ಮೈಸೂರಿನಲ್ಲಿ ವಿದೇಶಿಗರಿಂದ ಅಕ್ರಮವಾಗಿ ಹಣ ಸಂಪಾದನೆ: ಸ್ಥಳೀಯರ ಆರೋಪ

ವಿದ್ಯಾರ್ಥಿ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿ ಕೆಲಸ ಮಾಡದಂತೆ ಅಥವಾ ಹಣ ಸಂಪಾದಿಸದಂತೆ ಕಠಿಣ ಕಾನೂನುಗಳು ಇವೆ. ಆದರೂ ಮೈಸೂರಿನಲ್ಲಿ ವಿದೇಶಿಗರ ದೊಡ್ಡ 'ಅಕ್ರಮ' ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ.
ಮೈಸೂರು
ಮೈಸೂರು

ಮೈಸೂರು: ವಿದ್ಯಾರ್ಥಿ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿ ಕೆಲಸ ಮಾಡದಂತೆ ಅಥವಾ ಹಣ ಸಂಪಾದಿಸದಂತೆ ಕಠಿಣ ಕಾನೂನುಗಳು ಇವೆ. ಆದರೂ ಮೈಸೂರಿನಲ್ಲಿ ವಿದೇಶಿಗರ ದೊಡ್ಡ 'ಅಕ್ರಮ' ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ.

ಅರಮನೆ ನಗರಿಯನ್ನು 'ಅಷ್ಟಾಂಗ ಯೋಗ' ರಾಜಧಾನಿ ಎಂದು ಕರೆಯಲಾಗುತ್ತದೆ. ಸಾವಿರಾರು ವಿದೇಶಿಗರು ವಿಶೇಷವಾಗಿ ಯುರೋಪಿಯನ್ ದೇಶಗಳಿಂದ ಯೋಗ ಕಲಿಯಲು ಮತ್ತು ಪ್ರಮಾಣಪತ್ರ ಪಡೆಯಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಭೇಟಿ ನೀಡುತ್ತಾರೆ. ಆದರೆ ಕೆಲವು ವಿದೇಶಿ ಪ್ರಜೆಗಳು, ಯೋಗವನ್ನು ಕಲಿಯುವ ಅಥವಾ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ನೆಪದಲ್ಲಿ ಈ ದೇಶದ ಕಾನೂನನ್ನು ಉಲ್ಲಂಘಿಸಿ ತ್ವರಿತವಾಗಿ ಹಣ ಸಂಪಾದಿಸುತ್ತಿದ್ದಾರೆ. 

ಮೈಸೂರಿನಲ್ಲಿ ಯೋಗ ತರಗತಿಗಳಿಗೆ ದಾಖಲಾದ ಅಥವಾ ಪ್ರವಾಸಿ ವೀಸಾದಲ್ಲಿ ನಗರಕ್ಕೆ ಭೇಟಿ ನೀಡಿದ ಅನೇಕ ವಿದೇಶಿ ಪ್ರಜೆಗಳು, ಈ ವರ್ಷವೊಂದರಲ್ಲೇ ಸುಮಾರು 10 ಜನ, ಹಣ ಪಡೆದು ಫೋಟೋ ಶೂಟ್ ಯೋಜನೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಇದನ್ನೇ ವೃತ್ತಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರಿಂದ ಉತ್ತಮ ಹಣ ಗಳಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಛಾಯಾಗ್ರಾಹಕರಿಗೆ ಮತ್ತು ಚಲನಚಿತ್ರ ನಿರ್ಮಾಪಕರ ವ್ಯವಹಾರಗಳಿಗೆ ಹಾನಿಯಾಗುತ್ತಿದೆ.

ಕಳೆದ ಆರರಿಂದ ಏಳು ವರ್ಷಗಳಿಂದ ಇದು ಟ್ರೆಂಡ್ ಆಗಿದೆ ಎಂದು ಗೋಕುಲಂ ನಿವಾಸಿ ವಿನಯ್ ಅವರು ಹೇಳಿದ್ದಾರೆ.

ಯೋಗಕ್ಕಾಗಿ ನಗರಕ್ಕೆ ಭೇಟಿ ನೀಡುವ ಹೆಚ್ಚಿನ ವಿದೇಶಿಗರು ತಮ್ಮ ಕ್ಯಾಮೆರಾ, ಲೆನ್ಸ್ ಮತ್ತು ಇತರ ಗೇರ್‌ಗಳನ್ನು ಸಹ ತಂದಿರುತ್ತಾರೆ. ಮೊದಲು, ಅವರು ಶೀಘ್ರವಾಗಿ ಹಣ ಗಳಿಸುವ ಅವಕಾಶಗಳನ್ನು ಹುಡುಕುತ್ತಿದ್ದರು. ಈಗ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ವೃತ್ತಿಪರವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಮುಂಗಡ-ಬುಕಿಂಗ್‌ ಅನ್ನು ಪಡೆಯುತ್ತಿದ್ದಾರೆ. ರೆಫರಲ್‌ಗಳಿಗಾಗಿ ಅವರು ಸ್ಥಳೀಯರಿಗೆ ಕಮಿಷನ್‌ ಸಹ ನೀಡುತ್ತಾರೆ" ಎಂದು ವಿನಯ್ ತಿಳಿಸಿದ್ದಾರೆ.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಸ್ವತಂತ್ರ ಛಾಯಾಗ್ರಾಹಕ, ಮಾರುಕಟ್ಟೆ ಎಷ್ಟು ದೊಡ್ಡದಾಗಿದೆ ಎಂದರೆ ಜನವರಿಯಲ್ಲಿ ಮೈಸೂರಿಗೆ ಭೇಟಿ ನೀಡುವ ವಿದೇಶಿ ಪ್ರಜೆಯೊಬ್ಬರು, ಈಗಾಗಲೇ  ತಮ್ಮ ಸ್ಲಾಟ್‌ಗಳನ್ನು ಓಪನ್ ಮಾಡಿದ್ದು, ಪ್ರತಿ ಚಿತ್ರೀಕರಣಕ್ಕೆ 200 ಯುರೋಗಳನ್ನು ವಿಧಿಸುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com