ಚಿತ್ರದುರ್ಗದಲ್ಲಿ ಯುದ್ಧ ಡ್ರೋನ್ 'ಘಾತಕ್'​ ಹಾರಾಟ ಪ್ರಯೋಗ ಯಶಸ್ವಿ!

ತಂತ್ರಜ್ಞಾನದ ಯಶಸ್ವಿ ಪ್ರಯೋಗವು ದೇಶದಲ್ಲಿ ತಂತ್ರಜ್ಞಾನದ ಸನ್ನದ್ಧತೆಯ ಪರಿಪಕ್ವತೆಗೆ ಸಾಕ್ಷಿಯಾಗಿದೆ. ಇದರೊಂದಿಗೆ, ಟೇಲ್​ಲೆಸ್ ಕಾನ್ಫಿಗರೇಷನ್​​ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ನಿಯಂತ್ರಣಗಳನ್ನು ಕರಗತ ಮಾಡಿಕೊಂಡಿರುವ ದೇಶಗಳ ಎಲೈಟ್ ಕ್ಲಬ್‌ಗೆ ಭಾರತವು ಸೇರಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ದೇಶೀಯ ನಿರ್ಮಿತ, ಅತಿವೇಗದಲ್ಲಿ ಹಾರಾಟ ನಡೆಸಬಲ್ಲ ಡ್ರೋನ್ (ಮಾನವರಹಿತ ವೈಮಾನಿಕ ವಾಹನ ಅಥವಾ UAV) ಸಂಬಂಧಿತ ತಂತ್ರಜ್ಞಾನದ ಯಶಸ್ವಿ ಪ್ರಯೋಗ ನಡೆಸಿದೆ. 'ಘಾತಕ್' ಹೆಸರಿನ ಭಾರತದ ರಹಸ್ಯ ಯುದ್ಧ ಡ್ರೋನ್‌ಗಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ತಂತ್ರಜ್ಞಾನದ ಯಶಸ್ವಿ ಪ್ರಯೋಗವು ದೇಶದಲ್ಲಿ ತಂತ್ರಜ್ಞಾನದ ಸನ್ನದ್ಧತೆಯ ಪರಿಪಕ್ವತೆಗೆ ಸಾಕ್ಷಿಯಾಗಿದೆ. ಇದರೊಂದಿಗೆ, ಟೇಲ್​ಲೆಸ್ ಕಾನ್ಫಿಗರೇಷನ್​​ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ನಿಯಂತ್ರಣಗಳನ್ನು ಕರಗತ ಮಾಡಿಕೊಂಡಿರುವ ದೇಶಗಳ ಎಲೈಟ್ ಕ್ಲಬ್‌ಗೆ ಭಾರತವು ಸೇರಿಕೊಂಡಿದೆ ಎಂದು ಡಿಆರ್​​ಡಿಒ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಯುಎವಿಯನ್ನು ಡಿಆರ್​​ಡಿಒದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಈ ಯುಎವಿ ಮೊದಲ ಹಾರಾಟವನ್ನು ಜುಲೈ 2022 ರಲ್ಲಿ ನಡೆಸಲಾಗಿತ್ತು. ನಂತರ ಎರಡು ಆಂತರಿಕವಾಗಿ ತಯಾರಿಸಿದ ಮೂಲಮಾದರಿಗಳನ್ನು ಬಳಸಿಕೊಂಡು ವಿವಿಧ ಅಭಿವೃದ್ಧಿ ಸಂರಚನೆಗಳಲ್ಲಿ ಆರು ಹಾರಾಟ ಪ್ರಯೋಗಗಳನ್ನು ನಡೆಸಲಾಗಿತ್ತು.

ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹಗುರವಾದ ಕಾರ್ಬನ್ ಪ್ರಿಪ್ರೆಗ್ ಸಂಯುಕ್ತ ವಸ್ತುಗಳೊಂದಿಗೆ ತಯಾರಿಸಲ್ಪಟ್ಟಿದೆ. ಅಲ್ಲದೆ, ಆರೋಗ್ಯ ಮೇಲ್ವಿಚಾರಣೆಗಾಗಿ ಫೈಬರ್ ಇಂಟ್ರಗೇಟರ್‌ಗಳೊಂದಿಗೆ ಸಂಯೋಜಿತ ರಚನೆಯು ಏರೋಸ್ಪೇಸ್ ತಂತ್ರಜ್ಞಾನದಲ್ಲಿ 'ಆತ್ಮನಿರ್ಭರ'ದ ಪ್ರದರ್ಶನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಶಸ್ವಿ ಪ್ರಯೋಗಕ್ಕಾಗಿ ಡಿಆರ್‌ಡಿಒ, ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ಅಂತಹ ನಿರ್ಣಾಯಕ ತಂತ್ರಜ್ಞಾನಗಳ ಯಶಸ್ವಿ ಅಭಿವೃದ್ಧಿಯು ಸ್ಥಳೀಯವಾಗಿ ಸಶಸ್ತ್ರ ಪಡೆಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಆರ್ & ಡಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ ಸಮೀರ್ ವಿ ಕಾಮತ್ ಅವರು ಡಿಆರ್‌ಡಿಒ ಮತ್ತು ಈ ಯಶಸ್ವಿ ಹಾರಾಟ ಪ್ರಯೋಗಕ್ಕೆ ಸಂಬಂಧಿಸಿದ ತಂಡಗಳನ್ನು ಅಭಿನಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com