ಡಿ.21-22ರಿಂದ ರಾಜ್ಯಾದ್ಯಂತ ಕೆಎಂಎಫ್ ನಿಂದ ಎಮ್ಮೆ ಹಾಲು ಮಾರಾಟ

ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಹಾಲು ಒಕ್ಕೂಟ (KMF) ಎಮ್ಮೆಯ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ. ಡಿಸೆಂಬರ್ 21 ಮತ್ತು 22 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ಎಮ್ಮೆಯ ಹಾಲು ಮಾರಾಟ ಪ್ರಾರಂಭವಾಗಲಿದ್ದು, ಅದರ ಬೆಲೆ ಲೀಟರ್ ಗೆ ಸುಮಾರು 70-75 ರೂಪಾಯಿಗಳಾಗಿರುತ್ತವೆ.
ಕೆಎಂಎಫ್
ಕೆಎಂಎಫ್

ಬೆಂಗಳೂರು: ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಹಾಲು ಒಕ್ಕೂಟ (KMF) ಎಮ್ಮೆಯ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ. ಡಿಸೆಂಬರ್ 21 ಮತ್ತು 22 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ಎಮ್ಮೆಯ ಹಾಲು ಮಾರಾಟ ಪ್ರಾರಂಭವಾಗಲಿದ್ದು, ಅದರ ಬೆಲೆ ಲೀಟರ್ ಗೆ ಸುಮಾರು 70-75 ರೂಪಾಯಿಗಳಾಗಿರುತ್ತವೆ. ಅಂತಿಮ ಬೆಲೆ ಇನ್ನೂ ನಿರ್ಧಾರವಾಗಿಲ್ಲ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ, ಕೆಎಂಎಫ್ ಸುಮಾರು 4,000-5,000 ಲೀಟರ್ ಎಮ್ಮೆ ಹಾಲನ್ನು ಮಾರಾಟ ಮಾಡುತ್ತಿತ್ತು, ನಂತರ ಪೂರೈಕೆ ಕೊರತೆಯಿಂದಾಗಿ ಸ್ಥಗಿತಗೊಂಡಿತು. ಮಾರಾಟ ಮತ್ತು ಸರಬರಾಜುಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಮತ್ತು ಹಸುವಿನ ಹಾಲು ಮತ್ತು ಅದರ ಉತ್ಪನ್ನಗಳೊಂದಿಗೆ ಎಮ್ಮೆ ಹಾಲಿಗೆ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಎಲ್ಲಾ ಒಕ್ಕೂಟಗಳಲ್ಲಿ ಹಾಲು ಪೂರೈಸಲು ಸಾಕಷ್ಟು ಎಮ್ಮೆಗಳಿಲ್ಲದ ಕಾರಣ ವಿಜಯಪುರ ಮತ್ತು ಬೆಳಗಾವಿಯ ರೈತರಿಂದ ಹಾಲು ಖರೀದಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳಿದ್ದು, ಅಲ್ಲಿಂದಲೇ ಹಾಲು ಸಂಗ್ರಹಿಸಲಾಗುವುದು. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಸಂಗ್ರಹಣೆ ಹೆಚ್ಚಲಿದೆ ಎಂದು ಜಗದೀಶ್ ತಿಳಿಸಿದರು.

ಹಾಲು ಪೂರೈಕೆಯಲ್ಲಿ ಇತರೆ ಬ್ರಾಂಡ್‌ಗಳಿಂದ ಪೈಪೋಟಿ ಹೆಚ್ಚುತ್ತಿದ್ದು, ನಂದಿನಿ ಮತ್ತು ಕೆಎಂಎಫ್ ಯಾವುದೇ ಉತ್ಪನ್ನದಲ್ಲಿ ಹಿಂದುಳಿಯಲು ಬಯಸುವುದಿಲ್ಲ. ತುಪ್ಪ, ಹಾಲು ಪೂರೈಕೆಗೆ ಈಗಾಗಲೇ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು. 

ಖಾಸಗಿ ಮತ್ತು ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಿಂದ ನಮಗೆ ಹಾಲು, ತುಪ್ಪ ಮತ್ತು ಬೆಣ್ಣೆಗಾಗಿ ಬೇಡಿಕೆ ಬರುತ್ತಿವೆ. ನಾವು ತಾಂತ್ರಿಕ ವಿವರಗಳಲ್ಲಿ ಅರ್ಹತೆ ಹೊಂದಿದ್ದೇವೆ, ಆದರೆ ಹಣಕಾಸಿನ ಬಿಡ್‌ಗಳಲ್ಲಿ ಕಳೆದುಕೊಳ್ಳುತ್ತೇವೆ. ಲಡ್ಡುಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಬೋರ್ಡ್‌ಗೆ ತುಪ್ಪವನ್ನು ಪೂರೈಸುವ ಬಿಡ್ ಇತ್ತೀಚೆಗೆ ಕೈತಪ್ಪಿ ಹೋಗಿತ್ತು ಎಂದು ಅಧಿಕಾರಿ ಹೇಳುತ್ತಾರೆ. ಕೆಎಂಎಫ್ ಈಗ ಪ್ರತಿದಿನ 46 ಲಕ್ಷ ಲೀಟರ್ ಹಾಲು ಮತ್ತು 10 ಲಕ್ಷ ಲೀಟರ್ ಮೊಸರನ್ನು ರಾಜ್ಯ ಮತ್ತು ಗಡಿಯಾದ್ಯಂತ ಮಾರಾಟ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com