'ಶಕ್ತಿ ಯೋಜನೆ'ಯಿಂದ ಹೆಚ್ಚಿದ ಬೇಡಿಕೆ: ಕೆಎಸ್ ಆರ್ ಟಿಸಿಯಿಂದ 350 ಹೊಸ ಬಿಎಸ್ VI ಎಕ್ಸ್ ಪ್ರೆಸ್ ಬಸ್ಸುಗಳ ಸೇರ್ಪಡೆ

ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚುತ್ತಿರುವ ಸರ್ಕಾರಿ ಬಸ್‌ಗಳ ಬೇಡಿಕೆಯನ್ನು ಪೂರೈಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 350 ಬಿಎಸ್ VI ಎಕ್ಸ್‌ಪ್ರೆಸ್ ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸಲಿದೆ. ಬಸ್ ಸಂಚಾರಕ್ಕೆ ಕೊರತೆಯಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಬಸ್‌ಗಳನ್ನು ನಿಯೋಜಿಸಲಾಗುವುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚುತ್ತಿರುವ ಸರ್ಕಾರಿ ಬಸ್‌ಗಳ ಬೇಡಿಕೆಯನ್ನು ಪೂರೈಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 350 ಬಿಎಸ್ VI ಎಕ್ಸ್‌ಪ್ರೆಸ್ ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸಲಿದೆ. ಬಸ್ ಸಂಚಾರಕ್ಕೆ ಕೊರತೆಯಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಬಸ್‌ಗಳನ್ನು ನಿಯೋಜಿಸಲಾಗುವುದು.

ಕೋವಿಡ್‌ ಸೋಂಕಿನ ನಂತರ ಬಸ್‌ ನಿಗಮದ ಸೇವೆಗಳು ಭಾರಿ ನಷ್ಟವನ್ನು ಅನುಭವಿಸಿವೆ. ನಾವು ಯಾವುದೇ ಹೊಸ ಬಸ್‌ಗಳನ್ನು ಖರೀದಿಸದೆ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದೇವೆ. ಆದಾಗ್ಯೂ, ಜೂನ್‌ನಲ್ಲಿ ಶಕ್ತಿ ಯೋಜನೆಯನ್ನು ಪ್ರಾರಂಭಿಸಿದ ನಂತರ, ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳ ಸೇವೆಗಳಿಗೆ ದೊಡ್ಡ ಬೇಡಿಕೆಯಿದೆ. ಈಗಿರುವ ಬಸ್ಸುಗಳಿಂದ ಬೇಡಿಕೆಯನ್ನು ನಿಭಾಯಿಸುವುದು ಕಷ್ಟ ಎನ್ನುತ್ತಾರೆ ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿಯೊಬ್ಬರು. 

ಪ್ರಸ್ತುತ, ರಾಜ್ಯದ ನಾಲ್ಕು ಬಸ್ ನಿಗಮಗಳು - ಕೆಎಸ್ ಆರ್ ಟಿಸಿ, ಕೆಕೆಆರ್ ಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಬಿಎಂಟಿಸಿ - ಒಟ್ಟಾರೆಯಾಗಿ, ಕರ್ನಾಟಕದಲ್ಲಿ 24,352 ಬಸ್‌ಗಳನ್ನು ನಿರ್ವಹಿಸುತ್ತವೆ, ಪ್ರತಿ ದಿನ ಒಟ್ಟು 66.98 ಲಕ್ಷ ಕಿ.ಮೀ ಸಂಚರಿಸುತ್ತವೆ.ನಾವು 350 ಬಿಎಸ್ VI ಬಸ್‌ಗಳ ಖರೀದಿಗೆ ಟೆಂಡರ್‌ಗಳನ್ನು ಕರೆದಿದ್ದೇವೆ, ಇದನ್ನು ಹೆಚ್ಚಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳ ಬೇಡಿಕೆಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, 10 ಲಕ್ಷ ಕಿಮೀ ಸಂಚಾರ ದಾಟಿದ 700 ಹಳೆಯ ಬಸ್‌ಗಳನ್ನು ನವೀಕರಿಸಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ನಾವು 3 ಲಕ್ಷ ರೂಪಾಯಿಗೆ ಹಳೆಯ ಬಸ್‌ಗಳನ್ನು ನವೀಕರಿಸಿದ್ದೇವೆ ಎಂದು ಹೇಳಿದರು. ಹೊಸ ಬಸ್‌ಗೆ 40 ಲಕ್ಷ ರೂಪಾಯಿಯಾಗುತ್ತವೆ. 

ಟಿಕೆಟ್ ರಹಿತ ಪ್ರಯಾಣಕ್ಕೆ ವಿಧಿಸಿದ ದಂಡದಿಂದ ಕೆಎಸ್‌ಆರ್‌ಟಿಸಿ 5.25 ಲಕ್ಷ ಸಂಗ್ರಹ:ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿ 5.25 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಬಸ್ ನಿಗಮದಿಂದ ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್‌ನಲ್ಲಿ 42,833 ಬಸ್‌ಗಳನ್ನು ತಪಾಸಣೆ ನಡೆಸಿದ ತಪಾಸಣಾ ಸಿಬ್ಬಂದಿ 3,285 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ತಪಾಸಣಾ ಸಿಬ್ಬಂದಿ 3,279 ಕಳ್ಳತನ ಪ್ರಕರಣಗಳನ್ನು ಗುರುತಿಸಿದ್ದು, ಬಸ್ ನಿಗಮಕ್ಕೆ 74,334 ರೂಪಾಯಿ ನಷ್ಟವಾಗಿದೆ. ಕಳ್ಳತನಕ್ಕೆ ಅವಕಾಶ ನೀಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com