಬೇಕು. ಕರ್ನಾಟಕವು ಎವಿಜಿಸಿ-ಎಕ್ಸ್‌ಆರ್ ನೀತಿಯ ಕರಡನ್ನು ಮೊನ್ನೆ ಬುಧವಾರ ಬಿಡುಗಡೆ ಮಾಡಿದ್ದು, ನಿನ್ನೆ ಶುಕ್ರವಾರ ತಜ್ಞರು ಈ ವಲಯದಲ್ಲಿ ಬೆಳೆಯುತ್ತಿರುವ ಅವಕಾಶಗಳ ಕುರಿತು ಚರ್ಚಿಸಿದರು. ಆನ್‌ಲೈನ್ ಕೌಶಲ್ಯ ಗೇಮಿಂಗ್ ಕಂಪನಿ ಗೇಮ್ಸ್24x7 ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಗೇಮಿಂಗ್ ಉದ್ಯಮದ ವೇಗವರ್ಧಕ ಕಾರ್ಯಕ್ರಮ ‘ಗೇಮ್‌ಟೆಕ್ ಆಕ್ಸಿಲರೇಟ್ - ದಿ ಫ್ಯೂಚರ್ ಆಫ್ ಗೇಮಿಂಗ್’ ನ್ನು ಪ್ರಾರಂಭಿಸಿದೆ.
ವೇಗವರ್ಧಕ ಕಾರ್ಯಕ್ರಮದ ಮೂಲಕ, Games24x7 ನವೀನ ಪರಿಹಾರಗಳನ್ನು ನೀಡುವ ಉದ್ಯಮಗಳನ್ನು ಗುರುತಿಸಲು ಮತ್ತು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ. ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಕ್ಷೇತ್ರವು ವೇಗವಾಗಿ ವಿಕಸನಗೊಳ್ಳುತ್ತಿದೆ. ಈ ಉದ್ಯಮವನ್ನು ಬೆಂಬಲಿಸುವುದು ನಿರ್ಣಾಯಕವಾಗಿದೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮಾತ್ರವಲ್ಲದೆ ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ನಮ್ಮ ಡಿಜಿಟಲ್ ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಿದರು.
Advertisement