

ರಾಯಚೂರು: ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ಡಿ ವಜ್ಜಲ್ ಅವರ ಪುತ್ರ ಶ್ರೀಮಂತರಾಯ ವಜ್ಜಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಾನಪ್ಪ ಅವರ ದ್ವಿತೀಯ ಪುತ್ರ 33 ವರ್ಷದ ಶ್ರೀಮಂತ್ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಶ್ರೀಮಂತ್ ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶ್ರೀಮಂತರಾಯ ಮೃತದೇಹವನ್ನು ಲಿಂಗಸುಗೂರಿಗೆ ರವಾನೆ ಮಾಡಲಾಗುತ್ತಿದ್ದು ಇಂದು ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಶಾಸಕರ ಜಮೀನಿನಲ್ಲಿ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ.
Advertisement