ಬಿಟಿಆರ್: ಕ್ಯಾಮರಾ ಟ್ರ್ಯಾಪ್ ನೊಂದಿಗೆ ಹುಲಿಗಳ ಚಲನವಲನದ ಮೇಲೆ ಗ್ರಾಮಸ್ಥರಿಗೆ ಮಾಹಿತಿ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ಬಿಟಿಆರ್) ಕುಂದಕೆರೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಹುಲಿಯೊಂದು ಅರ್ಧ ತಿಂದು ಹಾಕಿದ್ದ  54 ವರ್ಷದ ಕುರಿಗಾಯಿ ಪತ್ತೆಯಾದ ನಂತರ ಅರಣ್ಯ ಇಲಾಖೆ ಮೀಸಲು ಪ್ರದೇಶದ ಒಳಗೆ ಅಥವಾ ಸುತ್ತಮುತ್ತ ವಾಸಿಸುವ ಜನರು ತಮ್ಮ ಪ್ರದೇಶಗಳಲ್ಲಿ ಓಡಾಡುವ ಹುಲಿಗಳ ಚಲನವಲನಗಳ ಬಗ್ಗೆ ಎಚ್ಚರಿಕೆ ನೀಡಲು ತಂತ್ರಜ್ಞಾನದ ಮೊರೆ ಹೋಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ಬಿಟಿಆರ್) ಕುಂದಕೆರೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಹುಲಿಯೊಂದು ಅರ್ಧ ತಿಂದು ಹಾಕಿದ್ದ  54 ವರ್ಷದ ಕುರಿಗಾಯಿ ಪತ್ತೆಯಾದ ನಂತರ ಅರಣ್ಯ ಇಲಾಖೆ ಮೀಸಲು ಪ್ರದೇಶದ ಒಳಗೆ ಅಥವಾ ಸುತ್ತಮುತ್ತ ವಾಸಿಸುವ ಜನರು ತಮ್ಮ ಪ್ರದೇಶಗಳಲ್ಲಿ ಓಡಾಡುವ ಹುಲಿಗಳ ಚಲನವಲನಗಳ ಬಗ್ಗೆ ಎಚ್ಚರಿಕೆ ನೀಡಲು ತಂತ್ರಜ್ಞಾನದ ಮೊರೆ ಹೋಗಿದೆ. 

ಹುಲಿಗಳ ಚಲನವಲನದ ಬಗ್ಗೆ ಗ್ರಾಮಸ್ಥರಲ್ಲಿ ಧೈರ್ಯ ಮೂಡಿಸಲು ಮತ್ತು ಯಾವುದೇ ಸಂಘರ್ಘವಾಗದಂತೆ  ನೋಡಿಕೊಳ್ಳಲು ಅರಣ್ಯ ಇಲಾಖೆ ಸರಣಿ ಕ್ಯಾಮೆರಾ ಟ್ರ್ಯಾಪ್‌ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪಂಜರಗಳನ್ನು ಕೂಡ ಹಾಕಲಾಗುವುದು ಎಂದು ಬಿಟಿಆರ್ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು. 

ಒಂದು ವೇಳೆ ಹುಲಿ ಅಲೆದಾಡುವುದು ಕಂಡುಬಂದಲ್ಲಿ ಅದನ್ನು ಸೆರೆಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು. ಈ ಸಂಬಂಧ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಮತ್ತು ಹುಲಿಗಳ ಬಗ್ಗೆ ಸ್ಥಳೀಯರು ಮತ್ತು ಪಂಚಾಯತ್‌ಗಳಿಗೆ ತಿಳಿಸುತ್ತೇವೆ. ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಂಚಾಯಿತಿ ಸದಸ್ಯರು ತೊಡಗಿಸಿಕೊಂಡಿದ್ದಾರೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. 

ಸೆರೆಹಿಡಿಯಲಾದ ಹುಲಿಗಳನ್ನು ಅರಣ್ಯದೊಳಗೆ  ಬಿಡುವ ಮೊದಲು ರೇಡಿಯೋ ಕಾಲರ್ ಮಾಡುವ ಯೋಜನೆಗಳಿವೆ. ಆದ್ದರಿಂದ ಅವುಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ ಮತ್ತು ಅವುಗಳ ಚಲನವಲನದ ಬಗ್ಗೆ ಮಾಹಿತಿಯನ್ನು ಸ್ಥಳೀಯರು ಮತ್ತು ಪಂಚಾಯತ್‌ಗಳಿಗೆ ನೀಡಬಹುದು ಎಂದರು. 

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ (ಎನ್‌ಟಿಆರ್‌) ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಮಾತನಾಡಿ, ಹುಲಿಗಳ ಚಲನವಲನದ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಕಟ್ಟೆಚ್ಚರ ವಹಿಸಲು ಮತ್ತು ಗಸ್ತು ನಡೆಸಲು ಹಗಲು ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಯೋಗ ಯಶಸ್ವಿಯಾಗಿದ್ದು, ಮಾನವ-ಆನೆ ಸಂಘರ್ಷ ತಗ್ಗಿಸಲು ಕೊಡಗಿನಲ್ಲಿ ಇದೇ ಮಾದರಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು. 

ಅರಣ್ಯ ಇಲಾಖೆಯು ಗಡಿ ಭಾಗದಲ್ಲಿ ಸಂಚರಿಸುವ ಹುಲಿಗಳ ಹೊರತಾಗಿ ವಾಸವಾಗಿರುವ ಹುಲಿಗಳ ಗಣತಿ ಕಾರ್ಯಕ್ಕೂ ಮುಂದಾಗಿದೆ. ಈ ಯೋಜನೆ ಕುರಿತು ಗೌಪ್ಯವಾಗಿಟ್ಟಅರಣ್ಯ ಅಧಿಕಾರಿಯೊಬ್ಬರು, ಜನರು ತಮ್ಮ ಜಾನುವಾರುಗಳನ್ನು ಮೇಯಿಸಲು ಅರಣ್ಯಕ್ಕೆ ಪ್ರವೇಶಿಸಿದಾಗ ಮತ್ತು ದಾಳಿ ನಡೆದಾಗ, ಹುಲಿಯನ್ನು ಹಿಡಿದು ರಕ್ಷಣಾ ಕೇಂದ್ರಗಳಿಗೆ ಕಳುಹಿಸಲು ಒತ್ತಾಯಿಸಲಾಗುತ್ತದೆ ಎಂದರು. 

"ಇದನ್ನು ಕಡಿಮೆ ಮಾಡಲು, ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಕಚೇರಿ ಹಾಗೂ ವ್ಯಾಪ್ತಿಯ ಅರಣ್ಯಾಧಿಕಾರಿಗಳ ಕಚೇರಿಗಳಲ್ಲಿ ಕ್ಯಾಮೆರಾಗಳು ತೆಗೆದ ಚಿತ್ರಗಳು ದಾಖಲಾಗುತ್ತವೆ. ಹುಲಿಗಳ ಚಲನವಲನದ ಮೇಲೆ ನಿಗಾ ಇಡಲು ಅರಣ್ಯಾಧಿಕಾರಿಗಳ ತಂಡಗಳಿಗೆ ಈ ಚಿತ್ರಗಳು ನೆರವಾಗುತ್ತವೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com