ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತದ 36 ಆರೋಗ್ಯಕರ ಕೆಲಸದ ಕಂಪನಿಗಳ ಹೆಸರು ಪ್ರಕಟಿಸಿದ ಆರೋಗ್ಯ ವರ್ಲ್ಡ್!

ತಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುವ ಹಾಗೂ  ಆರೋಗ್ಯಕರ ವಾತಾವರಣ ನಿರ್ಮಿಸಿರುವ 36 ಭಾರತೀಯ ಕಂಪನಿಗಳನ್ನು 'ಆರೋಗ್ಯಕರ ಕೆಲಸದ ಸ್ಥಳಗಳು' ಎಂದು ಗುರುತಿಸಲಾಗಿದೆ.

ಬೆಂಗಳೂರು: ತಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುವ ಉದ್ದೇಶದಿಂದ, 36 ಭಾರತೀಯ ಕಂಪನಿಗಳನ್ನು  'ಆರೋಗ್ಯಕರ ಕೆಲಸದ ಸ್ಥಳಗಳು' ಎಂದು ಆರೋಗ್ಯ ವರ್ಲ್ಡ್  ಪಟ್ಟಿ ಪ್ರಕಟಿಸಿದೆ.

ಆರೋಗ್ಯ ವರ್ಲ್ಡ್ ಸಾಂಕ್ರಾಮಿಕವಲ್ಲದ ರೋಗಗಳನ್ನು (NCD) ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಆರೋಗ್ಯ ವರ್ಲ್ಡ್‌ನ ಆರೋಗ್ಯಕರ ವರ್ಕ್‌ಪ್ಲೇಸ್ ಕಾರ್ಯಕ್ರಮದ ಮುಖ್ಯಸ್ಥರಾದ ಶ್ರಬಾನಿ ಬ್ಯಾನರ್ಜಿ ಮಾತನಾಡಿ, ಅವರು ಆರೋಗ್ಯದ ಬಗ್ಗೆ ಡೇಟಾ ಆಧಾರಿತ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಸಾಂಕ್ರಾಮಿಕ ರೋಗ  ತಡೆಗಟ್ಟುವಿಕೆಯ ಬಗ್ಗೆ ಉದ್ಯೋಗದಾತರು ಮತ್ತು ನೌಕರರಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದರು.

ನೌಕರರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಹೊಸ-ಯುಗದ ನಾಯಕತ್ವಕ್ಕೆ ಇದು ಸ್ಫೂರ್ತಿದಾಯಕವಾಗಿದೆ,  ಸುಸ್ಥಿರ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ಅಭ್ಯಾಸಗಳನ್ನು ಮುನ್ನಡೆಸುತ್ತದೆ" ಎಂದು ಅವರು ಹೇಳಿದರು.

ಹನಿವೆಲ್ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಕಾನ್ರಾಡ್ ಬೆಂಗಳೂರು, ಬ್ರಿಡ್ಜ್ ಹೆಲ್ತ್ ಮೆಡಿಕಲ್ ಮತ್ತು ಡಿಜಿಟಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಮೀಡಿಯಾ ಮಂತ್ರ, ಟಾಟಾ ಮೋಟಾರ್ಸ್ ಇನ್ಶುರೆನ್ಸ್ ಬ್ರೋಕಿಂಗ್ ಮತ್ತು ಅಡ್ವೈಸರಿ ಸರ್ವಿಸಸ್ ಲಿಮಿಟೆಡ್, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಾನ್ಯತೆ ಪಡೆದಿರುವ 36 ಭಾರತೀಯ ಕಂಪನಿಗಳಾಗಿವೆ,

ತನ್ನ ವಾರ್ಷಿಕ ಆರೋಗ್ಯಕರ ಕಾರ್ಯಸ್ಥಳದ ಸಮ್ಮೇಳನದಲ್ಲಿ ಸಂಸ್ಥೆಯು ಉದ್ಯೋಗಿಗಳ ದೈಹಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಕೆಲಸದ ಸ್ಥಳದಲ್ಲಿ ಎನ್‌ಸಿಡಿ ತಡೆಗಟ್ಟುವಿಕೆಗಾಗಿ ಈ ಆರೋಗ್ಯಕರ ಕೆಲಸದ ಸ್ಥಳಗಳನ್ನು ಗುರುತಿಸಿದೆ.

ನಾವು ಎಲ್ಲಾ 2023 ಆರೋಗ್ಯಕರ ಕೆಲಸದ ಸ್ಥಳಗಳನ್ನು ಅಭಿನಂದಿಸುತ್ತೇವೆ ಮತ್ತು ತಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ತಮ್ಮ ಬದ್ಧತೆ ಮುಂದುವರಿಸುವವರನ್ನು ನಾವು ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ.

ಆರೋಗ್ಯ ವರ್ಲ್ಡ್ ಪಟ್ಟಿಯಲ್ಲಿ 7 ಭಾರತೀಯ ಕಂಪನಿಗಳು ಪ್ಲಾಟಿನಂ ಮಟ್ಟಕ್ಕೆ ಸ್ಥಾನ ಪಡೆದಿವೆ. ಆರೋಗ್ಯ ವರ್ಲ್ಡ್ ಏಳು ಕಂಪನಿಗಳನ್ನು ಪ್ಲಾಟಿನಮ್ ಎಂದು ಗುರುತಿಸಿದೆ, ಇದು ಆರೋಗ್ಯಕರ ಕಾರ್ಯಸ್ಥಳದ ಕಾರ್ಯಕ್ರಮದ ಅತ್ಯುನ್ನತ ಹಂತವಾಗಿದೆ.

ಬೇಯರ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಎಚ್‌ಎಸ್‌ಬಿಸಿ ಎಲೆಕ್ಟ್ರಾನಿಕ್ ಡೇಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್, ಝಜ್ಜರ್ ಪವರ್ ಲಿಮಿಟೆಡ್, ನೆಕ್ಸಸ್ ಸೆಲೆಕ್ಟ್ ಟ್ರಸ್ಟ್, ಆಪ್ಟಮ್ ಗ್ಲೋಬಲ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮತ್ತು ಟಾಟಾ ಮೋಟಾರ್ಸ್ ಈ ಪಟ್ಟಿಯಲ್ಲಿವೆ.

Related Stories

No stories found.

Advertisement

X
Kannada Prabha
www.kannadaprabha.com