ಕೊಡಗು: ಗ್ರಾಮ ಪಂಚಾಯಿತಿಯಲ್ಲಿ ಎಸ್‌ಸಿ, ಎಸ್‌ಟಿ ಕಲ್ಯಾಣ ನಿಧಿ ದುರ್ಬಳಕೆ ಆರೋಪ

 ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಎಸ್‌ಸಿ, ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಂಡು ಆರೋಪಿಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಮನೆ ಮುಂದಿನ ಕಾಂಪೌಂಡ್
ಗ್ರಾಮ ಪಂಚಾಯಿತಿ ಮನೆ ಮುಂದಿನ ಕಾಂಪೌಂಡ್

ಮಡಿಕೇರಿ:  ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಎಸ್‌ಸಿ, ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಂಡು ಆರೋಪಿಯಾಗಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಒಂಬಡ್ಸುಮನ್ ನೇತೃತ್ವದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ಪಂಚಾಯಿತಿ ಸದಸ್ಯ ಹಾಗೂ ಇತರ ಆರೋಪಿತ ಪಂಚಾಯಿತಿ ಅಧಿಕಾರಿಗಳಿಗೆ ದಂಡ ವಿಧಿಸಲು ಆದೇಶಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ  ಶೀಲಾ ತಿಮ್ಮಯ್ಯ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ನಿವಾಸಿಯಾಗಿದ್ದು, ಹಾಲಿ ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಇವರು ತಮ್ಮ ಪ್ರಭಾವ ಬಳಸಿಕೊಂಡು ಎಸ್‌ಸಿ/ಎಸ್‌ಟಿ ಕಲ್ಯಾಣ ನಿಧಿಯನ್ನು ಬಳಸಿಕೊಂಡು ತಮ್ಮ ನಿವಾಸಕ್ಕೆ ಕಾಂಪೌಂಡ್ ಗೋಡೆ ಮತ್ತು ಇಂಗು ಗುಂಡಿ ನಿರ್ಮಿಸಿದ್ದಾರೆ ಎಂಬ ಆರೋಪವಿದೆ. 2020-21 ಮತ್ತು 2021-22ರಲ್ಲಿ ಕೈಗೊಂಡ ಯೋಜನೆಯಲ್ಲಿ ನಕಲಿ ದಾಖಲೆ ಸಲ್ಲಿಸಿದ್ದರೂ ಸಹ ಅವರು ಇತರ ಪಂಚಾಯತ್ ಅಧಿಕಾರಿಗಳ ಬೆಂಬಲವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಪಂಚಾಯಿತಿ ನಿವಾಸಿ ಲಕ್ಷಯ್ಯ ಎಂಬುವರು ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಿದ್ದು, ಜಿಲ್ಲಾ ಪಂಚಾಯಿತಿ ಒಂಬುಡ್ಸ್ ಮನ್ ಗೆ ದೂರು ನೀಡಲಾಗಿದೆ. ದೂರಿನ ಮೇರೆಗೆ ಶೀಲಾ ಅವರು ಅಪ್ಪಣ್ಣ ಹಾಗೂ ಇತರೆ ಎಸ್‌ಸಿ ಸಮುದಾಯದ ನಿವಾಸಿಗಳಿಗೆ ತಡೆಗೋಡೆ ಹಾಗೂ  ಇಂಗು ಗುಂಡಿ ನಿರ್ಮಾಣಕ್ಕೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದೇ ರೀತಿ, 2020-21 ಮತ್ತು 2021-22ರಲ್ಲಿ ಮಹಾತ್ಮ ಗಾಂಧಿ ಎನ್‌ಆರ್‌ಇಜಿಎ ಯೋಜನೆಯಡಿ ನಡೆದ ಕಾಮಗಾರಿಗೆ ಇಂಗು ಗುಂಡಿ  ನಿರ್ಮಾಣಕ್ಕೆ ರೂ 12,947.66 ಮತ್ತು ರೂ 95,402 (ಕೂಲಿಗಾಗಿ ರೂ 56,100 ಮತ್ತು ಕಚ್ಚಾ ಸಾಮಗ್ರಿಗಳಿಗೆ ರೂ 39,302 ಸೇರಿದಂತೆ) ಬಳಸಲಾಗಿದೆ.

ಆದರೆ, ಪಂಚಾಯಿತಿ ಸದಸ್ಯೆ ಶೀಲಾ ಅವರ ವೈಯಕ್ತಿಕ ನಿವಾಸದಲ್ಲಿ ಕಾಂಪೌಂಡ್‌ ಗೋಡೆ ಹಾಗೂ ಇಂಗು ಗುಂಡಿ ನಿರ್ಮಿಸಿದ್ದು, ಈ ಕಾಮಗಾರಿಗೆ ನಕಲಿ ದಾಖಲೆ ಹಾಗೂ ಫೋಟೋಗಳನ್ನು ಸಲ್ಲಿಸಲಾಗಿದೆ. ಒಂಬುಡ್ಸ್‌ಪರ್ಸನ್ ನಡೆಸಿದ ತನಿಖೆಯ ನಂತರ ಇದು ಸಾಬೀತಾಗಿದೆ.

ಶೀಲಾ ಅವರ ಮನೆಯು ಎಸ್‌ಸಿ, ಎಸ್‌ಟಿ ಕಾಲೋನಿಗೆ ಹತ್ತಿರವೂ ಇಲ್ಲ ಮತ್ತು ಹಣವನ್ನು ದುರುಪಯೋಗ ಮಾಡುವ ಉದ್ದೇಶದಿಂದ ಎಲ್ಲಾ ಸುಳ್ಳು ದಾಖಲೆ  ಸಲ್ಲಿಸಲಾಗಿದೆ ಎಂದು ಒಂಬುಡ್ಸ್‌ಮನ್  ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದಲ್ಲದೆ, ಯೋಜನೆಗೆ ತಾಲೂಕು ಅಥವಾ ಜಿಲ್ಲಾ ಪಂಚಾಯಿತಿಯಿಂದ ಅಗತ್ಯ ಸಹಿ ಮತ್ತು ಅನುಮೋದನೆಗಳು ಬಂದಿಲ್ಲ ಎಂದು ವರದಿ ಹೇಳುತ್ತದೆ. ಆದರೆ, ಯೋಜನೆ ಆರಂಭಕ್ಕೂ ಮುನ್ನ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಎಂಜಿನಿಯರ್ ಸಹಿ ಮಾತ್ರ ಪಡೆಯಲಾಗಿದೆ.

ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಒಂಬುಡ್ಸ್‌ಮನ್  ಅವರು ಚೆನ್ನಯ್ಯನಕೋಟೆ ಪಂಚಾಯಿತಿಗೆ ಭೇಟಿ ನೀಡಿದ್ದು, ಕಾಂಪೌಂಡ್ ಗೋಡೆ ಮತ್ತು ಇಂಗು ಗುಂಡಿ ನಿರ್ಮಿಸಿದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಂಜನ್ ಸಿ, ಹಾಲಿ ಪಿಡಿಒ ಪ್ರಕಾಶ್ ಬಿ.ಸಿ, ತಾಂತ್ರಿಕ ಸಹಾಯಕ ಎಂಜಿನಿಯರ್, ವಿರಾಜಪೇಟೆ ತಾಲೂಕು ಪಂಚಾಯಿತಿಯ ಆಶಾ, ಪಂಚಾಯಿತಿ ಮಾಜಿ ಅಧ್ಯಕ್ಷೆ ಗಾಯತ್ರಿ ಎನ್‌ಜಿ ಹಾಗೂ ಹಾಲಿ ಅಧ್ಯಕ್ಷೆ ಗೀತಾ ಅಕ್ರಮ ಕಾಮಗಾರಿಗೆ ಅನುಮೋದನೆ ನೀಡಿದ ಆರೋಪ ಸಾಬೀತಾಗಿದೆ.

ಕಾನೂನುಬಾಹಿರ ಕೆಲಸಕ್ಕಾಗಿ ಶೀಲಾ ಹೊರತುಪಡಿಸಿ ಐವರು ಆರೋಪಿಗಳಿಗೆ ಯೋಜನಾ ವೆಚ್ಚ ಮತ್ತು ದಂಡವನ್ನು ಒಟ್ಟು 1,11,402 ರೂ. ದಂಡ ಪಾವತಿಸಲು ಒಂಬಡ್ಸುಮನ್ ಆದೇಶಿಸಿದ್ದಾರೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com