ರಾಜ್ಯದ ಸ್ವಂತ ತೆರಿಗೆ ಆದಾಯ ಶೇ.15ರಷ್ಟು ಹೆಚ್ಚಳ; ವಾಣಿಜ್ಯ ತೆರಿಗೆ ಸಂಗ್ರಹ 44,831 ಕೋಟಿ ರೂಪಾಯಿ

2023ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯ (SOTR) ಕಳೆದ ಆರ್ಥಿಕ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಶೇಕಡಾ 15 ರಷ್ಟು ಹೆಚ್ಚಾಗಿದೆ.
2023-24ನೇ ಸಾಲಿನ ಪೂರಕ ಅಂದಾಜುಗಳು (ಒಂದನೇ ಕಂತು) ಕುರಿತಂತೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
2023-24ನೇ ಸಾಲಿನ ಪೂರಕ ಅಂದಾಜುಗಳು (ಒಂದನೇ ಕಂತು) ಕುರಿತಂತೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು

ಬೆಳಗಾವಿ: 2023ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯ (SOTR) ಕಳೆದ ಆರ್ಥಿಕ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಶೇಕಡಾ 15 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಸೆಪ್ಟೆಂಬರ್ 2023 ರವರೆಗಿನ ರಾಜ್ಯದ ಸ್ವಂತ ಆದಾಯ ತೆರಿಗೆ ಸಂಗ್ರಹವು 76,885 ಕೋಟಿ ರೂಪಾಯಿಗಳಷ್ಟಿದೆ. ಇದು ಆರ್ಥಿಕ ವರ್ಷ 2024ರಲ್ಲಿ 1,73,303 ಕೋಟಿಗಳ ಬಜೆಟ್ ಅಂದಾಜಿನ 44 ಪ್ರತಿಶತದಷ್ಟಿದೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಚಳಿಗಾಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ರಾಜ್ಯದ ಹಣಕಾಸು ವರ್ಷದ ಮಧ್ಯಂತರ ಪರಿಶೀಲನೆಯ ಪ್ರಕಾರ, ಜಿಎಸ್‌ಟಿ ಪರಿಹಾರವನ್ನು ಹೊರತುಪಡಿಸಿ ವಾಣಿಜ್ಯ ತೆರಿಗೆ ಸಂಗ್ರಹವು 44,831 ಕೋಟಿ ರೂಪಾಯಿಗಳಾಗಿದ್ದು, ಇದು ಬಜೆಟ್ ಅಂದಾಜಿನ ಶೇಕಡಾ 45ರಷ್ಟಾಗಿದೆ. ರಾಜ್ಯದ ಅಬಕಾರಿ ಸಂಗ್ರಹ 16,611 ಕೋಟಿ ರೂಪಾಯಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕ 9,344 ಕೋಟಿ ರೂಪಾಯಿಗಳಾಗಿದ್ದು, ಮೋಟಾರು ವಾಹನ ತೆರಿಗೆ 5,244 ಕೋಟಿ ರೂಪಾಯಿಗಳು ಹಾಗೂ ಇತರೆ ಸಂಗ್ರಹ 855 ಕೋಟಿ ರೂಪಾಯಿಗಳಾಗಿದೆ. 

ಆರ್ಥಿಕ ವರ್ಷ 2024ರ ಮೊದಲಾರ್ಧದಲ್ಲಿ, ಒಟ್ಟು ಜಿಎಸ್ ಟಿ ಆದಾಯವು 33,818 ಕೋಟಿ ರೂಪಾಯಿಯಾಗಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಗ್ರಹಿಸಲಾದ 28,656 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ 1,191 ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರ ಸಿಕ್ಕಿದೆ. ಆದಾಗ್ಯೂ, ಆದಾಯವಲ್ಲದವುಗಳು ಗಣಿಗಾರಿಕೆ, ಬಡ್ಡಿ ಮತ್ತು ಇತರ ರಸೀದಿಗಳು ಸೇರಿ 6,519 ಕೋಟಿ ರೂಪಾಯಿಗಳಷ್ಟಾಗಿದೆ. ಇದು ಬಜೆಟ್ ಅಂದಾಜು 12,500 ಕೋಟಿ ರೂಪಾಯಿಗಳ ಶೇಕಡಾ 52ರಷ್ಟಾಗಿದೆ. 

ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರವು 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಅಂದಾಜು 37,252 ಕೋಟಿ ರೂಪಾಯಿಗಳ ವಿರುದ್ಧ 16,610 ಕೋಟಿ ರೂಪಾಯಿ ನೀಡಿದೆ. ಭಾರತ ಸರ್ಕಾರದಿಂದ ಅನುದಾನ ಮತ್ತು ಕೊಡುಗೆಯ ಸ್ವೀಕೃತಿಗಳು 13,005 ಕೋಟಿ ರೂ.ಪಾಯಿಗಳಾಗಿದ್ದು, ಈ ಪೈಕಿ ಕರ್ನಾಟಕಕ್ಕೆ 5,179 ಕೋಟಿ ರೂಪಾಯಿ ಸಿಕ್ಕಿದೆ. ಅದು ಬಜೆಟ್ ಅಂದಾಜಿನ ಶೇಕಡಾ 40ರಷ್ಟು ಬಂದಿದೆ.

ಆರ್ಥಿಕ ವರ್ಷ 2024ರ ಮೊದಲ ಆರು ತಿಂಗಳ ಆದಾಯ ವೆಚ್ಚವು 98,070 ಕೋಟಿ ರೂಪಾಯಿಗಳಾಗಿದ್ದು, ಇದು ಬಜೆಟ್ ಅಂದಾಜಿನ ಶೇಕಡಾ 39ರಷ್ಟಾಗಿದೆ. ಕಳೆದ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಆದಾಯ ವೆಚ್ಚದಲ್ಲಿ ಶೇ.13 ರಷ್ಟು ಬೆಳವಣಿಗೆ ಕಂಡುಬಂದಿದೆ. ಆದಾಯ ವೆಚ್ಚದ ಬಡ್ಡಿ ಪಾವತಿ 13,739 ಕೋಟಿ ರೂಪಾಯಿಗಳು. ಆದರೆ ರಾಜ್ಯದ ಬಂಡವಾಳ ವೆಚ್ಚವು 10,292 ಕೋಟಿ ರೂಪಾಯಿಗಳಷ್ಟಿದೆ, ಇದು ಬಜೆಟ್ ಅಂದಾಜಿನ ಶೇಕಡಾ 19ರಷ್ಟಾಗಿದೆ. ಸಾರ್ವಜನಿಕ ಸಾಲ ಸೇರಿದಂತೆ ಒಟ್ಟು ವೆಚ್ಚವು ಸೆಪ್ಟೆಂಬರ್ 2023 ರವರೆಗೆ 1,13,716 ಕೋಟಿ ರೂಪಾಯಿಗಳಾಗಿದೆ. 

ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆಯ ಪ್ರಕಾರ, ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇಕಡಾ 3 ರೊಳಗೆ ಇರಬೇಕು, ಆದರೆ ರಾಜ್ಯದ ಕೊರತೆಯು ಜಿಎಸ್‌ಡಿಪಿಯ ಶೇಕಡಾ 2.6 ಎಂದು ಅಂದಾಜಿಸಲಾಗಿದೆ, ಇದು ಆರ್ಥಿಕ ವರ್ಷ 2024ಕ್ಕೆ 66,646 ರೂಪಾಯಿಗಳಾಗಿದೆ. ಮೊದಲಾರ್ಧದಲ್ಲಿ ರಾಜ್ಯದ ವಿತ್ತೀಯ ಕೊರತೆ 3.119 ಕೋಟಿ ರೂಪಾಯಿಗಳಾಗಿದೆ.

ಬಜೆಟ್ ಅಂದಾಜಿನ ಪ್ರಕಾರ ಜಿಎಸ್ ಡಿಪಿಗೆ ಒಟ್ಟು ಬಾಕಿಯಿರುವ ಹೊಣೆಗಾರಿಕೆಗಳು (TOL) ಶೇಕಡಾ 22.3, ಇದು ಕೆಎಫ್ ಆರ್ ಕಾಯಿದೆಯ ಅಡಿಯಲ್ಲಿ ಕಡ್ಡಾಯಗೊಳಿಸಲಾದ ಶೇಕಡಾ 25 ರ ಮಿತಿಯಲ್ಲಿದೆ. ಆರ್ಥಿಕ ವರ್ಷ 2024ರಲ್ಲಿ 5,71,665 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ರಾಜ್ಯದ ಟಿಒಎಲ್ ಆರ್ಥಿಕ ವರ್ಷ 2023ರಲ್ಲಿ 5,22,847 ಕೋಟಿ ರೂಪಾಯಿಗಳಾಗಿದೆ. ರಾಜ್ಯವು ವರ್ಷದ ಮೊದಲಾರ್ಧದಲ್ಲಿ ಮುಕ್ತ ಮಾರುಕಟ್ಟೆಯಿಂದ ಯಾವುದೇ ಸಾಲವನ್ನು ಪಡೆದಿಲ್ಲ. ಅದರ ಬಜೆಟ್ ಒಟ್ಟು ಸಾಲವು 78,353 ಕೋಟಿ ರೂಪಾಯಿಗಳಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com