ರಾಜಸ್ತಾನ ವಿಧಾನಸಭೆ ಚುನಾವಣೆ: ಕಾಂಗ್ರೆಸ್​​ಗೆ ಸೋಲುಣಿಸಿದ ಬಿಜೆಪಿ ಅಭ್ಯರ್ಥಿ 'ಚಿಕ್ಕಪೇಟೆ'ಯ ಬಟ್ಟೆ ವ್ಯಾಪಾರಿ!

ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿಯೊಬ್ಬರು ಶಾಸಕರಾಗಿ ಆಯ್ಕೆಯಾದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ರಾಜಸ್ಥಾನದಲ್ಲಿ ಎಮ್​ಎಲ್​ಎ ಆಗಿದ್ದಾರೆ.
ಲಾಡುಲಾಲ ಪಿಟ್ಲಿಯಾ
ಲಾಡುಲಾಲ ಪಿಟ್ಲಿಯಾ

ಬೆಂಗಳೂರು: ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿಯೊಬ್ಬರು ಶಾಸಕರಾಗಿ ಆಯ್ಕೆಯಾದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ರಾಜಸ್ಥಾನದಲ್ಲಿ ಎಮ್​ಎಲ್​ಎ ಆಗಿದ್ದಾರೆ.

ಲಾಡುಲಾಲ ಪಿಟ್ಲಿಯಾ ಅವರು ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ಇದೀಗ ರಾಜಸ್ಥಾನದ ಸಹಾರಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಸುಮಾರು 1.17 ಲಕ್ಷ ಮತ ಗಳಿಸಿ ಜಯಭೇರಿ ಬಾರಿಸಿದ್ದಾರೆ. ಇನ್ನು ಇವರ ಎದುರಾಳಿಯಾಗಿ ಕಾಂಗ್ರೆಸ್​ ಅಭ್ಯರ್ಥಿ ರಾಜೇಂದ್ರ ತ್ರಿವೇದಿ 54,684 ಮತಗಳನ್ನು ಪಡೆದಿದ್ದು, ಲಾಡುಲಾಲ ಪಿಟ್ಲಿಯಾ ಮುಂದೆ ಸೋಲೊಪ್ಪಿಕೊಂಡಿದ್ದಾರೆ.

ಲಾಡುಲಾಲ ಪಿಟ್ಲಿಯಾ ಅವರು ರಾಜಾಜಿನಗರದ ಜುಗನಹಳ್ಳಿಯ 2ನೇ ಬ್ಲಾಕ್​​ನಲ್ಲಿರುವ ದೊಡ್ಡ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಜವಳಿ ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಆದರೀಗ ರಾಜಸ್ಥಾನದ ಸಹಾರಾದಲ್ಲಿ ಶಾಸಕರಾಗಿದ್ದಾರೆ.

ಸದ್ಯ ಅವರ ಮಕ್ಕಳು ಆ ವ್ಯಾಪಾರ ಮುಂದುವರೆಸಿಕೊಂಡು ಹೋಗುತ್ತಿದ್ದಾರಂತೆ. ಈಗ ಪಿಟ್ಲಿಯಾ ಅವರು ರಾಜಸ್ಥಾನದ ಶಾಸಕರಾಗಿ ಆಯ್ಕೆ ಆಗಿದ್ದಾರೆ. 2018ರಲ್ಲಿ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಪಿಟ್ಲಿಯಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com