ಸಂಸತ್ತು ಭದ್ರತಾ ಲೋಪ ಘಟನೆ: ಯೋಜನೆ ಕೈಗೂಡದಿದ್ದರೆ ಪ್ಲಾನ್ ಬಿ ಸಿದ್ಧವಾಗಿತ್ತು- ಮಾಸ್ಟರ್ ಮೈಂಡ್ ಲಲಿತ್ ಝಾ

ಮೊನ್ನೆ ಬುಧವಾರ ಸಂಸತ್ತಿನ ಲೋಕಸಭೆಯೊಳಗೆ ನುಗ್ಗಿ ಭದ್ರತೆ ಉಲ್ಲಂಘನೆ ಮಾಡಿದ ಪ್ರಕರಣದ ಮಾಸ್ಟರ್ ಮೈಂಡ್ ಒಂದು ವೇಳೆ ತಮ್ಮ ಯೋಜನೆ ಕೈಗೂಡದಿದ್ದರೆ ಪ್ಲಾನ್ ಬಿ ಹೊಂದಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ಮಾಸ್ಟರ್ ಮೈಂಡ್ ಲಲಿತಾ ಝಾ(ಸಂಗ್ರಹ ಚಿತ್ರ)
ಮಾಸ್ಟರ್ ಮೈಂಡ್ ಲಲಿತಾ ಝಾ(ಸಂಗ್ರಹ ಚಿತ್ರ)
Updated on

ನವದೆಹಲಿ/ಬೆಂಗಳೂರು: ಮೊನ್ನೆ ಬುಧವಾರ ಸಂಸತ್ತಿನ ಲೋಕಸಭೆಯೊಳಗೆ ನುಗ್ಗಿ ಭದ್ರತೆ ಉಲ್ಲಂಘನೆ ಮಾಡಿದ ಪ್ರಕರಣದ ಮಾಸ್ಟರ್ ಮೈಂಡ್ ಒಂದು ವೇಳೆ ತಮ್ಮ ಯೋಜನೆ ಕೈಗೂಡದಿದ್ದರೆ ಪ್ಲಾನ್ ಬಿ ಹೊಂದಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ತಮ್ಮ ಸಹಚರರು ಸಂಸತ್ತಿಗೆ ತೆರಳಲು ಸಾಧ್ಯವಾಗದಿದ್ದಲ್ಲಿ ತಂಡವು ‘ಪ್ಲಾನ್ ಬಿ’ ಹೊಂದಿತ್ತು ಎಂದು ಭದ್ರತಾ ಉಲ್ಲಂಘನೆಯ ಹಿಂದಿನ ಮಾಸ್ಟರ್ ಮೈಂಡ್ ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ.

ಪ್ಲಾನ್ ಬಿ ಪ್ರಕಾರ, ಇನ್ನಿಬ್ಬರು ಮಾಧ್ಯಮದವರ ಮುಂದೆ ಪಟಾಕಿ ಮತ್ತು ಬಣ್ಣದ ಡಬ್ಬಿಗಳನ್ನು ಸಿಡಿಸುತ್ತಾ ಮತ್ತೊಂದು ದಿಕ್ಕಿನಿಂದ ಕಟ್ಟಡವನ್ನು ಸಮೀಪಿಸಬೇಕಿತ್ತು ಎಂದು ಲಲಿತ್ ಝಾ ವಿಚಾರಣೆ ವೇಳೆ ತಿಳಿಸಿದ್ದಾನೆ. ಅಂತಿಮವಾಗಿ, ಅಮೋಲ್ ಶಿಂಧೆ ಮತ್ತು ನೀಲಮ್ ದೇವಿ ಅವರು ಸಂಸತ್ತಿನ ಕಟ್ಟಡಕ್ಕೆ ಬಂದಿದ್ದರಿಂದ ಪ್ಲಾನ್ ಬಿಯನ್ನು ಕಾರ್ಯಗತಗೊಳಿಸುವ ಅಗತ್ಯವಿರಲಿಲ್ಲ, ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದರು ಮತ್ತು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಇನ್ನಿಬ್ಬರು ಒಳನುಗ್ಗುವ ಸಮಯದಲ್ಲಿ ಘೋಷಣೆಗಳನ್ನು ಕೂಗಿದರು. ಬ್ಯಾಕ್ ಅಪ್ ಯೋಜನೆಯ ಭಾಗವಾಗಿದ್ದ ಇನ್ನಿಬ್ಬರನ್ನು ಮಹೇಶ್ ಮತ್ತು ಕೈಲಾಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಈಗ ದೆಹಲಿ ಪೊಲೀಸರ ವಶದಲ್ಲಿದ್ದಾರೆ.

ನಿನ್ನೆ ಶುಕ್ರವಾರ ಸ್ಥಳೀಯ ನ್ಯಾಯಾಲಯವು ಝಾನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಝಾ ಮತ್ತು ಇತರ ನಾಲ್ವರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಭಯೋತ್ಪಾದನೆ ಆರೋಪಗಳಡಿ ಕೇಸು ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ. 

ಲೋಕಸಭೆಗೆ ಪ್ರವೇಶಿಸಿದ ಇಬ್ಬರು ಅತಿಕ್ರಮಣಕಾರರಾದ ಮನೋರಾಜನ್ ಡಿ ಮತ್ತು ಸಾಗರ್ ಶರ್ಮಾ ಅವರು ತ್ರಿವರ್ಣ ಧ್ವಜದ ಹಿನ್ನೆಲೆಯಲ್ಲಿ ಮುಷ್ಟಿಯ ಚಿತ್ರ, ಹಿಂದಿಯಲ್ಲಿ ಘೋಷಣೆ ಮತ್ತು ಮಣಿಪುರ ಹಿಂಸಾಚಾರದ ವಿಷಯದ ಕುರಿತು ಇಂಗ್ಲಿಷ್‌ನಲ್ಲಿ ಘೋಷಣೆ ಮಾಡುತ್ತಿದ್ದರು. ಮನೋರಂಜನ್ ಅವರು 2016 ರಲ್ಲಿ ಕಾಂಬೋಡಿಯಾಕ್ಕೆ ಭೇಟಿ ನೀಡಿ ಅಲ್ಲಿ ಒಂದು ವರ್ಷ ತಂಗಿದ್ದನು. 

ಉದ್ಯೋಗಕ್ಕಾಗಿ ಹೋಗುವುದಾಗಿ ಅವರ ಕುಟುಂಬಕ್ಕೆ ಹೇಳಿದ್ದರು, ಆದರೆ ಕೆಲಸದ ಸ್ವರೂಪ ಅಥವಾ ಆ ದೇಶಕ್ಕೆ ಅವರ ಭೇಟಿಯ ವಿವರಗಳು ಯಾರಿಗೂ ತಿಳಿದಿಲ್ಲ" ಎಂದು ಮೂಲವೊಂದು ತಿಳಿಸಿದೆ. ಮನೋರಂಜನ್ ತರಬೇತಿಯಿಂದ ಇಂಜಿನಿಯರ್ ಆಗಿದ್ದಾರೆ. ಅವರ ಸಹಚರ ಸಾಗರ್ ಶರ್ಮಾ ಅವರು ಈ ಹಿಂದೆ ಮೈಸೂರಿನಲ್ಲಿ ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ, ಮೈಸೂರಿನಲ್ಲಿ ಸಂಪೂರ್ಣ ಸಂಚು ರೂಪಿಸಿರಬಹುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com