ಕೆಂಪೇಗೌಡ ಏರ್ ಪೋರ್ಟ್ ರೈಲುಗಳ ಸಂಚಾರ ಚಿಕ್ಕಬಳ್ಳಾಪುರವರೆಗೆ ವಿಸ್ತರಣೆ: ನೈರುತ್ಯ ರೈಲ್ವೆ

ಸಾರ್ವಜನಿಕರ ಒತ್ತಾಸೆಯ ಮೇರೆಗೆ ನೈರುತ್ಯ ರೈಲ್ವೆ ವಿಭಾಗ ಬೆಂಗಳೂರಿನಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಕಡೆಗೆ ಚಲಿಸುವ ಮೂರು ರೈಲುಗಳನ್ನು ಇದೇ ಡಿಸೆಂಬರ್ 11ರಿಂದ ಚಿಕ್ಕಬಳ್ಳಾಪುರದವರೆಗೆ ಹೆಚ್ಚುವರಿ 22 ಕಿ.ಮೀ ವಿಸ್ತರಿಸಿದೆ. ದೇವನಹಳ್ಳಿ ನಿಲ್ದಾಣದಿಂದ ಹೊರಡುವ ಮೂರು ರೈಲುಗಳು ಡಿಸೆಂಬರ್ 11ರಿಂದ ಚಿಕ್ಕಬಳ್ಳಾಪುರದಿಂದ ಸಂಚಾರ ಆರಂಭಿಸಲಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕರ ಒತ್ತಾಸೆಯ ಮೇರೆಗೆ ನೈರುತ್ಯ ರೈಲ್ವೆ ವಿಭಾಗ ಬೆಂಗಳೂರಿನಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಕಡೆಗೆ ಚಲಿಸುವ ಮೂರು ರೈಲುಗಳನ್ನು ಇದೇ ಡಿಸೆಂಬರ್ 11ರಿಂದ ಚಿಕ್ಕಬಳ್ಳಾಪುರದವರೆಗೆ ಹೆಚ್ಚುವರಿ 22 ಕಿ.ಮೀ ವಿಸ್ತರಿಸಿದೆ. ದೇವನಹಳ್ಳಿ ನಿಲ್ದಾಣದಿಂದ ಹೊರಡುವ ಮೂರು ರೈಲುಗಳು ಡಿಸೆಂಬರ್ 11ರಿಂದ ಚಿಕ್ಕಬಳ್ಳಾಪುರದಿಂದ ಸಂಚಾರ ಆರಂಭಿಸಲಿವೆ. 

ವಿಮಾನ ನಿಲ್ದಾಣದ ಕಡೆಗೆ ಹೋಗಲು ರೈಲುಗಳು ಅಷ್ಟೊಂದು ಇಲ್ಲದಿದ್ದುದರಿಂದ ವ್ಯಾಪಾರಸ್ಥರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಲು ಪ್ರಯಾಣಿಕರು ಮತ್ತು ಸಂಚಾರ ತಜ್ಞರಿಂದ ಸಾಕಷ್ಟು ಬೇಡಿಕೆ ಬಂದಿತ್ತು. 
ರೈಲು ಸಂಖ್ಯೆ 06531 ನ್ನು ಬೆಂಗಳೂರು ಕಂಟೋನ್ಮೆಂಟ್‌ನಿಂದ ಚಿಕ್ಕಬಳ್ಳಾಪುರಕ್ಕೆ, ಅದರ ಜೋಡಿ ರೈಲು ಸಂಖ್ಯೆ 06532 ಸಹ ಚಿಕ್ಕಬಳ್ಳಾಪುರದಲ್ಲಿ ಪ್ರಾರಂಭವಾಗಿ ಕಂಟೋನ್ಮೆಂಟ್‌ನಲ್ಲಿ ಪ್ರಯಾಣ ಮುಗಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. 

ಸದ್ಯಕ್ಕೆ, ಈ ರೈಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಂಚಾರ ಆರಂಭಿಸಿ ದೇವನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 06593 ಯಶವಂತಪುರದಲ್ಲಿ ಆರಂಭಗೊಂಡು ಚಿಕ್ಕಬಳ್ಳಾಪುರದಲ್ಲಿ ಕೊನೆಗೊಳ್ಳುತ್ತದೆ ಮತ್ತು ಅದರ ಜೋಡಿ ರೈಲು 06594 ಚಿಕ್ಕಬಳ್ಳಾಪುರದಲ್ಲಿ ಸಂಚಾರ ಪ್ರಾರಂಭಿಸುತ್ತದೆ. ಪ್ರಸ್ತುತ, ಈ ರೈಲು ದೇವನಹಳ್ಳಿಯಲ್ಲಿ ಕೊನೆಯಾಗುತ್ತದೆ. 

ರೈಲು ಸಂಖ್ಯೆ 06538 ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಸಂಚಾರ ಆರಂಭಿಸಿ ಚಿಕ್ಕಬಳ್ಳಾಪುರದಲ್ಲಿ ಕೊನೆಗೊಳ್ಳುತ್ತದೆ, ರೈಲು ಸಂಖ್ಯೆ 06535 ಚಿಕ್ಕಬಳ್ಳಾಪುರದಲ್ಲಿ ಸಂಚಾರ ಆರಂಭಿಸಿ ಕಂಟೋನ್ಮೆಂಟ್‌ನಲ್ಲಿ ಕೊನೆಗೊಳ್ಳುತ್ತದೆ.

ರೈಲು ಸಂಖ್ಯೆ 06533 ದೇವನಹಳ್ಳಿಯಿಂದ ಯಲಹಂಕಕ್ಕೆ; ರೈಲು ಸಂಖ್ಯೆ 06534 ಯಲಹಂಕದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ; ರೈಲು ಸಂಖ್ಯೆ 06539 ದೇವನಹಳ್ಳಿಯಿಂದ ಯಲಹಂಕಕ್ಕೆ ಮತ್ತು ರೈಲು ಸಂಖ್ಯೆ 06540 ಯಲಹಂಕದಿಂದ ದೇವನಹಳ್ಳಿ ರೈಲನ್ನು ಚಿಕ್ಕಬಳ್ಳಾಪುರಕ್ಕೆ ರೈಲುಗಳ ವಿಸ್ತರಣೆಗೆ ಅನುಕೂಲ ಮಾಡಿಕೊಡಲು ಈ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com