ಹುಬ್ಬಳ್ಳಿ: ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ; ಸೇಫ್ಟಿ ಲಾಕರ್​ನಲ್ಲಿಟ್ಟಿದ್ದ 56 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆ!

ಬ್ಯಾಂಕ್​ ಲಾಕರ್​ನಲ್ಲಿ ಭದ್ರವಾಗಿ ಇರಿಸಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಆರೋಪಿಸಿದ ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೊಹ್ಲಿ ಎಂಬವರು ಕೇಶ್ವಾಪೂರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಬ್ಯಾಂಕ್​ ಲಾಕರ್​ನಲ್ಲಿ ಭದ್ರವಾಗಿ ಇರಿಸಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಆರೋಪಿಸಿದ ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೊಹ್ಲಿ ಎಂಬವರು ಕೇಶ್ವಾಪೂರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈಶ್​ ಕೊಹ್ಲಿ ಕೇಶ್ವಾಪೂರದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಬ್ಯಾಂಕ್​ನ ಲಾಕರ್​ನಲ್ಲಿ ಸುಮಾರು 56 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು. ಲಾಕರ್ ಓಪನ್ ಮಾಡುವ ಕೀಲಿ ಈಶ್ ಅವರ ಕೈಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆಗಳು ಕಳುವಾಗಿವೆ ಎಂದು ಅವರು ದೂರಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಈಶ್ ಕೊಹ್ಲಿ ಅವರ  ಒಂದು ಲಾಕರ್ ಸೇಫ್ಟಿಯಾಗಿದ್ದು, ಮತ್ತೊಂದನ್ನು ತೆರೆಯಲು ಸಾಧ್ಯವಾಗಲಿಲ್ಲ. ಬ್ಯಾಂಕ್‌ನ ಇಂತಹ ನಿರ್ಲಕ್ಷ್ಯದಿಂದ ಬ್ಯಾಂಕ್‌ಗಳಲ್ಲಿನ ಸೇಫ್ಟಿ ಲಾಕರ್‌ದಾರರು ದಂಗಾಗಿದ್ದಾರೆ. ಉದ್ಯಮಿ ಈಶ್ ಕೊಹ್ಲಿ (59) ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಬ್ಯಾಂಕ್‌ನ ಉನ್ನತ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲು ಅವರು ನವದೆಹಲಿಗೆ ಹೋಗಬೇಕಾಯಿತು.

ಇದನ್ನೂ ಓದಿ: ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿನ ಯುಪಿಐ ವಹಿವಾಟು ಮಿತಿ 5 ಲಕ್ಷ ರೂ. ಗೆ ಏರಿಕೆ
 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ, ಈಶ್ ಕೊಹ್ಲಿ ತಮ್ಮ ತಂದೆ 1972 ರಲ್ಲಿ ಎರಡು ಲಾಕರ್‌ಗಳನ್ನು ಖರೀದಿಸಿದ್ದರು ಮತ್ತು ಅಂದಿನಿಂದ ಲಾಕರ್‌ಗಳನ್ನು ನಿರ್ವಹಿಸುತ್ತಿದ್ದರು. 2013 ರಲ್ಲಿ ಅವರು ತಮ್ಮ ಪತ್ನಿ ಮತ್ತು ಈಶ್ ಅವರನ್ನು ಬ್ಯಾಂಕಿಗೆ ಕರೆದೊಯ್ದರು ಮತ್ತು ಅವರಿಗೆ ಲಾಕರ್‌ಗಳನ್ನು ತೋರಿಸಿದರು. ಲಾಕರ್‌ಗಳಲ್ಲಿ ಇರಿಸಲಾದ ಬೆಲೆಬಾಳುವ ವಸ್ತುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರು.

ಬ್ಯಾಂಕ್ ಅಧಿಕಾರಿಗಳು ಲೋಪವನ್ನು ಒಪ್ಪಿಕೊಂಡಿದ್ದಾರೆ, ಆದರೆ ಅದನ್ನು ಲಿಖಿತವಾಗಿ ನೀಡಲು ನಿರಾಕರಿಸಿದರು. ಬೆಲೆಬಾಳುವ ವಸ್ತುಗಳ ಜೊತೆಗೆ ಲಾಕರ್‌ನಲ್ಲಿ 56.3 ಲಕ್ಷ ರೂಪಾಯಿ ನಗದು ಕಳೆದುಕೊಂಡಿದ್ದಾರೆ. ಬ್ಯಾಂಕರ್‌ಗಳು ಲಾಕರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸಹ ತಪ್ಪಾಗಿ ಇರಿಸಿದ್ದಾರೆ ಎಂದು ಈಶ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com